3 ಆನ್‌ಲೈನ್ ಉಚಿತ ಕೋರ್ಸ್‌ಗಳನ್ನು ಆರಂಭಿಸಿದ ಇಸ್ರೋ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಮೂರು ಹೊಸ ಬಗೆಯ ಆನ್‌ಲೈನ್ ಕೋರ್ಸ್‌ಗಳನ್ನು ಆರಂಭಿಸಿದೆ.
ಈ ಕೋರ್ಸ್‌ಗಳನ್ನು ಪದವಿಪೂರ್ವ, ಸ್ನಾತಕೋತ್ತರ ವಿದ್ಯಾರ್ಥಿಗಳು ತೆಗೆದುಕೊಳ್ಳಬಹುದು. ಭೌಗೋಳಿಕ ಮಾಹಿತಿ ವ್ಯವಸ್ಥೆ, ಜಿಯೋ ಕಂಪ್ಯುಟೇಷನ್ ಮತ್ತು ಜಿಯೋ ವೆಬ್ ಕೋರ್ಸ್‌ಗಳಿಗೆ ಇಸ್ರೋ ಅರ್ಜಿಗಳನ್ನು ಸ್ವೀಕರಿಸುತ್ತಿದೆ.
ಇಸ್ರೋ ಘಟಕವು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ರಿಮೋಟ್ ಸೆನ್ಸಿಂಗ್ ಈ ಕೋರ್ಸನ್ನು ನಡೆಸಲಿದೆ. ಆನ್‌ಲೈನ್ ಕೋರ್ಸ್‌ಗಳು 7 ರಿಂದ 12 ದಿನಗಳ ಅವಧಿಯನ್ನು ಹೊಂದಿರುತ್ತವೆ. ಭಾಗವಹಿಸುವವರು ತಮ್ಮ ಆಯ್ಕೆ ಅಥವಾ ಲಭ್ಯವಿರುವ ಎಲ್ಲಾ ಕೋರ್ಸ್‌ಗಳಿಗೆ ನೋಂದಾಯಿಸಿಕೊಳ್ಳಬಹುದು.

1- ಜಿಯಾಗ್ರಫಿಕಲ್ ಇನ್‌ಫಾರ್ಮೇಷನ್ ಸಿಸ್ಟಂ
ಈ ಮೊದಲನೇ ಕೋರ್ಸ್‌ನಲ್ಲಿ ಭೂಗೋಳಶಾಸ್ತ್ರಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಿಚಾರಗಳನ್ನು ಹೇಳಿಕೊಡಲಾಗುತ್ತದೆ. ಭೂಗೋಳ ಶಾಸ್ತ್ರ ಹಾಗೂ ಇಸ್ರೋಗೆ ಸಂಬಂಧಿಸಿ ವಿಷಯವು ಈ ಕೋರ್ಸ್‌ಗಳಲ್ಲಿ ಇರಲಿವೆ. ಸೆಪ್ಟೆಂಬರ್ 28 ರಿಂದ ಆರಂಭವಾಗಿದ್ದು 15 ರವರೆಗೆ ಮೊದಲ ಕೋರ್ಸ್ ನಡೆಯಲಿದೆ.
2-ಬೇಸಿಕ್ಸ್ ಆಫ್ ಜಿಯೋ ಕಂಪ್ಯುಟೇಷನ್ ಆಂಡ್ ಜಿಯೋ ವೆಬ್ ಸರ್ವೀಸಸ್
ಎರಡನೇ ಕೋರ್ಸ್‌ನಲ್ಲಿ ಭೂಗೋಳ ಸಮೀಕರಣದ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಭೂಗೋಳ ಸಮೀಕರಣದ ತಂತ್ರಜ್ಞಾನ ಅದಕ್ಕೆ ಸಂಬಂಧಿಸಿದ ಅಪ್ಲಿಕೇಷನ್ , ಆನ್‌ಲೈನ್ ಜಿಐಎಸ್, ಜಿಯೋ ವೆಬ್ ಸೇರಿದಂತೆ ಇಸ್ರೋಗೆ ಸಂಬಂಧಿಸಿದ ಇತರೆ ವಿಚಾರಗಳನ್ನು ಈ ಕೋರ್ಸ್‌ನಲ್ಲಿ ಹೇಳಲಾಗುತ್ತದೆ. ಇದು 2 ವಾರಗಳ ಕೋರ್ಸ್ ಆಗಿದ್ದು ಅಕ್ಟೋಬರ್ 19 ರಿಂದ ಅಕ್ಟೋಬರ್ 29ರವರೆಗೆ ನಡೆಯಲಿದೆ.
3- ರಿಮೋಟ್ ಸೆನ್ಸಿಂಗ್ ಆಂಡ್ ಜಿಐಎಸ್ ಅಪ್ಲಿಕೇಷನ್ಸ್
ರಿಮೋಟ್ ಸೆನ್ಸಿಂಗ್ ಆಂಡ್ ಜಿಐಎಸ್ ಅಪ್ಲಿಕೇಷನ್ಸ್ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಈ ಮೂಲಕ ಬೆಳೆಗಳ ಮೌಲ್ಯಗಳ ಲೆಕ್ಕಾಚಾರ, ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಹಾಗೂ ಇತರೆ ಭೂಗೋಳ ಶಾಸ್ತ್ರದ ಅಧ್ಯಯನದ ಬಗ್ಗೆ ಮಾಹಿತಿ ನೀಡಲಾಗುತ್ತದೆ.












Click it and Unblock the Notifications