ಮಹಿಳಾ ದಿನಕ್ಕೆ ಮೋದಿ, ಸಿದ್ದರಾಮಯ್ಯ ಶುಭಾಶಯ

Posted By:
Subscribe to Oneindia Kannada

ನವದೆಹಲಿ, ಮಾರ್ಚ್ 08: ವಿಶ್ವದಾದ್ಯಂತ ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ.

ತೊಟ್ಟಿಲು ತೂಗುವುದಕ್ಕಷ್ಟೇ ಹೆಣ್ಣು ಸೀಮಿತವೆಂಬ ಕಾಲದಿಂದ ದೇಶದ ಚುಕ್ಕಾಣಿ ಹಿಡಿಯುವವರೆಗೆ ಹೆಣ್ಣು ತನ್ನ ಛಾಪು ಮೂಡಿಸಿದ್ದಾಳೆ. ಅಡುಗೆ ಕೆಲಸವಷ್ಟೇ ಅಲ್ಲ, ದೇಶದ ರಕ್ಷಣೆಯ ಕೆಲಸವನ್ನೂ ಹೆಣ್ಣು ಮಾಡಬಲ್ಲಳು ಎಂಬುದು ಸಾಬೀತಾಗಿದೆ.

ಮಹಿಳಾ ದಿನಾಚರಣೆ ವಿಶೇಷ ಲೇಖನ: ವರ್ಷಕ್ಕೊಮ್ಮೆ ಅವಳ ದಿವಸ!

ಪ್ರತಿ ವ್ಯಕ್ತಿಯ ಬದುಕನ್ನೂ ಪರಿಪೂರ್ಣವಾಗಿಸುವ ಹೆಣ್ಣಿನ ಕುರಿತು ಟ್ವಿಟ್ಟರ್ ನಲ್ಲಿ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಅಂತಾರಾಷ್ಟ್ರೀಯ ಮಹಿಳಾ ದಿನಕ್ಕೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಮಹನೀಯರು ಟ್ವೀಟ್ ಮಾಡಿದ್ದಾರೆ.

ನಾರಿಶಕ್ತಿಗೆ ಅಗ್ರಸ್ಥಾನ

ನವಭಾರತ ನಿರ್ಮಾಣದಲ್ಲಿ ನಾರಿಶಕ್ತಿಗೆ ಅಗ್ರಸ್ಥಾನ. ಮಹಿಳಾ ದಿನದ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ತಮ್ಮ ಅಸಾಮಾನ್ಯ ಕೆಲಸದಿಂದ ಕೆಲವು ಮಹಿಳೆಯರು ಮನುಕುಲದ ಅಮೂಲ್ಯ ವ್ಯಕ್ತಿತ್ವವಾಗಿ ಉಳಿದಿದ್ದಾರೆ. ಅವರು ಹಲವು ಪೀಳಿಗೆಯ ಜನರಿಗೂ ಸ್ಫೂರ್ತಿಯಾಗಿದ್ದಾರೆ. ನಿಮ್ಮ ಬದುಕಿನಲ್ಲಿ ಸ್ಚಫೂರ್ತಿಯಾದ ಮಹಿಳೆಯರ ಬಗ್ಗೆ ನನಗೆ ಬರೆದು ಕಳಿಸಿ ಎಂದು ಸಹ ಪ್ರಧಾನಿ ಮೋದಿ ಟ್ವಿಟ್ಟರ್ ನಲ್ಲಿ ಮನವಿ ಮಾಡಿದ್ದಾರೆ. ಈ ಮನವಿಗೆ ಸ್ಪಂದಿಸಿರುವ ಹಲವು ತಮ್ಮ ತಮ್ಮ ಬದುಕಿನಲ್ಲಿ ಸ್ಫೂರ್ತಿಯಾದ ಮಹಿಳೆಯರ ಬಗ್ಗೆ ಬರೆದುಕೊಂಡಿದ್ದಾರೆ.

ಇದರೊಂದಿಗೆ ಸರ್ಕಾರ ಮಹಿಳೆಯರಿಗಾಗಿ ಪರಿಚಯಿಸಿದ ಕಾರ್ಯಕ್ರಮಗಳ ಬಗ್ಗೆಯೂ ಮೋದಿ ಹಲವು ಟ್ವೀಟ್ ಗಳನ್ನು ಮಾಡಿದ್ದಾರೆ.

ಮಹಿಳೆಯರಿಂದಲೇ ಬಲ

ಕೃಷಿಯಿಂದ ಕೈಗಾರಿಕೆವರೆಗೆ, ಶಿಕ್ಷಣದಿಂದ ಸಂಶೋದನೆವರೆಗೆ ಹೊಸ ಕರ್ನಾಟಕವು ಮಹಿಳೆಯರಿಂದ ಪ್ರತಿದಿನ ಬಲಪಡೆಯುತ್ತಿದೆ. ನಾವು ಹೇಳಿದಂತೆ, ಸಮಾಜದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಲು ಬದ್ಧರಾಗಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ನಮ್ಮ ಸರ್ಕಾರ ಮಹಿಳಾ ಸಬಲೀಕರಣಕ್ಕೆ ಬದ್ಧವಾಗಿದೆ. ಅವರು ಹೊಸ ಕರ್ನಾಟಕದ ನಿರ್ಮಾತೃರು. ಒಂದನೇ ತರಗತಿಯಿಂದ ಸ್ನಾತಕೋತ್ತರ ಶಿಕ್ಷಣದವರೆಗೆ ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣದ ಯೋಜನೆಯನ್ನು ಪರಿಚಯಿಸಿದ ಏಕೈಕ ಸರ್ಕಾರ ನಮ್ಮದು ಎಂದು ಅವರು ಟ್ವೀಟ್ ಮಾಡಿದ್ದಾರೆ.

ಅವಳೆಂದರೆ ಎಲ್ಲವೂ... ಅವಳಿಲ್ಲದ ಬದುಕು ಅನೂಹ್ಯ!

ಸಮಾಜದ ಮಾರ್ಗದರ್ಶಿಗಳು

ಮಹಿಳೆಯರು ನಮ್ಮ ಸಮಾಜದ ಮಾರ್ಗದರ್ಶಿಗಳು. ರಾಷ್ಟ್ರಾಭಿವೃದ್ಧಿಯ ಪಥವನ್ನು ಮುನ್ನಡೆಸುವವರು ಅವರೇ. ಜಗತ್ತಿನಲ್ಲಿ ಮಹಿಳೆಯರ ಅನಂತ ಕೊಡುಗೆಯನ್ನು ಈ ದಿನ ಸ್ಮರಿಸೋಣ. ಎಲ್ಲ ಮಹಿಳೆಯರಿಗೂ ಅಂತಾರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್. ಅನಾರೋಗ್ಯದಿಂದ ಬಳಲುತ್ತಿರುವ ಪರಿಕ್ಕರ್ ನಿನ್ನೆ ತಾನೇ ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈನಿಂದ ಅಮೆರಿಕಕ್ಕೆ ತೆರಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಮಹಿಳೆಯಿಂದ ಮಾತ್ರ ಈ ಸಮಾಜ ಶಕ್ತಿಯುತವಾಗಿದೆ!

ಮಹಿಳೆಯಿಂದ ಮಾತ್ರವೇ ಈ ಸಮಾಜ ಶಕ್ತಿಯುತವಾಗಿದೆ. ಎಲ್ಲ ಮಹಿಳೆಯರಿಗೂ ನಾನು ಅಂತಾರಾಷ್ಟ್ರೀಯ ಮಹಿಳಾದಿನದ ಶುಭಾಶಯ ಸಲ್ಲಿಸುತ್ತೇನೆ. ಈ ದಿನ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರು ಸಾಧಿಸಿದ ಸಾಧನೆಯನ್ನು ಮೆಲುಕು ಹಾಕೋಣ ಎಂದು ಮಾಜಿ ರಾಷ್ಟಪತಿ ಪ್ರಣಬ್ ಮುಖರ್ಜಿ ಟ್ವೀಟ್ ಮಾಡಿದ್ದಾರೆ. ಪ್ರೀತಿ ಗಾಂಧಿ, ಅನುಷ್ಕಾ ಶರ್ಮಾ, ಕಾಜಲ್ ಅಗರ್ವಾಲ್, ಸುರೇಶ್ ರೈನಾ, ಟ್ವಿಂಕಲ್ ಖನ್ನಾ, ಜೂಹಿ ಚಾವ್ಲಾ, ತಮನ್ನಾ ಭಾಟಿಯಾ ಸೇರಿದಂತೆ ಇನ್ನೂ ಹಲವರು ಮಹಿಳಾ ದಿನಕ್ಕೆ ಶುಭಹಾರೈಕೆ ಸಲ್ಲಿಸಿದ್ದಾರೆ.

ಕನ್ನಡ ಕ್ರೈಂ ಪತ್ರಿಕೋದ್ಯಮದ ಸಾಧಕಿಯರಿವರು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
From agriculture to industry, education to innovation, the world is powered by women, everyday. World is celebrating international womens day today(March 08). Here are twitter reactions.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ