ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೋದಿಂದ ಜಿಎಸ್‌ಎಲ್‌ವಿಎಂ-3 ರಾಕೆಟ್‌ ಉಡಾವಣೆ

|
Google Oneindia Kannada News

ಆಂಧ್ರಪ್ರದೇಶ, ಡಿ. 18 : ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಯ ಬಹುನಿರೀಕ್ಷಿತ ಜಿಎಸ್‌ಎಲ್‌ವಿಎಂ-3 ರಾಕೆಟ್‌ ಉಡಾವಣೆ ಯಶಸ್ವಿಯಾಗಿದೆ. ಗುರುವಾರ ಬೆಳಗ್ಗೆ 9.32 ಕ್ಕೆ ಶ್ರೀಹರಿಕೋಟಾದಿಂದ ಎಲ್‌ವಿಎಂ-3 ರಾಕೆಟ್‌ ಗಗನಕ್ಕೆ ಹಾರಿದೆ. ಸ್ಪೇಸ್‌ ಕ್ಯಾಪೂಲ್ಸ್‌ ಉಪಕರಣವನ್ನು ರಾಕೆಟ್‌ನೊಂದಿಗೆ ಉಡಾವಣೆ ಮಾಡಲಾಗಿದೆ. ಪ್ರಧಾನಿ ಮೋದಿ ಇಸ್ರೋದ ಸಾಧನೆಯನ್ನು ಅಭಿನಂದಿಸಿದ್ದಾರೆ.

ರಾಕೆಟ್ ಉಡಾವಣೆ ನಂತರ ಮಾತನಾಡಿದ ಇಸ್ರೋ ಅಧ್ಯಕ್ಷ ಪ್ರೊ.ಕೆ.ರಾಧಾಕೃಷ್ಣನ್ ಅವರು, ಮಾನವ ಸಹಿತ ಆಂತರಿಕ್ಷ ಯಾನ ಯೋಜನೆಯನ್ನು ಮುಂದಿನ ಎರಡು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದರು. ನಾವು ನಿಗದಿ ಪಡಿಸಿದ ದೂರವನ್ನು ರಾಕೆಟ್ ಕ್ರಮಿಸಿದೆ, ಮುಂದಿನ ಯೋಜನೆಗೆ ಇದು ಅಡಿಪಾಯ ಹಾಕಿಕೊಟ್ಟಿದೆ ಎಂದು ಹೇಳಿದರು. ಯೋಜನೆಯಲ್ಲಿ ತೊಡಗಿಸಿಕೊಂಡ ಎಲ್ಲಾ ವಿಜ್ಞಾನಿಗಳಿಗೆ ಅವರು ಅಭಿನಂದನೆ ಸಲ್ಲಿಸಿದರು.

ಪ್ರಧಾನಿ ಮೋದಿ ಅಭಿನಂದನೆ : ಇಸ್ರೋದ ಜಿಎಸ್‌ಎಲ್‌ವಿಎಂ-3 ರಾಕೆಟ್‌ ಉಡಾವಣೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದುದ್ದಾರೆ. ಈ ಕುರಿತು ಅವರು ಟ್ವಿಟ್ ಮಾಡಿದ್ದಾರೆ.

ಸಮಯ 9.32 : ಇಸ್ರೋದ ಬಹುನಿರೀಕ್ಷಿತ ಜಿಎಸ್‌ಎಲ್‌ವಿಎಂ-3 ರಾಕೆಟ್‌ ಉಡಾವಣೆ ಯಶಸ್ವಿಯಾಗಿ ಉಡಾವಣೆಗೊಂಡಿದೆ. ಗುರುವಾರ ಬೆಳಗ್ಗೆ 9.32ಕ್ಕೆ ಶ್ರೀಹರಿಕೋಟಾದಿಂದ ಜಿಎಸ್‌ಎಲ್‌ವಿಎಂ-3 ರಾಕೆಟ್‌ ಯಶಸ್ವಿಯಾಗಿ ಗಗನಕ್ಕೆ ಹಾರಿದೆ. 'ಸ್ಪೇಸ್‌ ಕ್ಯಾಪ್ಸೂಲ್‌' ಉಪಕರಣವನ್ನು ರಾಕೆಟ್‌ನೊಂದಿಗೆ ಉಡಾವಣೆ ಮಾಡಲಾಗಿದೆ.

ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ತನ್ನ ಯೋಜನೆಯ ಮೊದಲ ಹಂತವಾಗಿ 'ಕೇರ್‌' ಎಂಬ 3650 ಕೆಜಿ ತೂಕದ ಉಪಕರಣವನ್ನು (ಸ್ಪೇಸ್‌ ಕ್ಯಾಪ್ಸೂಲ್‌) ಇಸ್ರೋ, ಹಾರಿಬಿಟ್ಟಿದೆ. ಉಡ್ಡಯನದ 325 ಸೆಕೆಂಡ್‌ ಬಳಿಕ (126.16 ಕಿ.ಮೀ. ಎತ್ತರದಲ್ಲಿ) ಇದು ರಾಕೆಟ್‌ ಬೇರ್ಪಟ್ಟು ಬಂಗಾಳ ಕೊಲ್ಲಿಯಲ್ಲಿ ಬೀಳಲಿದೆ.

ಹಿಂದಿನ ಸುದ್ದಿ : ಮಂಗಳಯಾನದ ಯಶಸ್ಸಿನ ನಂತರ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಗುರುವಾರ ಮತ್ತೆರಡು ಐತಿಹಾಸಿಕ ಪ್ರಯೋಗ ನಡೆಸಲಿದೆ. ಜಿಎಸ್ಎಲ್‌ವಿಎಂ-3 ರಾಕೆಟ್‌ ಮತ್ತು ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸಿ ಅಲ್ಲಿಂದ ಮರಳಿ ಕರೆತರುವ 'ಸ್ಪೇಸ್‌ ಕ್ಯಾಪ್ಸೂಲ್‌' ಉಪಕರಣದ ಉಡಾವಣೆ ಮಾಡಲಿದೆ.

ಗುರುವಾರ ಬೆಳಗ್ಗೆ 9.32ಕ್ಕೆ ಶ್ರೀಹರಿಕೋಟಾದಿಂದ ಜಿಎಸ್‌ಎಲ್‌ವಿಎಂ-3 ರಾಕೆಟ್‌ ಅನ್ನು ಇಸ್ರೋ ಉಡ್ಡಯನ ಮಾಡಲಿದೆ. ಇದರ ಜೊತೆಗೆ ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸಿ ಅಲ್ಲಿಂದ ಮರಳಿ ಕರೆತರುವ 'ಸ್ಪೇಸ್‌ ಕ್ಯಾಪ್ಸೂಲ್‌' ಉಪಕರಣವೊಂದನ್ನೂ ಇಸ್ರೋ ಕಳುಹಿಸುತ್ತಿದೆ.

ISRO

4000-5000 ಕೆಜಿ ತೂಕದ ಸಂಪರ್ಕ ಉಪಗ್ರಹ ಹಾರಿಬಿಡಲು ಇಸ್ರೋ ಈಗಲೂ ವಿದೇಶಿ ರಾಕೆಟ್‌ ಅವಲಂಬಿಸಿದೆ. ಆದರೆ, ಇದೀಗ ಇಸ್ರೋ 630 ಟನ್‌ ಜಿಎಸ್‌ಎಲ್‌ವಿ ಮ್ಯಾಕ್‌ 3 ರಾಕೆಟ್‌ ಅಭಿವೃದ್ಧಿಪಡಿಸಿದ್ದು, ಭಾರಿ ತೂಕದ ಉಪಗ್ರಹ ಒಯ್ಯುವ ಶಕ್ತಿಯನ್ನು ಇದು ಹೊಂದಿದೆ.

Sriharikota
English summary
The Indian Space Research Organization (Isro) has launched India's most powerful and heaviest rocket GSLV Mk-III on Thursday at 9:32am from Sriharikota in Andhra Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X