ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸವಿತಾ ಹಾಲಪ್ಪನವರ್ ಅಗಲಿಕೆಗೆ ಮತ್ತೆ ಮಿಡಿದ ಐರ್ಲೆಂಡ್ !

By Nayana
|
Google Oneindia Kannada News

ಬೆಂಗಳೂರು, ಮೇ 29: ದೇಶ ವಿದೇಶಗಳಲ್ಲಿ ಸೋಮವಾರ ನಡೆದ ಪ್ರಮುಖ ಘಟನೆಗಳನ್ನು ಚಿತ್ರದ ಮೂಲಕ ವಿವರಿಸಲಾಗಿದೆ. 2012ರ ಅಕ್ಟೋಬರ್ ನಲ್ಲಿ 17 ವಾರದ ಗರ್ಭಿಣಿಯಾಗಿದ್ದ ಸವಿತಾ ಆಸ್ಪತ್ರೆಗೆ ದಾಖಲಾಗಿದ್ದರು.

ತೀವ್ರ ಬೆನ್ನುನೋವುನಿಂದ ಬಳಲುತ್ತಿದ್ದ ಅವರು, ವೈದ್ಯರ ಬಳಿ ಗರ್ಭಪಾತ ಮಾಡುವಂತೆ ಮನವಿ ಮಾಡಿದ್ದರು. ಸವಿತಾ ಅವರ ಆರೋಗ್ಯ ಸಂಪೂರ್ಣ ಹದಗೆಟ್ಟು ಅವರು ಗಂಭೀರ ಸ್ಥಿತಿಗೆ ತಲುಪಿದಾಗಲೂ ವೈದ್ಯರು ಸೂಕ್ತ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ತೋರಿದರು.

ಮೆರಿಲ್ಯಾಂಡ್‌ನಲ್ಲಿ ಭಾರಿ ಪ್ರವಾಹ: ದಿಗ್ಭ್ರಮೆಗೊಳಿಸುವ ಚಿತ್ರಗಳು ಮೆರಿಲ್ಯಾಂಡ್‌ನಲ್ಲಿ ಭಾರಿ ಪ್ರವಾಹ: ದಿಗ್ಭ್ರಮೆಗೊಳಿಸುವ ಚಿತ್ರಗಳು

ಆಸ್ಪತ್ರೆಗೆ ದಾಖಲಾದ ನಂತರ ರಕ್ತ ಪರೀಕ್ಷೆ, ರಕ್ತ ದೊತ್ತಡ, ದೇಹದ ಉಷ್ಣಾಂಶ ಮುಂತಾದ ಪರೀಕ್ಷೆಗಳನ್ನು ವೈದ್ಯರು ನಡೆಸಿದ್ದಾರೆ ಎಂಬುದಕ್ಕೆ ಆಸ್ಪತ್ರೆಯಲ್ಲಿ ಯಾವುದೇ ದಾಖಲೆಗಳು ತನಿಖಾ ತಂಡಕ್ಕೆ ಲಭ್ಯವಾಗಿಲ್ಲ. ಇದರಿಂದ ವೈದ್ಯರ ನಿರ್ಲಕ್ಷ್ಯದಿಂದಲೇ ಆಕೆ ಸಾವನ್ನಪ್ಪಿದ್ದಾಳೆ ಎಂದು ವರದಿ ಬಂದಿತ್ತು. ಇದೆಕ್ಕಲ್ಲ ಗರ್ಭಪಾತ ನಿಷೇಧ ಕಾಯ್ದೆಯೇ ಕಾರಣವಾಗಿತ್ತು.

ಜಮಖಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ (70)ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.ಬಾಗಲಕೋಟೆಯ ತುಳಸಿಗೇರಿಯಲ್ಲಿ ನಡೆದ ಅಪಘಾತದಲ್ಲಿ ಸಿದ್ದು ನ್ಯಾಮಗೌಡ ಅವರು ಮೃತಪಟ್ಟಿದ್ದಾರೆ. ದೆಹಲಿಗೆ ತೆರಳಿದ್ದ ಅವರು ಅಲ್ಲಿಂದ ಗೋವಾಕ್ಕೆ ಬಂದು, ಕಾರ್‌ನಲ್ಲಿ ಊರಿಗೆ ಮರಳುತ್ತಿದ್ದಾಗ ನಡೆದ ಕಾರು ಅಪಘಾತದಲ್ಲಿ ಸಿದ್ದು ನ್ಯಾಮಗೌಡ ಅವರ ಎದೆಗೆ ತೀವ್ರ ಗಾಯವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಅವರಿಗೆ ಕಾಂಗ್ರೆಸ್‌ ನಾಯಕರು ಶ್ರದ್ಧಾಂಜಲಿ ಸಲ್ಲಿಸಿದರು.

ಇನ್ನು ಮುಖ್ಯಮಂತ್ರಿ ಆದ ನಂತರ ಇದೇ ಮೊದಲ ಬಾರಿಗೆ ಕುಮಾರಸ್ವಾಮಿ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದರು. ದೆಹಲಿಯ ಲೋಕಕಲ್ಯಾಣ ಮಾರ್ಗದಲ್ಲಿನ ಪ್ರಧಾನ ಮಂತ್ರಿ ಅವರ ನಿವಾಸದಲ್ಲಿ ಮೋದಿ ಅವರನ್ನು ಭೇಟಿ ಮಾಡಿದ ಕುಮಾರಸ್ವಾಮಿ ಅವರು ಕೆಲವು ಸಮಯಗಳ ಕಾಲ ಚರ್ಚೆ ಮಾಡಿದರು. ಮೋದಿ ಅವರೊಂದಿಗೆ ರೈತರ ಸಮಸ್ಯೆ, ಕಲ್ಲಿದ್ದಲು ಸಮಸ್ಯೆ ಸೇರಿದಂತೆ ಇನ್ನೂ ಕೆಲವು ರಾಜ್ಯದ ಪ್ರಸ್ತುತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದಾಗಿ ಕುಮಾರಸ್ವಾಮಿ ಅವರು ಹೇಳಿದರು. ಮೋದಿ ಅವರು ಕುಮಾರಸ್ವಾಮಿ ಅವರಿಗೆ ಆಡಳಿತ ಸಂಭಂದಿತ ಕೆಲವು ಸಲಹೆಗಳನ್ನೂ ನೀಡಿದ್ದಾರೆ.

ಸವಿತಾ ಹಾಲಪ್ಪನವರ್ ಸಾವಿಗೆ ಕಂಬನಿ ಮಿಡಿದ ಐರಿಶ್ ನಾಗರಿಕರು

ಸವಿತಾ ಹಾಲಪ್ಪನವರ್ ಸಾವಿಗೆ ಕಂಬನಿ ಮಿಡಿದ ಐರಿಶ್ ನಾಗರಿಕರು

ಡಬ್ಲಿನ್: ಐರ್ಲೆಂಡ್‌ನಲ್ಲಿ ಭಾನುವಾರ ಗರ್ಭಪಾತ ನಿರ್ಬಂಧ ಕಾಯ್ದೆ ಸಡಿಲಿಕೆಗಾಗಿ ಸಂವಿಧಾನದ ಎಂಟನೇ ತಿದ್ದುಪಡಿ ಮಾಡುವಂತೆ ಆಗ್ರಹಿಸಿ ಮತದಾನ ನಡೆದ ಸಂದರ್ಭದಲ್ಲಿ ಸವಿತಾ ಹಾಲಪ್ಪನವರ್ ಸಮಾಧಿ ಎದುರು ಮೇಣದ ಬತ್ತಿ ಹಾಗೂ ಪುಷ್ಪ ಸಮರ್ಪಿಸಲಾಯಿತು.
ಐರ್ಲೆಂಡ್ ನಲ್ಲಿ ಮೃತಪಟ್ಟ ಬೆಳಗಾವಿ ಮೂಲದ ದಂತವೈದ್ಯೆ ಸವಿತಾ ಹಾಲಪ್ಪನವರ್ ಸಾವಿನ ನಂತರ ಕೊನೆಗೂ ಐರ್ಲೆಂಡ್ ಮಹಿಳೆಯರಿಗೆ ಅಬಾರ್ಷನ್ ಹಕ್ಕು ನೀಡಲು ಮುಂದಾಗಿದೆ. ಈ ಮೂಲಕ ಹೊಸ ಇತಿಹಾಸ ನಿರ್ಮಾಣವಾಗಲಿದ್ದು, ಸಾರ್ವಜನಿಕರ ಆಗ್ರಹಕ್ಕೆ ಐರ್ಲೆಂಡ್ ಸರ್ಕಾರ ಮಣಿದಿದೆ.

ಶಾಸಕ ಸಿದ್ದು ನ್ಯಾಮಗೌಡರಿಗೆ ಶ್ರದ್ಧಾಂಜಲಿ

ಶಾಸಕ ಸಿದ್ದು ನ್ಯಾಮಗೌಡರಿಗೆ ಶ್ರದ್ಧಾಂಜಲಿ

ಜಮಖಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ಅವರು ರಸ್ತೆ ಅಪಘಾತದಲ್ಲಿ ಸೋಮವಾರ ಮೃತಪಟ್ಟಿದ್ದಾರೆ. ದೆಹಲಿಗೆ ತೆರಳಿದ್ದ ಅವರು ಅಲ್ಲಿಂದ ಗೋವಾಕೆ ಬಂದು ಕಾರಿನಲ್ಲಿ ಊರಿಗೆ ಮರಳಿ ಬರುತ್ತಿರುವಾಗ ಘಟನೆ ಸಂಭವಿಸಿದೆ. ಸಿದ್ದು ನ್ಯಾಮಗೌಡ ಅವರಿಗೆ ಕಾಂಗ್ರೆಸ್‌ ನಾಯಕರು ಶ್ರದ್ಧಾಂಜಲಿ ಸಲ್ಲಿಸಿದರು.

ಸಿದ್ದು ನ್ಯಾಮಗೌಡರು ಚಲಿಸುತ್ತಿದ್ದ ಕಾರು

ಸಿದ್ದು ನ್ಯಾಮಗೌಡರು ಚಲಿಸುತ್ತಿದ್ದ ಕಾರು

ಶಾಸಕ ಸಿದ್ದು ನ್ಯಾಮಗೌಡ ಚಲಿಸುತ್ತಿದ್ದ ಕಾರು ಅಪಘಾತಕ್ಕೀಡಲಾಗಿ ನ್ಯಾಮಗೌಡರು ಸೋಮವಾರ ಮೃತಪಟ್ಟಿದ್ದಾರೆ, ಅವರಿದ್ದ ಕಾರಿನ ಈಗಿನ ಸ್ಥಿತಿಯನ್ನು ನೀವು ಚಿತ್ರದಲ್ಲಿ ನೋಡಬಹುದು.

ಹುಬ್ಬಳ್ಳಿ ಬಿಜೆಪಿ ಕಾರ್ಯಕರ್ತರಿಂದ ನಡೆದ ಪ್ರತಿಭಟನೆ

ಹುಬ್ಬಳ್ಳಿ ಬಿಜೆಪಿ ಕಾರ್ಯಕರ್ತರಿಂದ ನಡೆದ ಪ್ರತಿಭಟನೆ

ರೈತರ ಸಾಲ ಮನ್ನಾ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿ ಸೋಮವಾರ ಬಿಜೆಪಿ ಕರೆ ನೀಡಿದ್ದ ಕರ್ನಾಟಕ ಬಂದ್‌ ನಲ್ಲಿ ಬಿಜೆಪಿ ಕಾರ್ಯಕರ್ತರು ಹುಬ್ಬಳಿಯ ಕೆಆರ್ ವೃತ್ತದಲ್ಲಿ ಪ್ರತಿಭಟನೆಯಲ್ಲಿ ತೊಡಗಿರುವುದು.

ಪ್ರಧಾನಿ ಹಾಗೂ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಭೇಟಿ

ಪ್ರಧಾನಿ ಹಾಗೂ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಭೇಟಿ

ಎಚ್‌ಡಿ ಕುಮಾರಸ್ವಾಮಿ ಸೋಮವಾರ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು.ರಾಜ್ಯದ ಕೆಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.

ಚೆನ್ನೈ ಸೂಪರ್ ಕಿಂಗ್‌ ಕ್ಯಾಪ್ಟನ್ ಧೋನಿಗೆ ಚೆನ್ನೈ ಏರ್‌ಪೋರ್ಟ್‌ನಲ್ಲಿ ವಿಶಿಷ್ಟ ಸ್ವಾಗತ

ಚೆನ್ನೈ ಸೂಪರ್ ಕಿಂಗ್‌ ಕ್ಯಾಪ್ಟನ್ ಧೋನಿಗೆ ಚೆನ್ನೈ ಏರ್‌ಪೋರ್ಟ್‌ನಲ್ಲಿ ವಿಶಿಷ್ಟ ಸ್ವಾಗತ

2018ರ ಐಪಿಎಲ್‌ನಲ್ಲಿ ಗೆಲುವು ಸಾಧಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡೆ ನಾಯಕ ಧೋನಿಗೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಕ್ರಿಕೆಟ್ ಪ್ರೇಮಿಗಳು ಸ್ವಾಗತ ಕೋರಿದ್ದು ಹೀಗೆ

English summary
Irish citizens have voted on Saturday to repeal the 8th Amendment of the Irish Constitution which prohibits abortions unless a mother's life is in danger. Apart from this many people interesting happenings around world here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X