• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

1 ಕೋಟಿ ಬಹುಮಾನದ ಗಾಂಧಿ ಶಾಂತಿ ಪ್ರಶಸ್ತಿಗೆ 4 ವರ್ಷದಿಂದ ಆಯ್ಕೆ ಇಲ್ಲ

|

ನವದೆಹಲಿ, ಅಕ್ಟೋಬರ್ 2: ಭಾರತದಲ್ಲಿ ಇಂದು ಗಾಂಧೀಜಿಯ 149ನೇ ವರ್ಷಾಚರಣೆ. ಮಹಾತ್ಮ ಗಾಂಧೀಜಿ ಹೆಸರಲ್ಲಿ ಇರುವ 'ಮಹಾತ್ಮ ಗಾಂಧಿ ಅಂತರರಾಷ್ಟ್ರೀಯ ಶಾಂತಿ ಪ್ರಶಸ್ತಿ'ಯನ್ನು ಕಳೆದ ನಾಲ್ಕು ವರ್ಷಗಳಿಂದ ಯಾರಿಗೂ ನೀಡಿಲ್ಲ.

ಈ ಸಂಬಂಧ ಕೇಂದ್ರ ಸಂಸ್ಕೃತಿ ಸಚಿವಾಲಯದ ಅಧಿಕಾರಿಗಳು ಹೇಳುವ ಪ್ರಕಾರ, ಕಳೆದ ನಾಲ್ಕು ವರ್ಷಗಳಿಂದ ಈ ಪ್ರಶಸ್ತಿಗಾಗಿ ಹೆಸರನ್ನೇನೋ ಸೂಚಿಸಲಾಗುತ್ತಿದೆ. ಆದರೆ ಒಪ್ಪಿಗೆಗಾಗಿ ಕಾಯಲಾಗುತ್ತಿದೆ.

"ಹಲವರ ಹೆಸರನ್ನು ಶಿಫಾರಸು ಮಾಡಲಾಗಿದೆ. ಆದರೆ ಇದೇಕೆ ತಡವಾಗುತ್ತಿದೆ ಎಂದು ಹೇಳುವುದು ಕಷ್ಟ" ಎಂಬ ಮಾಹಿತಿ ಅಧಿಕೃತ ಮೂಲಗಳಿಂದಲೇ ಬರುತ್ತವೆ.

ಗಾಂಧಿ ಜಯಂತಿಯಂದೇ ಗಾಂಧಿ ಪ್ರತಿಮೆ ವಿರೂಪಗೊಳಿಸಿದ ಕಿಡಿಗೇಡಿಗಳು

ಗಾಂಧಿ ಆಲೋಚನೆಗಳಿಗೆ ಗೌರವ ಸೂಚಿಸುವ ಉದ್ದೇಶದಿಂದ ಬಾಪೂ 125ನೇ ವರ್ಷಾಚರಣೆ ಸಂದರ್ಭವಾದ 1995ರಲ್ಲಿ ಭಾರತ ಸರಕಾರ ಈ ಪ್ರಶಸ್ತಿಯನ್ನು ಹುಟ್ಟು ಹಾಕಿತು. ಕೊನೆಯದಾಗಿ, 2014ರಲ್ಲಿ ಈ ಪ್ರಶಸ್ತಿಯನ್ನು ಇಸ್ರೋಗೆ ನೀಡಲಾಯಿತು. ಆ ನಂತರ ಯಾವ ವ್ಯಕ್ತಿ ಅಥವಾ ಸಂಸ್ಥೆಗೂ ಘೋಷಣೆ ಆಗಿಲ್ಲ.

ಈ ವಾರ್ಷಿಕ ಪ್ರಶಸ್ತಿಯನ್ನು ವ್ಯಕ್ತಿ ಅಥವಾ ಸಂಸ್ಥೆಯು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಬದಲಾವಣೆ ತಂದಿದ್ದರೆ, ಅದಕ್ಕಾಗಿ ಅಹಿಂಸಾ ಮಾರ್ಗ ಸೇರಿದಂತೆ ಗಾಂಧೀಜಿ ಇತರ ಮಾರ್ಗಗಳನ್ನು ಅನುಸರಿಸಿದ್ದರೆ ಅಂಥವರಿಗೆ ಹಾಗೂ ಅಂಥ ಸಂಸ್ಥೆಗಳಿಗೆ ನೀಡಲಾಗುತ್ತದೆ.

ಪ್ರಶಸ್ತಿ ಮೊತ್ತವು ಒಂದು ಕೋಟಿ ರುಪಾಯಿಯನ್ನು ಒಳಗೊಂಡಿದ್ದು, ಜತೆಗೆ ಫಲಕ ಮತ್ತು ಪ್ರಶಸ್ತಿ ಪತ್ರ ಸಹ ಸೇರಿದೆ. ಈ ಪ್ರಶಸ್ತಿ ಘೋಷಣೆಗೆ ಯಾವುದೇ ದೇಶ, ನಂಬಿಕೆ ಅಥವಾ ಲಿಂಗ ಎಂಬ ಭೇದವಿಲ್ಲ.

ಮಹಾತ್ಮ ಮಾಡಿದ್ದು ಹತ್ತು ನಿಮಿಷದ ಭಾಷಣ! ಹಳ್ಳಿಗರು ನೀಡಿದ್ದು ಬುಟ್ಟಿಗಟ್ಟಲೆ ದೇಣಿಗೆ!

ಈ ಪ್ರಶಸ್ತಿ ತೀರ್ಪುಗಾರರ ಸಮಿತಿಯಲ್ಲಿ ಪ್ರಧಾನ ಮಂತ್ರಿ, ಲೋಕಸಭೆ ವಿರೋಧ ಪಕ್ಷದ ನಾಯಕರು, ಭಾರತದ ಮುಖ್ಯ ನ್ಯಾಯಮೂರ್ತಿ ಹಾಗೂ ಮತ್ತಿಬ್ಬರು ಪ್ರಮುಖರು ಇರುತ್ತಾರೆ. ಪ್ರಶಸ್ತಿಗೆ ಹೆಸರಿನ ಪ್ರಸ್ತಾವವನ್ನು ಕೇಂದ್ರ ಸಂಸ್ಕೃತಿ ಸಚಿವಾಲಯ ಸ್ವೀಕರಿಸುತ್ತದೆ. ಆಯಾ ವರ್ಷ ನೀಡುವ ಪ್ರಶಸ್ತಿಗೆ ಅರ್ಜಿ ಸ್ವೀಕರಿಸಲು ಏಪ್ರಿಲ್ ಮೂವತ್ತು ಕೊನೆ ದಿನವಾಗಿರುತ್ತದೆ.

ಆ ವ್ಯಕ್ತಿ ಅಥವಾ ಸಂಸ್ಥೆ ಪ್ರಸ್ತುತ ವರ್ಷದಿಂದ ಹಿಂದಿನ ಹತ್ತು ವರ್ಷದಲ್ಲಿ ಮಾಡಿದ ಪ್ರಮುಖ ಕಾರ್ಯಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ತೀರಾ ಪ್ರಾಮುಖ್ಯ ಇದ್ದರೆ ಅದಕ್ಕೂ ಹಿಂದಿನ ಕೆಲಸ ಕೂಡ ಪರಿಗಣಿಸಲಾಗುತ್ತದೆ.

ಆ ಕಹಿ ಅನುಭವದ ನಂತರ ಗಾಂಧೀಜಿ ಮತ್ತೆ ಮೈಸೂರಿಗೆ ಬರಲಿಲ್ಲ...

ಈ ಪ್ರಶಸ್ತಿಗೆ ಮೊದಲು ಪಾತ್ರರಾದವರು ತಾಂಜೇನಿಯಾದ ಮಾಜಿ ಅಧ್ಯಕ್ಷರಾದ ಜೂಲಿಯಸ್ ಕೆ ನೈಯೆರೆ. ಆ ನಂತರ ಪ್ರಶಸ್ತಿ ಪುರಸ್ಕೃತರ ಪಟ್ಟಿ ಇಂತಿದೆ.

ಎ.ಟಿ.ಅರಿಯರತ್ನೆ

ಗೆರ್ಹಾರ್ಡ್ ಫಿಷರ್

ರಾಮಕೃಷ್ಣ ಮಿಷನ್

ಬಾಬಾ ಆಮ್ಟೆ

ನೆಲ್ಸನ್ ಮಂಡೇಲಾ ಮತ್ತು ಗ್ರಾಮೀಣ್ ಬ್ಯಾಂಕ್ ಆಫ್ ಬಾಂಗ್ಲಾದೇಶ್

ಆರ್ಚ್ ಬಿಷಪ್ ಡೆಸ್ಮಂಡ್ ಟುಟು

ಚಂಡೀ ಪ್ರಸಾದ್ ಭಟ್ಟ್

English summary
As the country celebrates the 149th birth anniversary of Mahatma Gandhi Tuesday, the annual 'International Gandhi Peace Prize', named after Father of the Nation, has not been conferred for the last four years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X