ಗೋವಾ ಕಾಂಗ್ರೆಸ್ ಅಧ್ಯಕ್ಷರ ರಾಜೀನಾಮೆ ಮತ್ತು ರಾಹುಲ್ ಮಾತಿನ ಮೋಡಿ!

ಪಣಜಿ, ಮಾರ್ಚ್ 21: ಗೋವಾ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಶಾಂತಾರಾಮ್ ನಾಯ್ಕ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅದಕ್ಕೆ ಅವರು ನೀಡಿದ ಕಾರಣ... 'ರಾಹುಲ್ ಗಾಮಧಿಯವರ ಭಾಷಣ ಕೇಳಿ ಸ್ಫೂರ್ತಿ ಸಿಕ್ಕು ಈ ನಿರ್ಧಾರಕ್ಕೆ ಬಂದಿದ್ದೇನೆ' ಎಂಬುದು!

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಕಾಂಗ್ರೆಸ್ ಮಹಾಧಿವೇಶನದಲ್ಲಿ ರಾಹುಲ್ ಗಾಂಧಿಯವರ ಭಾಷಣ ಕೇಳಿ ನನಗೆ ಸ್ಫೂರ್ತಿ ಸಿಕ್ಕಂತಾಯಿತು. ಅವರು ತಮ್ಮ ಭಾಷಣದಲ್ಲಿ ಹೇಳಿದಂತೆ ಯುವಕರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿದ್ದೇನೆ ಎಂದು 71 ವರ್ಷದ ಕಾಂಗ್ರೆಸ್ ನಾಯಕ ಹೇಳಿದ್ದಾರೆ.

ನಾಯ್ಕ್ ಅವರು, ಉತ್ತರ ಗೋವಾ ಕ್ಷೇತ್ರದಿಂದ 1984 ರಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದರು. ನಂತರ ಎರಡು ಬಾರಿ ರಾಜ್ಯಸಭೆಗೂ ಆಯ್ಕೆಯಾಗಿದ್ದರು. ಕಳೆದ ಜೂನ್ ನಿಂದ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದರು.

Inspired by Rahul Gandhi’s speech Goa Congress president resigns

ನಾನು ರಾಜೀನಾಮೆ ನೀಡುತ್ತಿದ್ದ, ತೆರವಾಗುವ ಜಾಗಕ್ಕೆ 10 ವರ್ಷಕ್ಕಿಂತ ಹೆಚ್ಚು ಕಾಲ ಪಕ್ಷದಲ್ಲಿ ದುಡಿದ, ಪ್ರಾಮಾಣಿಕ ಕಾಂಗ್ರೆಸ್ ಸದಸ್ಯರಿಗೆ ಈ ಸ್ಥಾನವನ್ನು ನೀಡುವಂತೆ ಸಲಹೆ ನೀಡುತ್ತೇನೆ ಎಂದೂ ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+