ಪತ್ನಿಯನ್ನು ಹುಡುಕಲು ಸಹಾಯ ಮಾಡಿ: ಐರಿಷ್ ವ್ಯಕ್ತಿಯ ಮನವಿ

Posted By: ಒನ್ ಇಂಡಿಯಾ ಡೆಸ್ಕ್
Subscribe to Oneindia Kannada

"ಆಕೆ ಇನ್ನೂ ಬದುಕಿದ್ದಾರೆ ಮತ್ತು ಅತ್ಯಂತ ಅಪಾಯದಲ್ಲಿದ್ದಾರೆ ಎಂದು ನನಗ್ಯಾಕೋ ಅನ್ನಿಸುತ್ತಿದೆ..." ಭಾರತದಲ್ಲಿ ಮೂರು ವಾರಗಳಿಂದ ನಾಪತ್ತೆಯಾದ ತಮ್ಮ ಪತ್ನಿಯ ಕುರಿತು ಐರಿಶ್ ವ್ಯಕ್ತಿಯೊಬ್ಬರು ಹೇಳುತ್ತಿರುವ ಮಾತು ಇದು.

"33 ವರ್ಷದ ನನ್ನ ಪತ್ನಿ ಲಿಕಾ ಸ್ಕ್ರೊಮೇನ್ ಭಾರತದಲ್ಲಿ ಕಾಣೆಯಾಗಿದ್ದಾರೆ. ಆದರೆ ಅವರನ್ನು ಹುಡುಕಿಕೊಡುವಲ್ಲಿ ಇಲ್ಲಿನ ಪೊಲೀಸರು ಸಮರ್ಥವಾಗಿಲ್ಲ" ಎಂಬುದು ಆಂಡ್ರ್ಯೂ ಜೊರ್ಡಾನ್ ಆರೋಪ.

ಈ ಕಾರು ಚಾಲಕರ ಮಗಳಿಗೆ ಹೃದಯದಲ್ಲಿ ರಂಧ್ರವಿದೆ

ಲಾಟ್ವಿಯಾ ಮೂಲದ ಲಿಗಾ ದುಬ್ಲಿನ್ ಎಂಬಲ್ಲಿ ವಾಸವಿದ್ದರು. ಕೆಲವು ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಆಕೆ ಆತ್ಮಹತ್ಯೆಗೇ ಪ್ರಯತ್ನಿಸಿದ್ದರು. ಆಯುರ್ವೇದಿಕ್ ಚಿಕಿತ್ಸೆಗಾಗಿ ಫೆಬ್ರವರಿ 4 ರಂದು ತಮ್ಮ ಸಹೋದರಿ ಇಲ್ಜೆ ಅವರೊಂದಿಗೆ ಕೇರಳಕ್ಕೆ ಬಂದಿದ್ದ ಅವರು ಆರು ವಾರಗಳ ಚಿಕಿತ್ಸೆಗೆಂದು ಭಾರತದಲ್ಲಿದ್ದರು.

Irish man whose wife is missing in India

ಚಿಕಿತ್ಸಾ ಕೇಂದ್ರವನ್ನು ಮಾರ್ಚ್ 14 ರಂದು ಬಿಟ್ಟ ಆಕೆ ಕೊನೆಯ ಬಾರಿ ಕಂಡಿದ್ದು ಕೇರಳದ ಕೋವಲಮ್ ಬೀಚ್ ನಲ್ಲಿ. ನಂತರ ಆಕೆ ನಾಪತ್ತೆಯಾಗಿದ್ದಾರೆ. ಆಂಡ್ರ್ಯೂ ಮಾರ್ಚ್ 17 ರಂದು ಭಾರತಕ್ಕೆ ಬಂದಿದ್ದು ಪತ್ನಿಯ ಹುಡುಕಾಟಕ್ಕೆ ತೊಡಗಿದ್ದಾರೆ. ಆದರೆ ಅವರಿಗೆ ಪೊಲೀಸ್ ತನಿಖೆ ಬಗ್ಗೆ ತೃಪ್ತಿಯಿಲ್ಲ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಐದು ವರ್ಷದ ಹಿಂದೆ ಲಿಗಾ ಅವರನ್ನು ಭೇಟಿಯಾಗಿದ್ದ ಆಂಡ್ರ್ಯೂ ಅವರೊಂದಿಗೆ ಲಿವ್ ಇನ್ ರಿಲೆಶನ್ಶಿಪ್ ಹೊಂದಿದ್ದರು. ಆದರೆ ಇದೀಗ ಭಾರತದಲ್ಲಿ ನಾಪತ್ತೆಯಾಗಿರುವ ಅವರನ್ನು ಹುಡುಕಿಕೊಡುವಂತೆ ಪೊಲೀಸರ ಬಳಿ ಮನವಿ ಮಾಡಿಕೊಡರೂ ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಿಲ್ಲ ಎಂಬುದು ಅವರ ದೂರು.

ಈ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ, ಆಂಡ್ರ್ಯೂ ಅವರಿಗೆ ತಮ್ಮ ಒತ್ನಿಯನ್ನು ಹುಡುಕಲು ಸಹಾಯ ಮಾಡಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A distraught Irish man whose wife has been missing in India for more than three weeks said he is certain she is still alive, but fears she is in "grave danger." Andrew Jordan described the Indian police "incompetent" and claims he does not trust them to find his wife Liga Skromane (33).

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ