ಇಸ್ರೋ ಮಹತ್ಸಾಧನೆ : ಸ್ವದೇಶಿ ರಾಕೆಟ್ ಯಶಸ್ವಿ ಉಡಾವಣೆ
ಬೆಂಗಳೂರು, ಜ.5: ಸ್ವದೇಶಿ ನಿರ್ಮಿತ ಕ್ರಯೋಜೆನಿಕ್ ಎಂಜಿನ್ ಚಾಲಿತ ಭಾರತದ ಮಹತ್ವದ ಜಿಎಸ್‌ಎಲ್‌ವಿ-ಡಿ5 ರಾಕೆಟ್ ಉಡಾವಣೆ ಯಶಸ್ವಿಯಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಭಾನುವಾರ ಸಂಜೆ 4.18ರ ವೇಳೆಗೆ ಜಿ ಸ್ಯಾಟ್ 14 ಸಂವಹನ ಉಪಗ್ರಹ ಹೊತ್ತ ಜಿಎಸ್ ಎಲ್ ವಿ ಡಿ 5 ರಾಕೆಟ್ ಯಶಸ್ವಿಯಾಗಿ ನಭಕ್ಕೆ ಚಿಮ್ಮಿದೆ.
ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಶನಿವಾರ ಬೆಳಗ್ಗೆ 11:18ರಿಂದ ಕ್ಷಣ ಗಣನೆ ಆರಂಭಗೊಂಡಿತ್ತು. 49.13 ಮೀಟರ್ ಉದ್ದದ 414.75 ಟನ್ ಭಾರ ಹೊಂದಿರುವ ರಾಕೆಟ್ 1,982 ಕೆಜಿ ತೂಕದ ಜಿಸ್ಯಾಟ್-14 ಸಂಪರ್ಕ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಒಯ್ದಿದೆ. ದೂರ ಶಿಕ್ಷಣ ಮತ್ತು ದೂರ ವೈದ್ಯಕೀಯದಲ್ಲಿ ಈ ಉಪಗ್ರಹ ಉಪಯುಕ್ತವಾಗಿದೆ. ರವಿವಾರ ಸಂಜೆ 4:18 ಸುಮಾರಿಗೆ ರಾಕೆಟ್ ಮೇಲಕ್ಕೆ ಚಿಮ್ಮಿದೆ.
PM congratulates the scientists and engineers of ISRO for the successful launch of GSLV D5 carrying GSAT-14 payload.
— Dr Manmohan Singh (@PMOIndia) January 5, 2014 ಕಳೆದ ಮೂರು ವರ್ಷಗಳಲ್ಲಿ ಎರಡು ಬಾರಿ ಭಾರೀ ತೂಕದ ರಾಕೆಟ್ ನ ಹಾರಾಟ ವಿಫಲವಾಗಿತ್ತು ಹಾಗೂ ಒಂದು ಬಾರಿ ಹಾರಾಟವನ್ನು ಕೈಬಿಡಲಾಗಿತ್ತು. ಆದರೆ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ವಿಜ್ಞಾನಿಗಳು ಈ ಬಾರಿ ಯಶಸ್ಸಿನ ಬಗ್ಗೆ ಪೂರ್ಣ ಭರವಸೆಯನ್ನು ಹೊಂದಿದ್ದಾರೆ.
ಜಿಎಸ್ ಎಲ್ ವಿ ಈ ಹಿಂದಿನ ಹಾರಾಟಗಳನ್ನು ಪರಿಶೀಲಿಸಿದ ಬಳಿಕ ನಾವು 45 ವಿವಿಧ ಪರೀಕ್ಷೆಗಳನ್ನು ಮಾಡಿದ್ದೇವೆ ಹಾಗೂ ಕೆಲವು ಘಟಕಗಳಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದ್ದೇವೆ' ಎಂದು ಇಸ್ರೋ ಅಧ್ಯಕ್ಷ ಕೆ. ರಾಧಾಕೃಷ್ಣನ್ 29 ಗಂಟೆಗಳ ಕ್ಷಣಗಣನೆ ಶನಿವಾರ ಆರಂಭಗೊಳ್ಳುವ ಮೊದಲು ಸುದ್ದಿಗಾರರಿಗೆ ತಿಳಿಸಿದ್ದರು.

ಭಾರತ ಈಗಾಗಲೇ ಪಿಎಸ್ ಎಲ್ ವಿ ಶ್ರೇಣಿಯ ರಾಕೆಟ್ ಗಳ ಉಡಾವಣೆಯಲ್ಲಿ ಪರಿಣತಿ ಪಡೆದಿದೆ. ಸತತ 25 ಯಶಸ್ವಿ ಹಾರಾಟಗಳನ್ನು ಅದು ನಡೆಸಿದೆ. ಆದರೆ, ಮಾನವರನ್ನು ಬಾಹ್ಯಾಕಾಶಕ್ಕೆ ಒಯ್ಯುವುದು ಸೇರಿದಂತೆ ಹೆಚ್ಚಿನ ಭಾರದ ಉಪಗ್ರಹಗಳನ್ನು ಒಯ್ಯಬಲ್ಲ ಜಿಎಸ್ ಎಲ್ ವಿ ರಾಕೆಟ್ ಭಾರತಕ್ಕೆ ಸವಾಲಾಗಿಯೇ ಉಳಿದಿತ್ತು. ಈಗ ಈ ಜಿಸ್ಯಾಟ್ ಹೊತ್ತೊಯ್ದ ಜಿಎಸ್ ಎಲ್ ವಿ ಭಾರತಕ್ಕೆ ಹೊಸ ದಿಶೆಯನ್ನು ತೋರಿಸಿದೆ.
ಬೇರೆ ದೇಶಗಳಿಂದ ಇಂಜಿನ್ ಪೂರೈಕೆ ಸಹಾಯ ಸಿಗದ ಕಾರಣ 2010ರ ಎಪ್ರಿಲ್ ನಲ್ಲಿ ಇಸ್ರೋ ತನ್ನ ಮೊದಲ ಕ್ರಯೋಜೆನಿಕ್ ಇಂಜಿನ್ ನನ್ನು ಪರೀಕ್ಷೆಗೊಳಪಡಿಸಿತ್ತು. ಆದರೆ, ಕ್ರಯೋಜೆನಿಕ್ ಹಂತ ಉರಿದ ಬಳಿಕ ಒಂದು ಸೆಕೆಂಡ್ ನ ಮೊದಲೇ ಅದು ವಿಫಲವಾಯಿತು.
ಪರಿಷ್ಕೃತ ಜಿಎಸ್ ಎಲ್ ವಿ-ಡಿ5 ರಾಕೆಟನ್ನು 2013 ಆಗಸ್ಟ್‌ನಲ್ಲಿ ಉಡಾಯಿಸಬೇಕಾಗಿತ್ತು. ಆದರೆ ದ್ರವ ಇಂಧನ ಪಾತ್ರೆಯಲ್ಲಿ ಸೋರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ನಿಗದಿತ ಹಾರಾಟಕ್ಕೆ ಎರಡು ಗಂಟೆಗಳ ಮೊದಲೇ ಯೋಜನೆಯನ್ನು ಕೈಬಿಡಲಾಗಿತ್ತು.
ಯೋಜನೆ ಸಿದ್ಧತೆ ಪರಿಶೀಲನಾ ತಂಡ ಮತ್ತು ಉಡಾವಣೆ ಅನುಮತಿ ಮಂಡಳಿ 2013 ಡಿಸೆಂಬರ್ 28ರಂದು ಉಡಾವಣೆಗೆ ಅನುಮತಿ ನೀಡಿದ ಬಳಿಕ ಶ್ರೀಹರಿಕೋಟ ಉಡಾವಣಾ ಕೇಂದ್ರದಲ್ಲಿ ಚಟುವಟಿಕೆಗಳು ಆರಂಭವಾಗಿದ್ದವು. ಭಾರತ ರಶ್ಯದಿಂದ ಏಳು ಕ್ರಯೋಜೆನಿಕ್ ಇಂಜಿನ್ ಗಳನ್ನು ಪಡೆದುಕೊಂಡಿತ್ತು. ಅವುಗಳ ಪೈಕಿ ಇಸ್ರೋ ಆರನ್ನು ಬಳಸಿಕೊಂಡಿದೆ.
ಬಳಿಕ ವಿದೇಶದಿಂದ ಆಮದು ಮಾಡಿಕೊಳ್ಳುವ ಇಂಜಿನ್ ಗಳು ಕೈಗೆಟುಕದೆ ಹೋದ ಹಿನ್ನೆಲೆಯಲ್ಲಿ ತನ್ನದೇ ಆದ ಕ್ರಯೋಜೆನಿಕ್ ಇಂಜಿನ್ ಗಳನ್ನು ಅಭಿವೃದ್ಧಿ ಪಡಿಸುವ ಅಗತ್ಯವನ್ನು ಭಾರತ ಮನಗಂಡಿತು. ಅನ್ಯ ಗ್ರಹಗಳ ಅನ್ವೇಷಣೆ ಮತ್ತು ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸುವುದು ಸೇರಿದಂತೆ ಭಾರತದ ಮಹತ್ವಾಕಾಂಕ್ಷೆಯ ಯೋಜನೆಗಳು ಜಿಎಸ್ ಎಲ್ ವಿ ಯೋಜನೆಯ ಯಶಸ್ಸನ್ನು ನೆಚ್ಚಿಕೊಂಡಿತ್ತು. ಇಂದಿನ ಯಶಸ್ಸಿನ ಉಡಾವಣೆಯಿಂದ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮಹತ್ವದ ಮತ್ತೊಂದು ಮೈಲಿಗಲ್ಲನ್ನು ದಾಟಿದೆ.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications