ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವಾದಿತ 'ಬ್ಲೂ ವೇಲ್' ಲಿಂಕ್ ತೆಗೆಯುವಂತೆ ಕೇಂದ್ರದಿಂದ ಸೂಚನೆ

By Sachhidananda Acharya
|
Google Oneindia Kannada News

ನವದೆಹಲಿ, ಆಗಸ್ಟ್ 16: ದೇಶದಲ್ಲಿ ಭಾರೀ ವಿವಾದ ಸೃಷ್ಟಿಸಿದ್ದ ಆತ್ಮಹತ್ಯೆಗೆ ಪ್ರೇರಣೆ ನೀಡುವ ವಿವಾದಿತ 'ಬ್ಲೂ ವೇಲ್‌ ಚಾಲೆಂಜ್‌' ಗೇಮ್ ನ ಲಿಂಕ್ ಗಳನ್ನು ತೆಗೆದು ಹಾಕುವಂತೆ ಕೇಂದ್ರ ಸರ್ಕಾರ ಅಂತರ್ಜಾಲ ಸಂಸ್ಥೆಗಳಿಗೆ ಸೂಚನೆ ನೀಡಿದೆ.

'ಬ್ಲೂ ವೇಲ್' ಗೇಮ್ ಬ್ಲಾಕ್ ಮಾಡುವಂತೆ ಮೇನಕಾ ಗಾಂಧಿ ಪತ್ರ'ಬ್ಲೂ ವೇಲ್' ಗೇಮ್ ಬ್ಲಾಕ್ ಮಾಡುವಂತೆ ಮೇನಕಾ ಗಾಂಧಿ ಪತ್ರ

ಈ ಆಟ ಮಕ್ಕಳಿಗೆ ಆತ್ಮಹತ್ಯೆಗೆ ಪ್ರೇರೇಪಣೆ ನೀಡುತ್ತಿತ್ತು. ಈ ಆಟದಿಂದಾಗಿಯೇ ದೇಶದಲ್ಲಿ ಹಲವು ಮಕ್ಕಳು ಸಾವನ್ನಪ್ಪಿರುವ ಶಂಕೆಯೂ ಇದೆ. ಇದಾದ ನಂತರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಈ ವೀಡಿಯೋ ಗೇಮ್ ರದ್ದುಗೊಳಿಸುವಂತೆ ಕೇಂದ್ರಕ್ಕೆ ಪತ್ರ ಬರೆದಿದ್ದರು.

Internet providing firms asked to remove 'Blue Whale' links

ಇದೀಗ ಈ ಆಟದ ಲಿಂಕ್ ಗಳನ್ನು ತೆಗೆದು ಹಾಕುವಂತೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಗೂಗಲ್‌, ಫೇಸ್‌ಬುಕ್‌, ವಾಟ್ಸಾಪ್, ಇನ್‌ ಸ್ಟಾಗ್ರಾಂ, ಮೈಕ್ರೋಸಾಫ್ಟ್ ಹಾಗೂ ಯಾಹೂ ಸಂಸ್ಥೆಗಳಿಗೆ ಸೂಚನೆ ನೀಡಿದೆ.

ಈ ಹಿಂದೆ ಅಗಸ್ಟ್ 11ರಂದು ಇಲಾಖೆಯಿಂದ ಸಾಮಾಜಿಕ ಜಾಲತಾಣಗಳ ನಿರ್ವಾಹಕರಲ್ಲಿ ಲಿಂಕ್ ತೆಗೆದು ಹಾಕುವಂತೆ ಮನವಿ ಮಾಡಲಾಗಿತ್ತು. ಇದೀಗ ಅಧಿಕೃತವಾಗಿ ಪತ್ರವನ್ನು ಬರೆಯಲಾಗಿದೆ.

"ನಾವು ಬ್ಲೂ ವೇಲ್ ಗೇಮ್ ಬಗ್ಗೆ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ. ಈ ಲಿಂಕ್ ಗಳನ್ನು ತೆಗೆದು ಹಾಕುವಂತೆ ಸಾಮಾಜಿಕ ಜಾಲತಾಣಗಳ ನಿರ್ವಾಹಕರಿಗೆ ಸೂಚಿಸಿದ್ದೇವೆ," ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಏನಿದು ಬ್ಲೂ ವೇಲ್?

ಬ್ಲೂವೇಲ್‌ ಒಂದು ಆನ್ ಲೈನ್ ಆಟ. ಇಲ್ಲಿ ಆಟಗಾರನಿಗೆ ದಿನಕ್ಕೊಂದು ಟಾಸ್ಕ್‌ ನೀಡಲಾಗುತ್ತದೆ. ಆತ ಟಾಸ್ಕ್‌ ಮುಗಿಸಿ ಬಳಿಕ ಚಿತ್ರಗಳನ್ನು ಅಪ್ಲೋಡ್‌ ಮಾಡಬೇಕು. ಕೊನೆಯ ಅಂದರೆ 50ನೇ ದಿನ ಅಂತಿಮ ಟಾಸ್ಕ್ ಆಗಿ ಆತ್ಮಹತ್ಯೆ ಮಾಡಿಕೊಳ್ಳುವ ಟಾಸ್ಕ್ ನೀಡಲಾಗುತ್ತದೆ.

English summary
Ministry of Electronics and Information Technology has asked the Internet providing companies to ensure that any link leading to the Blue Whale Challenge is immediately taken down.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X