ಶ್ರೀನಗರದ ನಿಸರ್ಗ ಸೌಂದರ್ಯ, ಸೈನಾ ನೆಹ್ವಾಲ್ ಆಟ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್,01: ಒಂದೆಡೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ನಡೆದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕೈಗೊಂಡ ಪ್ರತಿಘಟನೆ ಎರಡನೇ ದಿನಕ್ಕೂ ಮುಂದುವರೆದಿದೆ, ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.

ಮತ್ತೊಂದೆಡೆ ಕೋಲ್ಕತ್ತಾದಲ್ಲಿ ನಿರ್ಮಾಣದ ಹಂತದಲ್ಲಿದ್ದ ಫ್ಲೈ ಓವರ್ ಬಿದ್ದು 20ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇದರ ಅವಶೇಷದಡಿ ವಾಹನಗಳು, ಸಾಕಷ್ಟು ಜನರು ಸಿಲುಕಿಕೊಂಡಿದ್ದು, ಜೀವನ್ಮರಣದ ನಡುವೆ ಹೋರಾಡುತ್ತಿರುವವರಿಗಾಗಿ ಮಿಲಿಟರಿ ಸಿಬ್ಬಂದಿಯಿಂದ ರಕ್ಷಣಾ ಕಾರ್ಯ ಮುಂದುವರೆದಿದೆ.[ಕೋಲ್ಕತ್ತಾ ಮೇಲ್ಸೇತುವೆ ದುರಂತ: ತುರ್ತು ಸೇವೆಗಾಗಿ ಕರೆ ಮಾಡಿ]

ಈ ಎರಡು ಘಟನೆಗಳ ನಡುವೆ ವೆಸ್ಟ್ ಇಂಡೀಸ್ ನಡುವೆ ನಡೆದ ವಿಶ್ವಕಪ್ ಟಿ20 ಸೆಮಿ ಫೈನಲ್ ಪಂದ್ಯದಲ್ಲಿ ಸೋತಿದ್ದಾರೆ. ಫೈನಲ್ ಗೆ ತೆರಳಲು ಇದ್ದ ಅವಕಾಶವನ್ನು ಕಳೆದುಕೊಂಡಿದ್ದಾರೆ. ರಾಮಚಂದ್ರಪುರ ಮಠದ ರಾಘವೇಶ್ವರ ಭಾರತಿ ಸ್ವಾಮಿಗಳ ಮೇಲೆ ರಾಮಕಥಾ ಗಾಯಕಿ ಪ್ರೇಮಲತಾ ಹೊರಿಸಿದ್ದ ಅತ್ಯಾಚಾರ ಆರೋಪ ಪ್ರಕರಣ ಖುಲಾಸೆಯಾಗಿದೆ. ಈ ಎಲ್ಲಾ ಸುದ್ದಿಗಳ ಜೊತೆ ಮೋದಿ ಪ್ರವಾಸ, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಆಟದ ಭಂಗಿ ಈ ಸುದ್ದಿಗಳು ಇವೆ.

ನಿಸರ್ಗದೊಂದಿಗೆ ಪಯಣ ನಿರಂತರ

ನಿಸರ್ಗದೊಂದಿಗೆ ಪಯಣ ನಿರಂತರ

ಸೂರ್ಯಸ್ತಮದ ವಿಹಂಗಮ ನೋಟ ನೋಡಲು ಕಣ್ಣೆರಡು ಸಾಲದು. ಅದರಲ್ಲೂ ಆಗಸದಲ್ಲಿ ಕೆಂಪೇರಿದ ಸೂರ್ಯ, ನದಿಯಂಗಳಲ್ಲಿ ನಾವಿಕ ಹುಟ್ಟಿನೊಂದಿಗೆ ಚಲಿಸುವ ದೋಣಿ ವ್ಹಾರೆ ವ್ಹಾ...ಶ್ರೀನಗರದಲ್ಲಿ ಕಂಡು ಮನೋಹರವಾದ ಸೌಂದರ್ಯ ನೀವು ನೋಡಿ ಸವಿಯಿರಿ

ಬ್ಯಾಂಡ್ಮಿಟನ್ ತಾರೆಯ ಆಟದ ಭಂಗಿ

ಬ್ಯಾಂಡ್ಮಿಟನ್ ತಾರೆಯ ಆಟದ ಭಂಗಿ

ಭಾರತದ ಬ್ಯಾಂಡ್ಮಿಟನ್ ತಾರೆ ಸೈನಾ ನೆಹ್ವಾಲ್ ಅವರು ಯೊನೆಕ್ಸ್ ಸನ್ ರೈಸ್ ಇಂಡಿಯಾ ಓಪನ್ 2016ನಲ್ಲಿ ಎದುರಾಳಿ ಥೈಲ್ಯಾಂಡಿನ ನಿಚಾನ್ ಜಿಂದಾಪೊಲ್ ಅವರ ಹೊಡೆತವನ್ನು ಎದುರಿಸುವಾಗ ಕಂಡು ಬಂದ ಭಂಗಿ

ಪ್ರಾಣ ಉಳಿಸಿಕೊಳ್ಳಲು ಹೆಣಗಾಟ

ಪ್ರಾಣ ಉಳಿಸಿಕೊಳ್ಳಲು ಹೆಣಗಾಟ

ನಿರ್ಮಾಣದ ಹಂತದಲ್ಲಿದ್ದ ಫ್ಲೈ ಓವರ್ ಬಿದ್ದ ಪರಿಣಾಮ ಸಾಕಷ್ಟು ಜನರು ಪ್ರಾಣ ತೆತ್ತಿದ್ದಾರೆ. ಅವಶೇಷಗಳಡಿ ಸಿಲುಕಿದವರ ನರಳಾಟ ಹೇಳತೀರದಾಗಿದೆ. ಮಿಲಿಟರಿ ಪಡೆಯು ತಮ್ಮ ಪ್ರಾಣ ಒತ್ತೆಯಿಟ್ಟು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.

ವಿದ್ಯಾರ್ಥಿಗಳಿಗೆ ಎಬಿವಿಪಿ ಬೆಂಬಲ

ವಿದ್ಯಾರ್ಥಿಗಳಿಗೆ ಎಬಿವಿಪಿ ಬೆಂಬಲ

ರಸಾಯನ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಪ್ರತಿಭಟನಾ ನಿರತರಾದ ವಿದ್ಯಾರ್ಥಿಗಳ ಬೆಂಬಲಕ್ಕೆ ಎಬಿವಿಪಿ ನಿಂತಿದೆ. ಆದರೆ ಇವರನ್ನು ಲೆಕ್ಕಿಸದೆ ಪೊಲೀಸರು ಅವರಿಗೂ ಲಾಠಿಪ್ರಹಾರ ನಡೆಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Saina Nehwal plays against Nitchaon Jindapol of Thailand during the Yonex-Sunrise India Open 2016 in New Delhi. Army personnels with others on the rescue work at the spot where under construction flyover collapsed in Vivekananda Road,in Kolkata
Please Wait while comments are loading...