• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಾರುಖ್ ಅಸಹಿಷ್ಣುತೆ ಬಗ್ಗೆ ಯಾರು ಏನು ಹೇಳಿದರು?

By Mahesh
|

ನವದೆಹಲಿ, ನ.06: ಕಿಂಗ್ ಖಾನ್ ಶಾರುಖ್ ಖಾನ್ ಅವರ ಅಸಹಿಷ್ಣುತೆ ಹೇಳಿಕೆ ಪರ-ವಿರೋಧ ಪ್ರತಿಕ್ರಿಯೆಗಳು ಬರುತ್ತಲೇ ಇವೆ. ಜನ ಸಾಮಾನ್ಯರು, ಗಣ್ಯರು, ಸಿನಿಮಾ ಮಂದಿ ಜೊತೆಗೆ ಉಗ್ರ ಸಂಘಟನೆಯ ಮುಖ್ಯಸ್ಥರು ಕೂಡಾ ಶಾರುಖ್ ಹೇಳಿಕೆ ಬಗ್ಗೆ ಅನಿಸಿಕೆ, ಅಭಿಪ್ರಾಯ, ವಾದ ಮಂಡಿಸಿದ್ದಾರೆ. ಕೆಲ ಪ್ರಮುಖ ಪ್ರತಿಕ್ರಿಯೆಗಳ ಸಂಗ್ರಹ ಇಲ್ಲಿದೆ...

ಶಾರುಖ್ ಖಾನ್ ಅವರು ಅಸಹಿಷ್ಣುತೆ ಬಗ್ಗೆ ಮಾತನಾಡಿದ್ದೇ ತಡ, ಬಿಜೆಪಿ ಮುಖಂಡರು ಒಬ್ಬರಾದ ಮೇಲೆ ಒಬ್ಬರು ಶಾರುಖ್ ವಿರುದ್ಧ ಹರಿಹಾಯ್ದಿದ್ದಾರೆ. ಉಗ್ರ ಸಂಘಟನೆ ಮುಖ್ಯಸ್ಥ ಹಫೀಜ್ ಸಯೀದ್ ಗೂ ಶಾರುಖ್ ಖಾನ್ ಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಕಿಡಿಕಾರಿದ್ದರು. ಇದಾದ ಬಳಿಕ ಮುಂಬೈ ಸರಣಿ ಸ್ಫೋಟದ ಪ್ರಮುಖ ಆರೋಪಿ ಹಫೀಜ್ ಮಹಮದ್ ಸಯೀದ್, ಖಾನ್‌ರನ್ನು ಪಾಕಿಸ್ಥಾನಕ್ಕೆ ಬರುವಂತೆ ಆಹ್ವಾನಿಸಿ ಟ್ವೀಟ್ ಮಾಡಿದ್ದರು.

ದೇಶದಲ್ಲಿ ಹೆಚ್ಚಾಗುತ್ತಿರುವ ಅಸಹಿಷ್ಣುತೆ ಬಗ್ಗೆ ಹೇಳಿಕೆ ನೀಡಿದ್ದ ಬಾಲಿವುಡ್​ ಬಾದ್​ ಶಾ ಶಾರುಕ್ ಖಾನ್​ ವಿರುದ್ಧ ಯೋಗ ಗುರು ಬಾಬಾ ರಾಮ್​ದೇವ್​ ತಿರುಗಿ ಬಿದ್ದಿದ್ದರು. ಬಿಜೆಪಿ ನಾಯಕ ಕೈಲಾಶ್ ವಿಜಯ್ ವರ್ಗಿಯಾ ಅವರು ಶಾರುಖ್ ಖಾನ್ ಅವರ ವಿರುದ್ಧ ಕಿಡಿಕಾರಿ ನಂತರ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ಬಿಜೆಪಿ ಹಿರಿಯ ಮುಖಂಡರು ಈ ಬಗ್ಗೆ ನಮಗೇನು ಗೊತ್ತಿಲ್ಲ ಎಂದು ಕೈತೊಳೆದುಕೊಂಡಿದ್ದಾರೆ.

ಶಾರುಖ್ ಅವರು ಮುಸ್ಲಿಮ್ ಆಗಿರುವುದಕ್ಕೆ ಅವರ ವಿರುದ್ಧ ಬಿಜೆಪಿ ನಾಯಕರು ಕಿಡಿಕಾರುತ್ತಿದ್ದಾರೆ. ಶಾರುಖ್ ಅವರದ್ದು ಸ್ವಾತಂತ್ರ್ಯ ಹೋರಾಟಗಾರರ ವಂಶ ಎಂದು ಕಾಂಗ್ರೆಸ್ ಹೇಳಿದೆ.

ಬಾಬಾ ರಾಮದೇವ್

ಬಾಬಾ ರಾಮದೇವ್

ಶಾರುಖ್ ​ ಖಾನ್ ಅವರ​ದು ಕೇವಲ ಕೆಲಸಕ್ಕೆ ಬಾರದ ಮಾತುಗಳಷ್ಟೇ. ಅವರಿಗೆ ನಿಜವಾಗಿಯೂ ಧಾರ್ಮಿಕ ಅಸಹಿಷ್ಣುತೆಯೆ ಬಗ್ಗೆ ಕಾಳಜಿ ಇದ್ದರೆ ಅವರಿಗೆ ಸಿಕ್ಕಿರುವ ಪ್ರಶಸ್ತಿಗಳನೆಲ್ಲಾ ವಾಪಸ್​ ಮಾಡಲಿ.

ಶಾರುಕ್ ಅವರಿಗೆ ಲಭಿಸಿರುವ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್​ ನೀಡಲು ಚಿಂತಿಸಿದರೆ ಅವರಿಗೆ ಪದ್ಮಶ್ರೀ ಸಿಕ್ಕಿದ ಬಳಿಕ ಅವರು ಸಂಪಾದಿಸಿದ ಹಣವನ್ನೆಲ್ಲಾ ಪ್ರಧಾನ ಮಂತ್ರಿ ನಿಧಿಗೆ ವಾಪಸ್​ ನೀಡಲಿ.

ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್

ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್

"Mujhe lagta hai Shah Rukh Khan ki bhasha mein aur Hafiz Saeed ki bhaasha mein koi antar nahi hai" ಇಬ್ಬರ ಭಾಷೆ ಪ್ರಯೋಗದಲ್ಲಿ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ ಎಂದಿದ್ದಾರೆ.

ಬಿಜೆಪಿ ಮುಖಂಡ ಕೈಲಾಸ್ ವಿಜಯ್ ವರ್ಗಿಯಾ

ಬಿಜೆಪಿ ಮುಖಂಡ ಕೈಲಾಸ್ ವಿಜಯ್ ವರ್ಗಿಯಾ

ಶಾರುಖ್ ಖಾನ್ ಅವರು ಭಾರತದಲ್ಲಿ ನೆಲೆಸಿದ್ದಾರೆ. ಆದರೆ, ಅವರ ಆತ್ಮ ಪಾಕಿಸ್ತಾನದಲ್ಲಿದೆ. ಆತನ ಸಿನಿಮಾಗಳು ಇಲ್ಲಿ ಕೋಟಿಗಟ್ಟಲೇ ಗಳಿಸುತ್ತವೆ ಅದರೆ, ಭಾರತದಲ್ಲಿ ಅಸಹಿಷ್ಣುತೆ ಎದ್ದು ಕಾಣುತ್ತಿದೆಯಂತೆ ಎಂದು ಸರಣಿ ಟ್ವೀಟ್ ಮೂಲಕ ಬಿಜೆಪಿ ಮುಖಂಡ ವಿಜಯ್ ವರ್ಗಿಯಾ ಕಿಡಿಕಾರಿದ್ದರು.

ವಿಎಚ್ ಪಿ ನಾಯಕಿ ಸಾಧ್ವಿ ಪ್ರಾಚಿ

ವಿಎಚ್ ಪಿ ನಾಯಕಿ ಸಾಧ್ವಿ ಪ್ರಾಚಿ

ಶಾರುಖ್ ರನ್ನು ಪಾಕಿಸ್ತಾನಿ ಐಎಸ್ ಐ ಏಜೆಂಟ್ ಎಂದು ಕರೆದಿದ್ದರು. ಶಾರುಖ್ ಖಾನ್ ಗೆ ನೀಡಿದ ಪ್ರಶಸ್ತಿಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದ್ದರು.

ಬಿಜೆಪಿ ನಾಯಕಿ ಮೀನಾಕ್ಷಿ ಲೇಖಿ

ಬಿಜೆಪಿ ನಾಯಕಿ ಮೀನಾಕ್ಷಿ ಲೇಖಿ

ಜಾರಿ ನಿರ್ದೇಶನಾಲಯದಿಂದ ಶಾರುಖ್ ಖಾನ್ ಅವರ ಕ್ರಿಕೆಟ್ ತಂಡಕ್ಕೆ ನೋಟಿಸ್ ಜಾರಿಯಾದ ಮೇಲೆ(ಅಕ್ಟೋಬರ್ 26), ಶಾರುಖ್ ಅವರಿಗೆ ಅಸಹಿಷ್ಣುತೆ ಕಾಣುತ್ತಿದೆ. ನವೆಂಬರ್ 1 ಹಾಗೂ 2 ರಂದು ಈ ರೀತಿ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಇದ್ದ ಅಸಹಿಷ್ಣುತೆ ಬಗ್ಗೆ ಮೊದಲು ಅರಿವು ಬೆಳೆಸಿಕೊಳ್ಳಲಿ.

ನಟ ಅನುಪಮ್ ಖೇರ್

ನಟ ಅನುಪಮ್ ಖೇರ್

ದಿಲ್ವಾಲೆ ದುಲ್ಹಾನಿಯಾ ಲೇ ಜಾಯಂಗೇ ಸಹ ನಟ ಅನುಪಮ್ ಖೇರ್ ಅವರು ಮಾತನಾಡಿ, ಶಾರುಖ್ ಅವರು ನಿಜವಾದ ಭಾರತೀಯ. ಯೋಗಿ ಆದಿತ್ಯಾನಾಥ್ ಅವರು ಬಿಜೆಪಿಯ ದಿಗ್ವಿಜಯ್ ಸಿಂಗ್ ಎಂದು ಹೋಲಿಕೆ ಮಾಡಿದ್ದಾರೆ.

ಎಲ್ಲರಿಗೂ ಮುಕ್ತ ಸ್ವಾಗತವಿದೆ

ಎಲ್ಲರಿಗೂ ಮುಕ್ತ ಸ್ವಾಗತವಿದೆ

ಭಾರತದಲ್ಲಿರುವ ಮುಸ್ಲಿಮರು ಕ್ರೀಡೆ, ಶೈಕ್ಷಣಿಕ, ಕಲೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದ್ದಾರೆ. ಆದರೆ, ಸೂಕ್ತ ಬೆಲೆ ಸಿಗದ ಕಾರಣ ಮೂಲೆಗುಂಪಾಗುತ್ತಿದ್ದಾರೆ. ಕಷ್ಟದ ಪರಿಸ್ಥಿತಿ ಎದುರಿಸಿ ವ್ಯಕ್ತಿತ್ವ ಕಳೆದುಕೊಳ್ಳುವುದಕ್ಕಿಂತ ಪಾಕಿಸ್ತಾನಕ್ಕೆ ಬನ್ನಿ ಎಂದ ಉಗ್ರ ಸಂಘಟನೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bollywood Superstar Shah Rukh Khan's remark about growing intolerance within the country has opened a pandora box. Many motor mouth BJP leaders have turned him anti national. Some said that he should better move to Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more