ದೂರದರ್ಶನದ ಪ್ರಧಾನ ನಿರ್ದೇಶಕಿಯಾಗಿ ಇರಾ ಜೋಶಿ ಆಯ್ಕೆ
ನವದೆಹಲಿ, ನವೆಂಬರ್ 21: ದೂರದರ್ಶನ ನ್ಯೂಸ್ ನ ನೂತನ ಪ್ರಧಾನ ನಿರ್ದೇಶಕರಾಗಿ ಇರಾ ಜೋಶಿ ಅವರನ್ನು ನೇಮಿಸಿ, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಆದೇಶ ಹೊರಡಿಸಿದೆ.
ಮಾಜಿ ಪ್ರಧಾನ ನಿರ್ದೇಶಕಿ ವೀಣಾ ಜೈನ್ ಅವರು ಆಗಸ್ಟ್ ನಲ್ಲಿ ನಿವೃತ್ತಿಯಾದ ನಂತರ ಇರಾ ಜೋಶಿ ಅವರನ್ನು ನೇಮಿಸಲಾಗಿದೆ.

ವೀಣಾ ಜೈನ್ ಅವರನ್ನು ಮೇ 2015 ರಲ್ಲಿ ದೂರದರ್ಶನದ ಪ್ರಧಾನ ನಿರ್ದೇಶಕರನ್ನಾಗಿ ನೇಮಿಸಲಾಗಿತ್ತು.
ಪ್ರಸ್ತುತ ಪ್ರೆಸ್ ಇನ್ಫರ್ಮೇಶನ್ ಬ್ಯೂರೋ(ಪಿಐಬಿ)ದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ನಿರ್ವಸಹಿಸುತ್ತಿರುವ ಜೋಶಿಯವರು 1984 ನೇ ಬ್ಯಾಚಿನ ಭಾರತೀಯ ಮಾಹಿತಿ ಸೇವೆ(ಐಐಎಸ್)ಯ ಅಧಿಕಾರಿ.












Click it and Unblock the Notifications