Indri Diwali Editon: ದೀಪಾವಳಿಗೆ ಲಗ್ಗೆ ಇಟ್ಟ ‘ಇಂದ್ರಿ’! ಭಾರತದಲ್ಲಿ ಕೇವಲ 600 ಬಾಟಲಿ, ಏನಿದರ ವಿಶೇಷತೆ?
ಬೆಂಗಳೂರು: ದೀಪಾವಳಿ ಹಬ್ಬಕ್ಕೆ (Deepavali Festival 2026) ಪ್ರತಿ ವರ್ಷದಂತೆ ಈ ವರ್ಷ ಮದ್ಯಪ್ರಿಯರಿಗಾಗಿ ಅತ್ಯಪರೂಪದ 'ಇಂದ್ರಿ'ಯ ದಿವಾಳಿ ಕಲೆಕ್ಟರ್ಸ್ ಎಡಿಷನ್ 2026 ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದು ಜಗತ್ತಿನ 'ಬೆಸ್ಟ್ ವಿಸ್ಕಿ' ಎಂದು ಈಗಾಗಲೇ ಹೆಸರು ಪಡೆದಿದೆ. ಪಿಕಾಡಿಲಿ ಡಿಸ್ಟಿಲರೀಸ್ ಒಡೆತನದಿಂದ ಈ 'ಇಂದ್ರಿ ಸಿಂಗಲ್ ಮಾಲ್ಟ್ ವಿಸ್ಕಿ'ಯು ಈ ವರ್ಷ ದೀಪಾವಳಿಗೆ ಬಿಡುಗಡೆ ಮಾಡಲಾಗಿದೆ. ಈ ಮೂಲಕ ಖ್ಯಾತ ಬ್ರ್ಯಾಂಡ್‌ಗಳ ವಿಸ್ಕಿ ಪ್ರಿಯರಿಗೆ ಹಬ್ಬದ ಗಿಫ್ಟ್ ಸಿಕ್ಕಾಂತಾಗಿದೆ. ಇಂದ್ರಿ ಮದ್ಯ ತಯಾರಿಕಾ ಮುಖ್ಯ ಘಟಕವು ಭಾರತದಲ್ಲಿದೆ ಎಂಬುದು ಮತ್ತೊಂದು ವಿಶೇಷ.
ಲಂಡನ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದನ್ನು ಯಶಸ್ವಿಯಾಗಿ ಅನಾವರಣಗೊಳಿಸಲಾಗಿತ್ತು. ಇದೀಗ ಭಾರತೀಯ ಗ್ರಾಹಕರಿಗಾಗಿ ಈ ವಿಶೇಷ 'ರೂಬಿ ಪೋರ್ಟ್ ಕ್ಯಾಸ್ಕ್' ವಿಸ್ಕಿಯನ್ನು ಪರಿಚಯಿಸಲಾಗಿದೆ. ಪ್ರಸಿದ್ಧ ಮಾಸ್ಟರ್ ಬ್ಲೆಂಡರ್ ಸುರಿಂದರ್ ಕುಮಾರ್ ಅವರ ಕೈಚಳಕದಲ್ಲಿ ಇದನ್ನು ತಯಾರಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಏನಿದರ ವಿಶೇಷತೆ? ಏಕೆ ಇದು ಅತ್ಯಪರೂಪ?
ಇದು ಸಾಮಾನ್ಯ ವಿಸ್ಕಿಯಲ್ಲ. ಇದು ಕೇವಲ ದೀಪಾವಳಿಯ ವಿಶೇಷ ಬಿಡುಗಡೆಯಾಗಿದ್ದು, ಭಾರತೀಯ ಮಾರುಕಟ್ಟೆಗೆ ಕೇವಲ 600 ಬಾಟಲಿಗಳನ್ನು ಮಾತ್ರ ರಿಲೀಸ್ ಮಾಡಲಾಗಿದೆ. ಪ್ರತಿ ಬಾಟಲಿಯ ಮೇಲೂ ಅದರದೇ ಆದ ನಂಬರ್ ಇರುತ್ತದೆ. ಉತ್ತರ ಭಾರತದ ಆರು ಸಾಲಿನ ಬಾರ್ಲಿಯನ್ನು ಬಳಸಿ, ಸಾಂಪ್ರದಾಯಿಕ 'ಕಾಪರ್ ಪಾಟ್ ಸ್ಟಿಲ್ಸ್' ಮೂಲಕ ಇದನ್ನು ಭಟ್ಟಿ ಇಳಿಸಲಾಗಿದೆ. ಪೋರ್ಚುಗಲ್ ದೇಶದಿಂದ ತರಿಸಲಾದ ವಿಶೇಷ 'ರೂಬಿ ಪೋರ್ಟ್ ವೈನ್' ಪೀಪಾಯಿಗಳಲ್ಲಿ ಇದನ್ನು ಸಂಗ್ರಹಿಸಿಟ್ಟು ಹದಗೊಳಿಸಲಾಗಿದೆ. ಈ ವಿಸ್ಕಿಯಲ್ಲಿ ಬ್ಲ್ಯಾಕ್ ಚೆರ್ರಿ, ಕಾಡು ಹಣ್ಣುಗಳು, ಹುರಿದ ಒಣ ಬೀಜಗಳು, ವೆನಿಲ್ಲಾ, ಜೇನುತುಪ್ಪ ಮತ್ತು ಅಂಜೂರದ ಹಣ್ಣಿನ ಸುವಾಸನೆ ಮತ್ತು ರುಚಿಯ ಅದ್ಭುತ ಮಿಶ್ರಣವಿದೆ.
ರಾಜಮನೆತನ ನೆನಪಿಸುವ ಬಾಟಲಿಯ ವಿನ್ಯಾಸ
ಈ ವಿಸ್ಕಿಯ ಬಾಟಲಿ ಮತ್ತು ಪ್ಯಾಕೇಜಿಂಗ್ ಅನ್ನು 'ಇಂಡಿಯಾ ಸರ್ಕಸ್'ನ ಪ್ರಸಿದ್ಧ ವಿನ್ಯಾಸಗಾರ ಕೃಷ್ಣಾ ಮೆಹ್ತಾ ರೂಪಿಸಿದ್ದಾರೆ. ಭಾರತದ ರಾಜಮನೆತನದ ಹೆಮ್ಮೆ ಮತ್ತು ಶ್ರೀಮಂತ ಸಂಸ್ಕೃತಿಯನ್ನು ಬಿಂಬಿಸುವಂತೆ, ಮಾರ್ವಾಡಿ ಕುದುರೆ ಮತ್ತು ಹೂವಿನ ಚಿತ್ತಾರ ಈ ಬಾಟಲಿಯ ಮೇಲೆ ಸುಂದರವಾಗಿ ಮೂಡಿದೆ.
ಜಾಗತಿಕ ಮಟ್ಟದಲ್ಲಿ ಪ್ರಶಸ್ತಿಗಳ ಸುರಿಮಳೆ
2023ರಲ್ಲಿ ಇಂದ್ರಿಯ ದಿವಾಳಿ ಕಲೆಕ್ಟರ್ಸ್ ಎಡಿಷನ್ ʼವಿಶ್ವದ ಅತ್ಯುತ್ತಮ ವಿಸ್ಕಿʼ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿತ್ತು. ಈ ಬಾರಿಯ '2026 ಎಡಿಷನ್' ಕೂಡ ಭಾರತದಲ್ಲಿ ಬಿಡುಗಡೆಯಾಗುವ ಮುನ್ನವೇ ಲಂಡನ್‌ನ 'ದಿ ವಿಸ್ಕಿ ಶೋ'ನಲ್ಲಿ ಜಾಗತಿಕ ವಿಸ್ಕಿ ತಜ್ಞರಿಂದ ಭಾರೀ ಮೆಚ್ಚುಗೆ ಪಡೆದಿದೆ. 'ಯುಎಸ್‌ಎ ಸ್ಪಿರಿಟ್ಸ್ ರೇಟಿಂಗ್ಸ್ 2026' ರಲ್ಲಿ ಡಬಲ್ ಗೋಲ್ಡ್ (96 ಪಾಯಿಂಟ್ಸ್), ಲಂಡನ್ ಮತ್ತು ನ್ಯೂಯಾರ್ಕ್‌ನ ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದಿದೆ. ಒಟ್ಟಾರೆಯಾಗಿ ಈ ಸರಣಿ ಬರೋಬ್ಬರಿ 29 ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿದೆ!
ಭಾರತದಲ್ಲಿ ಎಲ್ಲಿ, ಯಾವಾಗ ಸಿಗಲಿದೆ ಈ ವಿಸ್ಕಿ?
'ಇಂದ್ರಿ ದಿವಾಳಿ ಕಲೆಕ್ಟರ್ಸ್ ಎಡಿಷನ್ 2026' ವಿಸ್ಕಿಯು ಅಕ್ಟೋಬರ್ ಮಧ್ಯಭಾಗದಿಂದ ಭಾರತದಲ್ಲಿ ಲಭ್ಯವಿರಲಿದೆ. 700 ಎಂಎಲ್ (50% ಎಬಿವಿ) ಸಾಮರ್ಥ್ಯದ ಕೇವಲ 600 ಬಾಟಲಿಗಳು ಬೆಂಗಳೂರು, ಚಂಡೀಗಢ ಮತ್ತು ಗುರುಗ್ರಾಮ್ ನಗರಗಳಲ್ಲಿ ಲಭ್ಯವಿರಲಿವೆ.
ವಿದೇಶಿ ಪ್ರಯಾಣಿಕರಿಗಾಗಿ, ಇದರ 58.5% ಎಬಿವಿ ಅಂತಾರಾಷ್ಟ್ರೀಯ ಆವೃತ್ತಿಯು ದೆಹಲಿ, ಮುಂಬೈ, ಹೈದರಾಬಾದ್ ಮತ್ತು ಬೆಂಗಳೂರಿನ ಆಯ್ದ 'ಡ್ಯೂಟಿ ಫ್ರೀ' ಮಳಿಗೆಗಳಲ್ಲಿ ಹಾಗೂ ದುಬೈ ಡ್ಯೂಟಿ ಫ್ರೀನಲ್ಲಿ ಸಿಗಲಿದೆ.
ಈ ಬಗ್ಗೆ ವಿವರ ಹಂಚಿಕೊಂಡಿರುವ ಮಾಸ್ಟರ್ ಬ್ಲೆಂಡರ್ ಸುರಿಂದರ್ ಕುಮಾರ್, "ಇದು ಕೇವಲ ದೀಪಾವಳಿ ಆಚರಣೆಗಷ್ಟೇ ಸೀಮಿತವಲ್ಲ. ಭಾರತದ ಸಿಂಗಲ್ ಮಾಲ್ಟ್ ವಿಸ್ಕಿ ಜಾಗತಿಕ ಮಟ್ಟದಲ್ಲಿ ಎಷ್ಟು ಬೆಳೆದಿದೆ ಎಂಬುದರ ಸಂಕೇತವಿದು. ಅತ್ಯುತ್ತಮ ವಿಸ್ಕಿಯನ್ನು ಭಾರತದಿಂದಲೂ ಜಗತ್ತಿಗೆ ನೀಡಬಹುದು ಎಂಬುದನ್ನು ಇಂದ್ರಿ ಸಾಬೀತುಪಡಿಸಿದೆ," ಎಂದು ತಿಳಿಸಿದ್ದಾರೆ.
ಭಾರತದಲ್ಲಿ ಮುಖ್ಯ ತಯಾರಿಕಾ ಘಟಕ
ಇನ್ನೊಂದು ವಿಶೇಷತೆ ಎಂದರೆ ಇಂದ್ರಿ ವಿಸ್ಕಿ ಮುಖ್ಯ ತಯಾರಿಕಾ ಘಟಕವು (ಡಿಸ್ಟಿಲರಿ) ಭಾರತದ ಹರಿಯಾಣ ರಾಜ್ಯದ ಕರ್ನಾಲ್ ಜಿಲ್ಲೆಯ ಇಂದ್ರಿ ಎಂಬ ಹಳ್ಳಿಯಲ್ಲಿದೆ ಎಂಬುದು ಮತ್ತೊಂದು ವಿಶೇಷವಾಗಿದೆ.
(ವಿಶೇಷ ಸೂಚನೆ: ವಿಸ್ಕಿ ಸುದ್ದಿ ಕೇವಲ ಮಾಹಿತಿಗಾಗಿ ವಿನಃ ಉತ್ತೇಜನಕ್ಕಾಗಿ ಅಲ್ಲ)


Click it and Unblock the Notifications
