'ಇದು ಅಹಂ ತೋರುವ ಸಮಯವಲ್ಲ'- ಮಾರ್ಗರೆಟ್ ಆಳ್ವಾ ಟೀಕೆ
ನವದೆಹಲಿ, ಜುಲೈ 22: ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನದಿಂದ ದೂರ ಉಳಿದಿರುವ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ನಿರ್ಧಾರವನ್ನು ಉಪರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿ ಮಾರ್ಗರೇಟ್ ಆಳ್ವಾ ಟೀಕಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮಾರ್ಗರೇಟ್ ಆಳ್ವಾ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಟಿಎಂಸಿಯನ್ನು ಬೊಟ್ಟು ಮಾಡಿ ಉಪ ರಾಷ್ಟ್ರಪತಿ ಚುನಾವಣೆಯ ಈ ಸಂದರ್ಭ "ಅಹಂಕಾರ ಅಥವಾ ಕೋಪಕ್ಕೆ ಸಮಯವಲ್ಲ" ಎಂದು ನೆನಪಿಸಿದ್ದಾರೆ.
" ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನದಿಂದ ದೂರವಿರುವ ಟಿಎಂಸಿ ನಿರ್ಧಾರ ನಿರಾಶಾದಾಯಕವಾಗಿದೆ. ಇದು 'ಅಹಂಕಾರ', ಅಹಂ ಅಥವಾ ಕೋಪದ ಸಮಯವಲ್ಲ. ಇದು ಧೈರ್ಯ, ನಾಯಕತ್ವ ಮತ್ತು ಏಕತೆಯ ಸಮಯ' ಎಂದಿದ್ದಾರೆ.
The TMC's decision to abstain from voting in the VP election is disappointing. This isn't the time for 'whataboutery’, ego or anger. This is the time for courage, leadership & unity. I believe, @MamataOfficial , who is the epitome of courage, will stand with the opposition.
— Margaret Alva (@alva_margaret) July 22, 2022
"ಯಾರು ಧೈರ್ಯದ ದ್ಯೋತಕವಾಗಿರುವ ಮಮತಾ ಬ್ಯಾನರ್ಜಿ ಅವರು ವಿರೋಧ ಪಕ್ಷದ ಜೊತೆ ನಿಲ್ಲುತ್ತಾರೆ ಎಂದು ನಾನು ನಂಬುತ್ತೇನೆ' ಎಂದು ಆಳ್ವಾ ಟ್ವೀಟ್ ಮಾಡಿದ್ದಾರೆ.

ತೃಣಮೂಲ ಕಾಂಗ್ರೆಸ್ ಪಕ್ಷವು ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನದಿಂದ ದೂರವಿರುವುದಾಗಿ ಗುರುವಾರ ತಿಳಿಸಿದೆ. ಆಗಸ್ಟ್ 6 ರಂದು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಆಡಳಿತಾರೂಢ ಬಿಜೆಪಿಯ ಅಭ್ಯರ್ಥಿಯಾಗಿ ಬಂಗಾಳದ ರಾಜ್ಯಪಾಲ ಜಗದೀಪ್ ಧನಕರ್, ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ಹಿರಿಯ ನಾಯಕಿ ಮಾರ್ಗರೇಟ್ ಆಳ್ವಾ ಸ್ಪರ್ಧಿಸಿದ್ದಾರೆ.
ಆಡಳಿತ ಪಕ್ಷದ ಜಗದೀಪ್ ಧನಕರ್ ಅಥವಾ ವಿಪಕ್ಷಗಳ ಅಭ್ಯರ್ಥಿ ಮಾರ್ಗರೇಟ್ ಆಳ್ವಾ ಇಬ್ಬರಲ್ಲಿ ಯಾರನ್ನೂ ಬೆಂಬಲಿಸದಿರಲು ಪಕ್ಷವು ಸರ್ವಾನುಮತದಿಂದ ನಿರ್ಧರಿಸಿದೆ ಎಂದು ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ, ತೃಣಮೂಲ ಕಾಂಗ್ರೆಸ್ ಸಂಸದ ಅಭಿಜಿತ್ ಬ್ಯಾನರ್ಜಿ ತಿಳಿಸಿದ್ದಾರೆ.
ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇತ್ತೀಚೆಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಜಗದೀಪ್ ಧನಕರ್ ಅವರ ನಡುವೆ ಡಾರ್ಜಿಲಿಂಗ್‌ನಲ್ಲಿ ಸಭೆ ನಡೆದಿತ್ತು. ತಮ್ಮನ್ನು ಬೆಂಬಲಿಸುವಂತೆ ಜಗದೀಪ್ ಧನಕರ್ ಮಮತಾ ಬ್ಯಾನರ್ಜಿ ಅವರನ್ನು ಕೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications