Get Updates
Get notified of breaking news, exclusive insights, and must-see stories!

ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ವರುಣ್ ಗಾಂಧಿ ತಯಾರಿ? ಈ ಅಚ್ಚರಿಯ ವರದಿ ನೋಡಿ

ನವದೆಹಲಿ, ಜನವರಿ 09: ಸಂಸದ ವರುಣ್ ಗಾಂಧಿ ನೀಡುತ್ತಿರುವ ಇತ್ತೀಚಿನ ಹೇಳಿಕೆ ಹಾಗೂ ನಡೆಗಳನ್ನು ಗಮನಿಸಿದಾಗ, ಅವರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಲಿದ್ದಾರೆಯೇ ಎಂಬ ಸಂಶಯಗಳ ವ್ಯಕ್ತವಾಗುತ್ತಿವೆ.

ಎರಡು ವರ್ಷಗಳಿಂದ ದೇಶದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾದ ಅವರ ಲೇಖನಗಳಲ್ಲಿ ಬಿಜೆಪಿಯೊಂದಿಗಿನ ಅಸಮಾಧಾನ ವ್ಯಕ್ತವಾಗುತ್ತಲೇ ಇದೆ. ವರುಣ್‌ ಗಾಂಧಿ ಅವರ ಮುಂದಿನ ನಡೆ ಏನಿರಬಹುದು ಎಂಬ ಚರ್ಚೆಗಳು ಮುನ್ನೆಲೆಗೆ ಬಂದಿವೆ.

ತಮ್ಮ ಕ್ಷೇತ್ರವಾದ ಪಿಲಿಭಿತ್‌ನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿರುವ ವರುಣ್‌ ಗಾಂಧಿ, 'ನಾನು ನೆಹರೂ ಅವರ ವಿರೋಧಿಯಲ್ಲ ಅಥವಾ ನಾನು ಕಾಂಗ್ರೆಸ್ ವಿರುದ್ಧ ಅಲ್ಲ. ನಮ್ಮ ರಾಜಕೀಯವು ಅಂತರ್ಯುದ್ಧವನ್ನು ಪ್ರಚೋದಿಸುವ ಬದಲು ಜನರನ್ನು ಒಟ್ಟುಗೂಡಿಸುವ ಗುರಿಯನ್ನು ಹೊಂದಿರಬೇಕು' ಎಂದು ಹೇಳಿದ್ದಾರೆ.

Is MP Varun Gandhi preparing to quit BJP and join Congress?

'ಇಂದು, ಕೇವಲ ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಮತಗಳನ್ನು ಗಳಿಸುತ್ತಿರುವ ಜನರು ಉದ್ಯೋಗ, ಶಿಕ್ಷಣ ಅಥವಾ ಆರೋಗ್ಯದಂತಹ ಗಂಭೀರ ವಿಷಯಗಳಲ್ಲಿ ಏನು ಮಾಡುತ್ತಿದ್ದಾರೆ ಎಂದು ಕೇಳಬೇಕಾಗಿದೆ. ಜನರನ್ನು ತುಳಿಯುವ ಅಥವಾ ದಮನ ಮಾಡುವ ರಾಜಕೀಯವನ್ನು ನಾವು ಮಾಡಬಾರದು. ನಾವು ಜನರನ್ನು ಮೇಲಕ್ಕೆತ್ತುವ ರಾಜಕೀಯವನ್ನು ಮಾಡಬೇಕಾಗಿದೆ' ಎಂದು ವರುಣ್ ಗಾಂಧಿ ತಿಳಿಸಿದ್ದಾರೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೋ ಯಾತ್ರೆಯ ಪರವಾಗಿ ಪರೋಕ್ಷ ಬೆಂಬಲವನ್ನು ವರಣ್‌ ಗಾಂಧಿ ವ್ಯಕ್ತಪಡಿಸಿರಬಹುದು ಎಂಬ ಮಾತುಗಳೂ ಕೇಳಿಬಂದಿವೆ.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ನಾಯಕರು ಅನುಸರಿಸುತ್ತಿರುವ ನೀತಿ-ನಡೆಗಳ ಬಗ್ಗೆ ಅವರು ಎಷ್ಟು ವಿಮರ್ಶಾತ್ಮಕವಾಗಿದ್ದಾರೆ ಎಂಬುದನ್ನು ಅವರು ಉಚ್ಚರಿಸಿದ ಪ್ರತಿಯೊಂದು ಪದವೂ ಹೇಳುತ್ತಿದೆ.

Is MP Varun Gandhi preparing to quit BJP and join Congress?

2019 ರಲ್ಲಿ ಅವರ ತಾಯಿ ಮೇನಕಾ ಗಾಂಧಿಯನ್ನು ನರೇಂದ್ರ ಮೋದಿ ಕ್ಯಾಬಿನೆಟ್‌ಗೆ ಮರುಸೇರ್ಪಡೆ ಮಾಡಿರಲಿಲ್ಲ. ತಮಗೂ ಸಚಿವ ಸ್ಥಾನ ನೀಡಿರಲಿಲ್ಲ. ಆ ನಂತರ ವರುಣ್‌ ಅವರು ಭಿನ್ನಾಭಿಪ್ರಾಯಗಳನ್ನು ಹೊರಹಾಕುತ್ತಿದ್ದಾರೆ.

ಅಂದಿನಿಂದ, ಬಿಜೆಪಿಯ ಆಡಳಿತದ ಪ್ರಮುಖ ವಿಷಯಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುವ ಒಂದೇ ಒಂದು ಅವಕಾಶವನ್ನು ವರುಣ್ ಕಳೆದುಕೊಂಡಿಲ್ಲ. ಪ್ರಮುಖ ರಾಷ್ಟ್ರೀಯ ದಿನಪತ್ರಿಕೆಗಳಲ್ಲಿನ ಅವರ ಪ್ರಮುಖ ಲೇಖನಗಳು ದೇಶದ ಗ್ರಾಮೀಣ ಆರ್ಥಿಕತೆ, ನಿರುದ್ಯೋಗ, ಶಿಕ್ಷಣ ಮತ್ತು ಆರೋಗ್ಯದಂತಹ ಕ್ಷೇತ್ರಗಳಲ್ಲಿ ಮೋದಿ ಸರ್ಕಾರದ ವೈಫಲ್ಯಗಳನ್ನು ಸ್ಪಷ್ಟವಾಗಿ ಎತ್ತಿ ತೋರಿಸಿವೆ.

Is MP Varun Gandhi preparing to quit BJP and join Congress?

ಅವರಿಗೆ ಪ್ರಮುಖ ಸ್ಥಾನವನ್ನು ನೀಡುವ ರಾಜಕೀಯ ಪಕ್ಷಗಳ ಕೊರತೆಯಿಲ್ಲದಿದ್ದರೂ, ಅವರು ಕಾಂಗ್ರೆಸ್ ಹೊರತುಪಡಿಸಿ ಬೇರೆ ಯಾವುದೇ ಪಕ್ಷವನ್ನು ಸೇರುವ ಸಾಧ್ಯತೆಗಳು ಕಡಿಮೆ. ಶರದ್ ಪವಾರ್ ಅವರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ), ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಥವಾ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷಗಳು (ಎಸ್‌ಪಿ) ವರುಣ್‌ ಅವರನ್ನು ಸ್ವಾಗತಿಸುತ್ತಿವೆ. ಆದರೆ, ವರುಣ್‌ ಗಾಂಧಿ ಅವರು ಕಾಂಗ್ರೆಸ್‌ ಹಾಗೂ ನೆಹರು ಅವರ ಬಗ್ಗೆ ಮಾತನಾಡುತ್ತಿರುವುದು ನೋಡಿದರೆ, ಅವರಿಗೆ ಕಾಂಗ್ರೆಸ್‌ ಕಡೆಗೇ ಹೆಚ್ಚು ಒಲವು ಇದ್ದಂತಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+