ಆರ್‌ಬಿಐ ನಿಂದ 1000 ಮುಖಬೆಲೆ ಹೊಸ ನೋಟು ಬಿಡುಗಡೆ! ನಿಜವೇನು?
ನವದೆಹಲಿ, ಅಕ್ಟೋಬರ್ 18: ಆರ್‌ಬಿಐ 1000 ಮುಖಬೆಲೆಯ ನೋಟುಗಳನ್ನು ಮುದ್ರಿಸಿದೆ ಎಂಬ ಸುದ್ದಿ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 2000 ನೋಟುಗಳ ಬದಲಿಗೆ ಸಾವಿರದ ನೋಟುಗಳನ್ನು ಆರ್‌ಬಿಐ ಪ್ರಿಂಟ್ ಮಾಡಿದೆ ಎನ್ನುವ ಒಕ್ಕಣೆಯೂ ಸುದ್ದಿಯ ಜೊತೆಗಿದೆ.
ಆದರೆ ಈ ಸುದ್ದಿ ಸುಳ್ಳಾಗಿದ್ದು ಆರ್‌ಬಿಐ ಪ್ರಸ್ತುತ 1000 ಮುಖಬೆಲೆಯ ನೋಟುಗಳನ್ನು ಮುದ್ರಿಸುತ್ತಿಲ್ಲ. ಆದರೆ 2000 ಮುಖಬೆಲೆಯ ನೋಟುಗಳ ಮುದ್ರಣವನ್ನು ಪ್ರಸ್ತುತ ನಿಲ್ಲಿಸಿರುವುದು ಆರ್‌ಟಿಇ ಮಾಹಿತಿಯಿಂದ ಗೊತ್ತಾಗಿದೆ.
ಕಾಫಿ ಬಣ್ಣದ 1000 ಮುಖಬೆಲೆಯ ನೋಟುಗಳ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಇದು ಕಲಾವಿದನ ಕೈಚಳಕವಷ್ಟೆ. ಯಾರೋ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಈ ಚಿತ್ರಗಳನ್ನು ಹರಿಯಬಿಟ್ಟಿದ್ದಾರೆ.

ಆದರೆ ಇತ್ತೀಚಿಗೆ ಆರ್‌ಟಿಐ ನಿಂದ ಪಡೆದಿರುವ ಮಾಹಿತಿ ಪ್ರಕಾರ 2000 ಮುಖಬೆಲೆಯ ನೋಟು ಮುದ್ರಿಸುವುದು ನಿಲ್ಲಿಸಿದೆ. ಮುದ್ರಣ ನಿಲ್ಲಿಸಿದೆಯೇ ಹೊರತು ಅದನ್ನು ರದ್ದು ಮಾಡಲಾಗಿಲ್ಲ.












Click it and Unblock the Notifications