IRCTCಯಿಂದ 10 ದಿನಗಳ ಜಪಾನ್ ಟೂರ್‌ ಪ್ಯಾಕೇಜ್ ಘೋಷಣೆ: ಅತ್ಯಂತ ಕಡಿಮೆ ಬೆಲೆಯಲ್ಲಿ ಪ್ರವಾಸ!

IRCTC: ಭಾರತೀಯ ರೈಲ್ವೆ ಆಹಾರ ಮತ್ತು ಪ್ರವಾಸೋದ್ಯಮ ನಿಗಮ (IRCTC) ದೆಹಲಿಯಿಂದ ಜಪಾನ್‌ಗೆ 10 ದಿನಗಳು ಮತ್ತು 9 ರಾತ್ರಿಗಳ ಪ್ರವಾಸ ಪ್ಯಾಕೇಜ್ ಅನ್ನು ಘೋಷಿಸಿದೆ. ಈ ಪ್ರವಾಸದ ಮೂಲಕ ಜಪಾನ್‌ನ ಅತ್ಯಂತ ಪ್ರಸಿದ್ಧ ನಗರಗಳು, ಸಾಂಸ್ಕೃತಿಕ ತಾಣಗಳು ಮತ್ತು ನೈಸರ್ಗಿಕ ಸೌಂದರ್ಯವನ್ನು ವೀಕ್ಷಿಸುವ ಅವಕಾಶ ಸಿಗುತ್ತದೆ. ಈ ಭರ್ಜರಿ ಆಫರ್‌ನ ಸಂಪೂರ್ಣ ವಿವರ ಇಲ್ಲಿದೆ.

ಸೆಪ್ಟೆಂಬರ್ 6 ರಂದು ಈ ಟೂರ್‌ ದೆಹಲಿಯಿಂದ ಆರಂಭವಾಗಲಿದೆ. ಟೋಕಿಯೋ, ಹಕೋನೆ, ಹಮಾಮಟ್ಸು, ಕ್ಯೋಟೋ, ಒಸಾಕಾ, ನಾರಾ ಮತ್ತು ಹಿರೋಷಿಮಾಗಳಿಗೆ ಕರೆದುಕೊಂಡು ಹೋಗಲಾಗುವುದು. ಪ್ರಯಾಣಿಕರನ್ನು ದೆಹಲಿಯಿಂದ ಟೋಕಿಯೋಗೆ ವಿಮಾನದಲ್ಲಿ ಕರೆದುಕೊಂಡು ಹೋಗಲಾಗುವುದು. ಈ ಪ್ರವಾಸಕ್ಕೆ ಹೋದವರು ಸೆಪ್ಟೆಂಬರ್ 15ಕ್ಕೆ ವಾಪಸ್‌ ಬರಲಿದ್ದಾರೆ.

IRCTC

IRCTC: ಯಾರಿಗೆ ಎಷ್ಟು ಹಣ ವಿವರ ಹೀಗಿದೆ

ಟ್ರಿಪಲ್-ಶೇರಿಂಗ್‌ನಲ್ಲಿ ಪ್ರಯಾಣ ಬೆಳೆಸುವ ಪ್ರತಿ ವ್ಯಕ್ತಿಗೆ ಪ್ಯಾಕೇಜ್‌ 3,45,999 ರಿಂದ ಪ್ರಾರಂಭವಾಗುತ್ತವೆ. ಡಬಲ್‌ ಶೇರಿಂಗ್‌ಗೆ 3,49,999 ಮತ್ತು ಸಿಂಗಲ್‌ ಆಕ್ಯುಪೆನ್ಸೀಗೆ 4,73,999 ರೂ. ಎಂದು ನಿಗದಿ ಮಾಡಲಾಗಿದೆ. ಮಕ್ಕಳೊಂದಿಗೆ ಪ್ರಯಾಣಿಸುವ ಕುಟುಂಬಗಳಿಗೆ ಅಂದರೆ 5-11 ವರ್ಷ ವಯಸ್ಸಿನ ಮಕ್ಕಳಿಗೆ ಬೆಡ್‌ ಬೇಕಿದ್ದರೆ 2,92,499 ರೂ. ಹಾಸಿಗೆ ಬೇಡ ಎಂದಾದರೆ 2,63,999 ರೂ. ನೀಡಬೇಕಾಗುತ್ತದೆ.

IRCTC: ಪ್ಯಾಕೇಜ್‌ನಲ್ಲಿ ಏನೇನಿದೆ ?

ಐಆರ್‌ಸಿಟಿಸಿ ಪ್ರಕಾರ, ಪ್ಯಾಕೇಜ್‌ನಲ್ಲಿ ಎಕಾನಮಿ-ಕ್ಲಾಸ್ ವಿಮಾನ ಟಿಕೆಟ್ ದರ, ಪೋರ್‌ ಸ್ಟಾರ್ ಹೋಟೆಲ್‌ಗಳಲ್ಲಿ ವಸತಿ, ಜಪಾನ್ ಟೂರಿಸ್ಟ್‌ ವೀಸಾ ಚಾರ್ಜ್‌, ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟ, ಏರ್‌ಪೋರ್ಟ್‌ ಟ್ರಾನ್ಸ್‌ಫರ್, ಹವಾನಿಯಂತ್ರಿತ ಕೋಚ್‌ಗಳಲ್ಲಿ ಸೈಟ್‌ ಸೀಯಿಂಗ್‌, 70 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪ್ರಯಾಣಿಕರಿಗೆ ಪ್ರಯಾಣ ವಿಮೆ, ಇಂಗ್ಲಿಷ್ ಮಾತನಾಡುವ ಟೂರ್‌ ಗೈಡ್‌ ಮತ್ತು ಅನ್ವಯವಾಗುವ ತೆರಿಗೆಗಳು ಸೇರಿವೆ.

ಪ್ರಯಾಣದ ವೇಳಾಪಟ್ಟಿಯ ಪ್ರಕಾರ, ಆಲ್ ನಿಪ್ಪಾನ್ ಏರ್‌ವೇಸ್ (ANA) ನಲ್ಲಿ ಪ್ರಯಾಣಿಸುವ ನಿರೀಕ್ಷೆಯಿದೆ. ಸೆಪ್ಟೆಂಬರ್ 6 ರಂದು ಸಂಜೆ 6 ಗಂಟೆಗೆ ದೆಹಲಿಯಿಂದ NH838 ವಿಮಾನದಲ್ಲಿ ಹೊರಟು ಮರುದಿನ ಬೆಳಿಗ್ಗೆ 5:55 ಕ್ಕೆ ಟೋಕಿಯೊದ ಹನೆಡಾ ವಿಮಾನ ನಿಲ್ದಾಣವನ್ನು ತಲುಪಲಿದೆ. ರಿಟರ್ನ್‌ ಜರ್ನಿ NH837 ವಿಮಾನದಲ್ಲಿ ನಿಗದಿಯಾಗಿದೆ. ಸೆಪ್ಟೆಂಬರ್ 15 ರಂದು ಬೆಳಿಗ್ಗೆ 11:10 ಕ್ಕೆ ಹನೆಡಾದಿಂದ ಹೊರಟು ಸಂಜೆ 4:30 ಕ್ಕೆ ದೆಹಲಿಯನ್ನು ತಲುಪಲಿದೆ. ಆದರೆ, ವಿಮಾನಯಾನ ಕಾರ್ಯಾಚರಣೆಯ ಅವಶ್ಯಕತೆಗಳನ್ನು ಅವಲಂಬಿಸಿ ಈ ವೇಳಾ ಪಟ್ಟಿ ಬದಲಾಗಬಹುದು ಎಂದು ಐಆರ್‌ಸಿಟಿಸಿ ಹೇಳಿದೆ.

IRCTC: ಪ್ರಯಾಣ ಪಟ್ಟಿಯಲ್ಲಿನ ಸ್ಥಳಗಳು

ಈ ಪ್ರವಾಸವು ಟೋಕಿಯೊದಲ್ಲಿ ಎರಡು ರಾತ್ರಿಗಳ ಪ್ರವಾಸದೊಂದಿಗೆ ಪ್ರಾರಂಭವಾಗುತ್ತದೆ. ಅಲ್ಲಿ ಪ್ರಯಾಣಿಕರು ಅಸಕುಸಾ ದೇವಸ್ಥಾನ, ನಕಮಿಸೆ ಡೋರಿ, ಉಯೆನೊ ಪಾರ್ಕ್, ಒಡೈಬಾ ಮತ್ತು ಟೀಮ್‌ಲ್ಯಾಬ್ ಪ್ಲಾನೆಟ್‌, ಮೌಂಟ್ ಫ್ಯೂಜಿಯ ಐದನೇ ನಿಲ್ದಾಣಕ್ಕೆ ಭೇಟಿ ನೀಡಬಹುದಾಗಿದೆ. ಒವಾಕುಡಾನಿ ಕಣಿವೆ, ಟೊಗೆಂಡೈನಿಂದ ಒವಾಕುಡಾನಿಗೆ ಹಕೋನ್ ರೋಪ್‌ವೇ ಮತ್ತು ಹಕೋನ್ ಪೈರೇಟ್ ಹಡಗಿನಲ್ಲಿ ಒನ್‌ ವೇ ಸೈಟ್‌ ಸೀಯಿಂಗ್‌ ಕ್ರೂಸ್ ಅನ್ನು ಸಹ ಒಳಗೊಂಡಿದೆ.

ನಗೋಯಾದಲ್ಲಿರುವ ಟೊಯೋಟಾ ವಸ್ತುಸಂಗ್ರಹಾಲಯ ಮತ್ತು SCMAGLEV ರೈಲ್ವೆ ವಸ್ತುಸಂಗ್ರಹಾಲಯ, ಅರಶಿಯಾಮಾ ಬಿದಿರು ಅರಣ್ಯ, ಕ್ಯೋಟೋದಲ್ಲಿರುವ ಕಿಂಕಾಕು-ಜಿ ದೇವಾಲಯ ಮತ್ತು ಫುಶಿಮಿ ಇನಾರಿ ತೈಶಾ, ಒಸಾಕಾ ಕೋಟೆ, ನಾರಾ ಜಿಂಕೆ ಉದ್ಯಾನ, ಟೊಡೈ-ಜಿ ದೇವಾಲಯ, ಹಿರೋಷಿಮಾ ಶಾಂತಿ ಸ್ಮಾರಕ ಉದ್ಯಾನ, ಮಿಯಾಜಿಮಾ ದ್ವೀಪ ಮತ್ತು ಇಟ್ಸುಕುಶಿಮಾ ದೇಗುಲಗಳು ಇತರ ಆಕರ್ಷಣೆಗಳಲ್ಲಿ ಸೇರಿವೆ. ಶಿನ್-ಒಸಾಕಾ ನಿಲ್ದಾಣದಿಂದ ಹಿರೋಷಿಮಾ ನಿಲ್ದಾಣಕ್ಕೆ ಜಪಾನ್‌ನ ಪ್ರಸಿದ್ಧ ಶಿಂಕನ್ಸೆನ್ ಪ್ರಯಾಣವು ಪ್ಯಾಕೇಜ್‌ನ ಪ್ರಮುಖ ಅಂಶಗಳಲ್ಲಿ ಒಂದಾಗಿದೆ.

IRCTC: ಬುಕಿಂಗ್ ಷರತ್ತುಗಳು

ಈ ಪ್ಯಾಕೇಜ್‌ ಬುಕ್ ಮಾಡಬೇಕಾದರೆ ಕನಿಷ್ಠ ಆರು ತಿಂಗಳವರೆಗೆ ಮಾನ್ಯವಾಗಿರುವ ಪಾಸ್‌ಪೋರ್ಟ್ ಹೊಂದಿರಬೇಕು. ಬುಕಿಂಗ್‌ಗಾಗಿ ಪ್ಯಾನ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು ಎಂದು IRCTC ಹೇಳಿದೆ. ಪ್ರಯಾಣಿಕರು ಹಣಕಾಸು ಮತ್ತು ಉದ್ಯೋಗ ಸಂಬಂಧಿತ ದಾಖಲೆಗಳನ್ನು ಒದಗಿಸುವ ಮೂಲಕ ಜಪಾನ್‌ನ ವೀಸಾ ಪ್ರಕ್ರಿಯೆಗಳನ್ನು ಪೂರೈಸಬೇಕಾಗುತ್ತದೆ. ಒಂದು ವೇಳೆ ವಿಮಾನದ ವೇಳಾಪಟ್ಟಿಯಲ್ಲಿ ಬದಲಾವಣೆಯಾದರೆ ಅದಕ್ಕೆ ತಕ್ಕಂತೆ ಪ್ರವಾಸದ ಯೋಜನೆಯಲ್ಲಿಯೂ ಕೆಲವು ಬದಲಾವಣೆ ಅನಿವಾರ್ಯ ಎಂದು ಐಆರ್‌ಸಿಟಿಸಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+