ISRO Mission: ಇಸ್ರೋ ಇತಿಹಾಸ ಬರೆಯಲು ಕ್ಷಣಗಣನೆ ಆರಂಭ, ದಿನಾಂಕ & ಸಮಯ ತಿಳಿಯಿರಿ!
ಇಸ್ರೋ ಹೆಮ್ಮೆಯ ಸಾಧನೆಗೆ ಕ್ಷಣಗಣನೆ ಆರಂಭವಾಗಿದೆ. ಚಂದ್ರನ ಮೇಲೆ ಅಧ್ಯಯನ ನಡೆಸಿ ನೀರು ಕಂಡುಹಿಡಿಯಲು ರೋವರ್ & ಉಪಗ್ರಹ ಉಡಾವಣೆ ಮಾಡಿದ್ದು, ಮಂಗಳ ಗ್ರಹದ ಅಧ್ಯಯನಕ್ಕಾಗಿ ಉಪಗ್ರಹ ಉಡಾವಣೆ ಮಾಡಿ ಭರ್ಜರಿ ಸಕ್ಸಸ್ ಕಂಡಿದ್ದು. ಸೂರ್ಯ ದೇವನ ಅಧ್ಯಯನಕ್ಕೆ ನೌಕೆ ಉಡಾಯಿಸಿದ್ದು, ಹೀಗೆ ಭಾರತೀಯರ ಹೆಮ್ಮೆಯಾದ ' ಇಸ್ರೋ' ನೂರಾರು ಸಾಧನೆ ಮಾಡಿದೆ. ಇದರ ಜೊತೆಗೆ ಇಂದು ಮತ್ತೊಂದು ಇತಿಹಾಸ ನಿರ್ಮಿಸಲು ಇಸ್ರೋ ಸಂಸ್ಥೆ ಸನ್ನದ್ಧವಾಗಿದೆ.
ಬಾಹ್ಯಾಕಾಶ ಅಧ್ಯಯನ ನಡೆಸುವುದು ಒಂದು ದೊಡ್ಡ ಸಾಧನೆ, ಯಾಕಂದ್ರೆ ಬಾಹ್ಯಾಕಾಶ ಕ್ಷೇತ್ರ ಇಡೀ ಜಗತ್ತಿನಲ್ಲೇ ಅತಿದೊಡ್ಡ ಕ್ಷೇತ್ರವಾಗಿದೆ. ಹೀಗೆ ಬಾಹ್ಯಾಕಾಶ ಎಂಬ ಅಂತ್ಯ ಇಲ್ಲದ ಜಾಗದಲ್ಲಿ ಭಾರತದ ಹೆಮ್ಮೆ 'ಇಸ್ರೋ' ಸಂಸ್ಥೆ ಬಹುದೊಡ್ಡ ಸಾಧನೆ ಮಾಡಿದೆ. ಹೀಗಿದ್ದಾಗ 'ಇಸ್ರೋ' ಇಂದು ಬಾಹ್ಯಾಕಾಶದಲ್ಲಿ 'ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್' ನೆಡಸಲು ಸಜ್ಜಾಗಿದೆ ಇದಕ್ಕಾಗಿ 2 ಉಪಗ್ರಹಗಳನ್ನು ಉಡಾವಣೆ ಮಾಡಲಿದೆ ಇಸ್ರೋ. ಹಾಗಾದರೆ ಉಡಾವಣೆ ಸಮಯ ಯಾವಾಗ? ಮುಂದೆ ಓದಿ.

ಬಾಹ್ಯಾಕಾಶ ಪ್ರಿಯರಿಗೆ ಭರ್ಜರಿ ಸುದ್ದಿ!
ಅಂತರಿಕ್ಷದಲ್ಲಿ 2 ಬಾಹ್ಯಾಕಾಶ ನೌಕೆಗಳ ಡಾಕಿಂಗ್ ಮತ್ತು ಅನ್‌ಡಾಕಿಂಗ್ ನಡೆಸಲು 'ಇಸ್ರೋ' ವಿಜ್ಞಾನಿಗಳು ಸಜ್ಜಾಗಿದ್ದಾರೆ. ಈ ಮೂಲಕ ಬಾಹ್ಯಾಕಾಶ ಅಂದ್ರೆ ಆಕಾಶದಲ್ಲಿ ಯಾವುದೇ ರೀತಿ ಮಾನವರ ಸಹಾಯ ಇಲ್ಲದೆ, 2 ಬಾಹ್ಯಾಕಾಶ ನೌಕೆಗಳನ್ನು ಒಂದಕ್ಕೊಂದು ಕೂಡಿಸುವುದು & ಬೇರೆ ಮಾಡುವ ಕೆಲಸವನ್ನು ಇಸ್ರೋ ಭೂಮಿ ಮೇಲಿಂದಲೇ ನಡೆಸಲಿದೆ. ಡಿಸೆಂಬರ್ 30ರ ರಾತ್ರಿ 10 ಗಂಟೆಗೆ 'ಇಸ್ರೋ' 2 ಉಪಗ್ರಹಗಳನ್ನು ಉಡಾವಣೆ ಮಾಡಲಿದ್ದು, ಉಪಗ್ರಹ ನಭಕ್ಕೆ ಅಂದ್ರೆ ಬಾಹ್ಯಾಕಾಶಕ್ಕೆ ಹಾರಲಿದೆ. ಇದಕ್ಕಾಗಿ ವಿಶೇಷ ತಂತ್ರಜ್ಞಾನ ಬಳಸಲು ಇಸ್ರೋ ಈಗ ಮುಂದಾಗಿದೆ.
ಬಾಹ್ಯಾಕಾಶ ನೌಕೆ ಜೋಡಿಸುವ ಕೆಲಸ!
2 ಬಾಹ್ಯಾಕಾಶ ನೌಕೆಗಳ ಡಾಕಿಂಗ್ ಮತ್ತು ಅನ್‌ಡಾಕಿಂಗ್ ಎಂದರೆ, 2 ಬಾಹ್ಯಾಕಾಶ ನೌಕೆಗಳನ್ನ ಒಂದಕ್ಕೊಂದು ಜೋಡಿಸುವುದು ಹಾಗೂ ಬೇರ್ಪಡಿಸುವ ಪ್ರಯೋಗವೇ ಆಗಿದೆ. ಈವರೆಗೂ ಈ ಸಾಧನೆ ಮಾಡಿದ್ದ ದೇಶಗಳ ಪೈಕಿ ಅಮೆರಿಕ, ರಷ್ಯಾ, ಚೀನಾ ಮಾತ್ರ ಮುನ್ನೆಲೆಯಲ್ಲಿ ಇದ್ದವು. ಆದರೆ ಇದೀಗ ಭಾರತ ಹೊಸ ಇತಿಹಾಸ ನಿರ್ಮಿಸಲು ಸಜ್ಜಾಗಿದ್ದು, 'ಇಸ್ರೋ' ಸಂಸ್ಥೆಯಿಂದ ನಡೆಯುತ್ತಿರುವ ಈ ಪ್ರಯೋಗ ಭಾರತೀಯರಿಗೆ ಹೆಮ್ಮೆ ತರಿಸುತ್ತಿದೆ.












Click it and Unblock the Notifications