ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

IRCTC 7 ದಿನದ ತೀರ್ಥಯಾತ್ರೆ ವಿಶೇಷ ಪ್ಯಾಕೇಜ್ ಟೂರ್

|
Google Oneindia Kannada News

ನವದೆಹಲಿ, ಜುಲೈ 2: ಭಾರತೀಯ ರೈಲ್ವೆಯ ಕೇಟರಿಂಗ್ ಹಾಗೂ ಪ್ರವಾಸೋದಮ ನಿಗಮ(IRCTC) ವಿಶೇಷ ತೀರ್ಥಯಾತ್ರೆ ಪ್ಯಾಕೇಜ್ ಘೋಷಿಸಿದೆ. 'ಭಾರತ್ ದರ್ಶನ್ ಸ್ಪೆಷನ್ ಟ್ರೈನ್' ಹೆಸರಿನ ಈ ಆಫರ್ ನಲ್ಲಿ ಪ್ರಮುಖ ತೀರ್ಥಕ್ಷೇತ್ರಗಳ ಪ್ರವಾಸ ಕೈಗೊಳ್ಳಬಹುದಾಗಿದೆ.

6 ರಾತ್ರಿ ಹಾಗೂ 7 ದಿನಗಳ ಪ್ಯಾಕೇಜ್ ಟೂರ್ ಇದಾಗಿದ್ದು, ಉತ್ತರಾಖಂಡ್ ರಾಜ್ಯದ ಹರಿದ್ವಾರ ಹಾಗೂ ಋಷಿಕೇಶ, ಜಮ್ಮು ಮತ್ತು ಕಾಶ್ಮೀರದ ವೈಷ್ಣೋದೇವಿ ದರ್ಶನ ಪಡೆಯಬಹುದು.

ವೈಷ್ಣೋ ದೇವಿ ಭಕ್ತರಿಗೆ ಖುಷಿ ಸುದ್ದಿ ನೀಡಿದ ಮೋದಿ ಸರ್ಕಾರವೈಷ್ಣೋ ದೇವಿ ಭಕ್ತರಿಗೆ ಖುಷಿ ಸುದ್ದಿ ನೀಡಿದ ಮೋದಿ ಸರ್ಕಾರ

ಜುಲೈ 03, 2019ರ ಬೆಳಗ್ಗೆ 8 ಗಂಟೆಗೆ ಬರ್ಧಾಮಾನ್ ನಲ್ಲಿ ಆರಂಭವಾಗಿ ಜುಲೈ 09, 2019ರಂದು ಪ್ರವಾಸ ಕೊನೆಗೊಳ್ಳಲಿದೆ. ಬರ್ಧಾಮಾನ್, ಬೋಲ್ ಪುರ್ ಶಾಂತಿನಿಕೇತನ, ರಾಮ್ ಪುರ್- ಡುಮ್ಕಾ, ಭಗಲ್ ಪುರ್- ಕಿಯುಲ್-ಪಾಟ್ನಾ ಪ್ರಮುಖ ನಿಲ್ದಾಣಗಳಾಗಿವೆ.

IRCTC offers 7-day tour to Haridwar, Rishikesh and Vaishnodevi; check details

ಈ ಪ್ಯಾಕೇಜ್ (EZBD32) ನಲ್ಲಿ ಶಾಖಾಹಾರಿ ಉಪಾಹಾರ, ಊಟ ಹಾಗೂ ಡಿನ್ನರ್ ಪ್ರತಿಯೊಬ್ಬರಿಗೂ ಸಿಗಲಿದೆ. ನಾನ್ ಎಸಿ ಸ್ಲೀಪರ್ ಕ್ಲಾಸ್ ಟ್ರೈನ್ ಟಿಕೆಟ್ ಯುಳ್ಳವರಿಗೆ ಇದು ಲಭ್ಯ. ಜೊತೆಗೆ ನಾನ್ ಎಸಿ ಬಸ್ ಹಾಗೂ ನಾನ್ ಎಸಿ ಹಾಲ್ ವಸತಿ ಸೌಲಭ್ಯ ಸಿಗಲಿದೆ. ಒಟ್ಟಾರೆ ಈ ಪ್ಯಾಕೇಜ್ ಟೂರ್ ಸೌಲಭ್ಯದ ವೆಚ್ಚ 6,300 ರು ಆಗಿದೆ. ಈ ಪ್ಯಾಕೇಜ್ ಮುಂಬರುವ ವಾರಗಳಿಗೂ ಲಭ್ಯವಾಗಲಿದ್ದು, ಐಆರ್ ಸಿಟಿಸಿ ವೆಬ್ ತಾಣದಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದು.

English summary
IRCTC (Indian Railway Catering and Tourism Corporation) Tourism has come up with an interesting package the 'Bharat Darshan Special Train' which covers all the important tourist places in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X