ಇಂಗ್ಲೀಷ್ ಬರಲ್ಲ ಅಂತಾ ಕಾಲೇಜಿನಲ್ಲಿ ರೇಗಿಸಿದ್ರು.. ಛಲ ಬಿಡದೆ ಮೊದಲ ಯತ್ನದಲ್ಲೇ 50ನೇ ರ್‍ಯಾಂಕ್ ಪಡೆದು IAS ಆದ ಸುರಭಿ

ಯುಪಿಎಸ್ ಸಿ ಪರೀಕ್ಷೆ ಪಾಸ್ ಮಾಡುವುದು ಎಂದರೆ ಅಷ್ಟು ಸುಲಭದ ಮಾತಲ್ಲ. ಅದಕ್ಕೆ ಕಠಿಣ ಪರಿಶ್ರಮ, ಅಪಾರ ಶ್ರದ್ಧೆ ಹಾಗೂ ತಾಳ್ಮೆ ಇರಬೇಕು. ಅದರಲ್ಲೂ ಕನ್ನಡ ಅಥವಾ ಹಿಂದಿ ಮಾಧ್ಯಮದಲ್ಲಿ ಓದಿದ ಗ್ರಾಮೀಣ ಪ್ರತಿಭೆಗಳಿಗೆ ಇಂಗ್ಲೀಷ್ ಭಾಷೆ ಎನ್ನುವುದು ಬಹುದೊಡ್ಡ ಸವಾಲಾಗಿರುತ್ತದೆ. ಆದರೆ, ಈ ಎಲ್ಲ ಅಡೆತಡೆಗಳನ್ನ ಮೆಟ್ಟಿ ನಿಂತು, ಇಂಗ್ಲೀಷ್ ಬರುವುದಿಲ್ಲ ಎಂದು ಹೀಯಾಳಿಸಿದವರ ಮುಂದೆಯೇ ಮೊದಲ ಪ್ರಯತ್ನದಲ್ಲೇ 50ನೇ ರ್‍ಯಾಂಕ್ ಪಡೆದು ಐಎಎಸ್ ಅಧಿಕಾರಿಯಾಗಿರುವ ಸಾಧಕಿ ಸುರಭಿ ಗೌತಮ್ ಅವರ ಯಶಸ್ಸಿನ ಕಥೆ ಎಲ್ಲರಿಗೂ ಸ್ಫೂರ್ತಿ ಎನ್ನಬಹುದು.

ಮಧ್ಯಪ್ರದೇಶದ ಹಳ್ಳಿಯಿಂದ ಯುಪಿಎಸ್‌ಸಿವರೆಗಿನ ಪಯಣ

ಸುರಭಿ ಗೌತಮ್ ಅವರು ಮೂಲತಃ ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಅಮ್ಡಾರಾ ಎಂಬ ಸಣ್ಣ ಹಳ್ಳಿಯವರು. ಅವರ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವೆಲ್ಲವೂ ಸಂಪೂರ್ಣವಾಗಿ ಹಿಂದಿ ಮಾಧ್ಯಮದಲ್ಲೇ ಮಾಡಿದ್ದರು. ಹಳ್ಳಿಯ ಶಾಲೆಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದ ಅವರು, ಉನ್ನತ ವ್ಯಾಸಂಗಕ್ಕಾಗಿ ನಗರದ ಕಾಲೇಜಿಗೆ ಕಾಲಿಟ್ಟಾಗ ಹೊಸದೊಂದು ಪ್ರಪಂಚವೇ ಕಣ್ಣ ಮುಂದೆ ಬಂದಂತೆ ಭಾಸವಾಗಿತ್ತು.

Inspiring IAS Surbhi Gautam Success Story From Being Mocked for Poor English to AIR 50 in UPSC

ಅಲ್ಲಿ ಇಂಗ್ಲೀಷ್ ಭಾಷೆಯದ್ದೇ ಪ್ರಾಬಲ್ಯವಿತ್ತು. ಇಂಗ್ಲೀಷ್ ಸರಿಯಾಗಿ ಅರ್ಥವಾಗದ ಹಾಗೂ ಮಾತನಾಡಲು ಬಾರದ ಕಾರಣಕ್ಕೆ ಅವರು ಅನೇಕ ಬಾರಿ ಎಲ್ಲರೆದರೂ ಮುಜುಗರ ಎದುರಿಸಬೇಕಾಯಿತು.

ಇಂಗ್ಲೀಷ್ ಬಾರದ ಕಾರಣಕ್ಕೆ ಎದುರಿಸಿದ ಅವಮಾನ

ಕಾಲೇಜಿನ ದಿನಗಳಲ್ಲಿ ಸುರಭಿ ಅವರಿಗೆ ಇಂಗ್ಲೀಷ್‌ನಲ್ಲಿ ಅಷ್ಟು ನಿರರ್ಗಳವಾಗಿ ಮಾತನಾಡಲು ಬರುತ್ತಿರಲಿಲ್ಲ. ಈ ಕಾರಣಕ್ಕಾಗಿ ಅವರ ಸಹಪಾಠಿಗಳು ಅವರನ್ನ ನೋಡಿ ನಗುತ್ತಿದ್ದರು ಹಾಗೂ ಹೀಯಾಳಿಸುತ್ತಿದ್ದರು.

ಬಹುತೇಕರು ಇಂತಹ ಪರಿಸ್ಥಿತಿಯಲ್ಲಿ ಕುಗ್ಗಿ ಹೋಗುತ್ತಾರೆ ಅಥವಾ ತಮ್ಮ ಕನಸುಗಳನ್ನೇ ಕೈಬಿಡುತ್ತಾರೆ. ಆದರೆ ಸುರಭಿ ಹಾಗೆ ಮಾಡಲಿಲ್ಲ ನೋಡಿ. ತಮ್ಮ ಈ ಅತಿದೊಡ್ಡ ದೌರ್ಬಲ್ಯವನ್ನೇ ಶಕ್ತಿಯನ್ನಾಗಿ ಪರಿವರ್ತಿಸಿಕೊಳ್ಳಲು ನಿರ್ಧರಿಸಿದರು. ಕೇವಲ ಭಾಷೆ ನನ್ನ ಭವಿಷ್ಯವನ್ನ ನಿರ್ಧರಿಸಲು ಸಾಧ್ಯವಿಲ್ಲ, ಬದಲಾಗಿ ಕಠಿಣ ಶ್ರಮದಿಂದ ಮಾತ್ರ ಯಶಸ್ಸನ್ನ ಕಂಡುಕೊಳ್ಳಬಹುದು ಎಂದು ಅವರು ಪಣತೊಟ್ಟರು.

ಪ್ರತಿದಿನ 10 ಇಂಗ್ಲೀಷ್‌ ಪದಗಳ ಕಲಿಕೆ

ಇಂಗ್ಲೀಷ್ ಕಲಿಯಲೇಬೇಕು ಎಂದು ನಿರ್ಧಾರ ಮಾಡಿಕೊಂಡ ಸುರಭಿ ಗೌತಮ್, ಒಂದು ಸರಳ ನಿಯಮವನ್ನ ಪಾಲಿಸಲು ಆರಂಭಿಸಿದರು. ಪ್ರತಿದಿನ 10 ಹೊಸ ಇಂಗ್ಲೀಷ್ ಪದಗಳನ್ನ ಕಲಿಯುವುದು ಹಾಗೂ ಅವುಗಳನ್ನ ತಾವು ಮಾತನಾಡುವಾಗ ಬಳಸಿಕೊಳ್ಳುವುದನ್ನಾ ರೂಢಿ ಮಾಡಿಕೊಂಡರು.

ದಿನದಿಂದ ದಿನಕ್ಕೆ ಅವರ ಇಂಗ್ಲೀಷ್ ಜ್ಞಾನ ಜಾಸ್ತಿಯಾಯಿತು. ಇದರ ಜೊತೆಗೆ ಯುಪಿಎಸ್‌ಸಿ ಪರೀಕ್ಷೆಗೂ ತಯಾರಿ ನಡೆಸಿದರು. ತಮ್ಮ ಪರಿಶ್ರಮದ ಫಲವಾಗಿ, ಯುಪಿಎಸ್‌ಸಿ ಪರೀಕ್ಷೆಯ ಮೊದಲ ಪ್ರಯತ್ನದಲ್ಲೇ ಆಲ್ ಇಂಡಿಯಾ ರ್‍ಯಾಂಕ್ (AIR) 50 ಪಡೆಯುವ ಮೂಲಕ ಐಎಎಸ್ ಅಧಿಕಾರಿಯಾಗಿ ಹೊರಹೊಮ್ಮಿದರು.

ಐಎಎಸ್ ಅಧಿಕಾರಿ ಸುರಭಿ ಗೌತಮ್ ಪ್ರಸ್ತುತ ಹುದ್ದೆ

ತಮ್ಮ ಈ ಸಾಧನೆಯ ಮೂಲಕ ಯುವಜನತೆಗೆ ಮಾದರಿಯಾಗಿರುವ ಐಎಎಸ್ ಅಧಿಕಾರಿ ಸುರಭಿ ಗೌತಮ್ ಅವರು ಪ್ರಸ್ತುತ ಗುಜರಾತ್ ಕೇಡರ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಗುಜರಾತ್‌ನ ಅಹಮದಾಬಾದ್ ಜಿಲ್ಲೆಯ ವಿರಾಮಗಾಮ್‌ನಲ್ಲಿ ಜಿಲ್ಲಾ ಅಭಿವೃದ್ಧಿ ಅಧಿಕಾರಿಯಾಗಿ (DDO) ಕಾರ್ಯನಿರ್ವಹಿಸಿದ್ದಾರೆ. ಅದಕ್ಕೂ ಮುನ್ನ ವಡೋದರಾ ಜಿಲ್ಲೆಯ ಅಸಿಸ್ಟೆಂಟ್ ಕಲೆಕ್ಟರ್ ಆಗಿ ಹಾಗೂ ಗಾಂಧಿನಗರದ ಕಲೆಕ್ಟರ್ ಆಗಿಯೂ ಹೆಚ್ಚುವರಿ ಜವಾಬ್ದಾರಿ ನಿಭಾಯಿಸಿದ್ದಾರೆ.

ನಿಮ್ಮ ಹಿನ್ನೆಲೆ ಯಾವುದೇ ಇರಲಿ, ನಿಮ್ಮಲ್ಲಿ ಸಾಧಿಸುವ ಛಲವಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ಸುರಭಿ ಗೌತಮ್ ಅವರೇ ಒಂದೊಳ್ಳೆ ಉದಾಹರಣೆ. ಅಂದು ಇಂಗ್ಲೀಷ್ ಬಾರದ ಹಳ್ಳಿ ಹುಡುಗಿ ಎಂದು ರೇಗಿಸಿದವರೇ, ಇಂದು ಅವರ ಸಾಧನೆಯನ್ನ ನೋಡಿ ತಲೆದೂಗುವಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+