Indore stepwell disaster: ಇಂದೋರ್ ಮೆಟ್ಟಿಲುಬಾವಿ ಬೆಳೇಶ್ವರ ದೇವಸ್ಥಾನ ತೆರವು
ಇಂದೋರ್ ಏಪ್ರಿಲ್ 3: ಮೆಟ್ಟಿಲುಬಾಯಿ ಕುಸಿತ ಘಟನೆಯ ಬಳಿಕ ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ಬೆಳೇಶ್ವರ ಮಹಾದೇವ್ ದೇವಸ್ಥಾನವನ್ನು ಕೆಡವಲು ಪಾಲಿಕೆ ಹಾಗೂ ಪೊಲೀಸ್ ಮುಂದಾಗಿದೆ. 36 ಜನರ ಸಾವಿಗೆ ಕಾರಣವಾದ ಬೆಳೇಶ್ವರ ಮಹಾದೇವ್ ದೇವಸ್ಥಾನ ಅಕ್ರಮವಾಗಿ ಕಟ್ಟಲಾಗಿದೆ ಎಂದು ಆರೋಪಿಸಿ ಇಂದು ಅದನ್ನು ಐದಕ್ಕೂ ಹೆಚ್ಚು ಬುಲ್ಡೋಜರ್‌ಗಳ ಮೂಲ ಉರುಳಿಸಲಾಯಿತು.
ಸೋಮವಾರ ಬೆಳಗ್ಗೆ ದೇವಸ್ಥಾನಕ್ಕೆ ಆಗಮಿಸಿದ ಪಾಲಿಕೆ ಹಾಗೂ ಪೊಲೀಸ್ ಅಧಿಕಾರಿಗಳ ತಂಡ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಂಡಿದೆ. ದೇವಸ್ಥಾನ ತೆರವಿಗೆ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದ್ದು ನಾಲ್ಕು ಪೊಲೀಸ್ ಠಾಣೆಗಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಘಟನಾ ಸ್ಥಳದಲ್ಲಿ ಉಪ ಮಹಾನಗರ ಪಾಲಿಕೆ ಆಯುಕ್ತರು, ಜಿಲ್ಲಾಧಿಕಾರಿ ಹಾಗೂ ಇತರೆ ಅಧಿಕಾರಿಗಳು ಇದ್ದಾರೆ.
ಈ ದೇವಸ್ಥಾನವನ್ನು ಅಕ್ರಮವಾಗಿ ಕಟ್ಟಲಾಗಿದೆ ಎಂದು ಈಗಾಗಲೇ ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್ ನಿವಾಸಿಗಳು ದೂರಿದ್ದರು. ಆಗಲೇ ಕ್ರಮ ಕೈಗೊಂಡಿದ್ದರೆ ಒಂದಕ್ಕಿಂತ ಹೆಚ್ಚು ಸದಸ್ಯರನ್ನು ಕಳೆದುಕೊಂಡ ದುರಂತವನ್ನು ತಪ್ಪಿಸಬಹುದಾಗಿತ್ತು ಎಂದು ಎನ್‌ಡಿಟಿವಿ ತನಿಖೆ ತೋರಿಸಿದೆ.

ಬೆಳೇಶ್ವರ ದೇವಸ್ಥಾನ ಧ್ವಂಸ
ಕುಸಿದ ದೇವಾಲಯದ ಪ್ರದೇಶ ಅಕ್ರಮವಾಗಿದ್ದು, ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್ ಕಳೆದ ವರ್ಷ ನೆಲಸಮ ಮಾಡಲು ನಿರ್ಧರಿಸಿತ್ತು. ಆದರೆ ದೇವಾಲಯದ ಟ್ರಸ್ಟ್ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ಎಚ್ಚರಿಸಿದ ನಂತರ ಅವರು ಹಿಂದೆ ಸರಿದರು. ರಾಮನವಮಿಯಂದು ಜನಸಂದಣಿಯ ಭಾರದಿಂದ ಮೆಟ್ಟಿಲುಬಾವಿಯ ಮೇಲ್ಛಾವಣಿ ಕುಸಿತು 36 ಜನ ಸಾವನ್ನಪ್ಪಿದ್ದಾರೆ.
ಖಾಸಗಿ ಟ್ರಸ್ಟ್‌ನಿಂದ ನಿರ್ವಹಿಸಲ್ಪಡುವ ಈ ದೇವಾಲಯ ಇಂದೋರ್‌ನ ಅತ್ಯಂತ ಹಳೆಯ ವಸತಿ ಕಾಲೋನಿಗಳಲ್ಲಿ ಒಂದಾದ ಸ್ನೇಹ್ ನಗರದಲ್ಲಿ ನೆಲೆಗೊಂಡಿದೆ.

ರಾಮನವಮಿಗೆ ಜಮಾಯಿಸಿದ್ದ ಜನ
200 ವರ್ಷಗಳಷ್ಟು ಹಳೆಯದಾದ ಮೆಟ್ಟಿಲುಬಾವಿ ನಾಲ್ಕು ಕಬ್ಬಿಣದ ರಾಡುಗಳು, ಕಾಂಕ್ರೀಟ್‌ನ ತೆಳುವಾದ ಪದರವನ್ನು ಹೊಂದಿತ್ತು. ಇದು ರಾಮನವಮಿಯಂದು ಪೂಜೆ ಸಲ್ಲಿಸಲು ನೆರೆದಿದ್ದ ಜನಸಮೂಹದ ಭಾರವನ್ನು ತಡೆದುಕೊಳ್ಳಲು ಸಾಧ್ಯವಾಗದೆ ಕುಸಿದು ಬಿದ್ದಿದೆ. ಜೊತೆಗೆ ಇದರ ಮೇಲೆ ಕುಳಿತಿದ್ದ ಜನರೂ ಕೂಡ ಬಾವಿಗೆ ಬಿದ್ದಿದ್ದಾರೆ. ದೇವಸ್ಥಾನದ ಒಳಗಡೆ ಇರುವ ಈ ದೇವಸ್ಥಾನದ ಮೇಲ್ಛಾವಣಿ ಶೀಟ್ ಅನ್ನು ಹೊಂದಿದೆ. ಬೆಳೇಶ್ವರ ಮಹಾದೇವ್ ಜುಲೇಲಾಲ್ ದೇವಸ್ಥಾನದಲ್ಲಿ ಹವನ (ಕರ್ಮಕಾಂಡ) ಗಾಗಿ ಜಮಾಯಿಸಿದ ಜನರು, ಅಲ್ಲಿ ಬಾವಿ ಇದೆ ಎಂದು ಭಾವಿಸಿರಲಿಲ್ಲ.
ದೇವಸ್ಥಾನದ ಟ್ರಸ್ಟ್‌ನ ಇಬ್ಬರು ಅಧಿಕಾರಿಗಳ ವಿರುದ್ಧ ಪೊಲೀಸ್ ಕೇಸ್ ದಾಖಲಾಗಿದೆ. ಅಕ್ರಮ ಕಟ್ಟಡ ತೆಗೆಯದ ನಗರಸಭೆಯ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಈ ದುರಂತದಲ್ಲಿ ಮೃತಪಟ್ಟ ಪ್ರತಿಯೊಬ್ಬರ ಸಂಬಂಧಿಕರಿಗೆ PMNRF ನಿಂದ ತಲಾ 2 ಲಕ್ಷ ಪರಿಹಾರವನ್ನು ನೀಡಲಾಗುವುದು. ಗಾಯಾಳುಗಳಿಗೆ 50,000 ನೀಡಲಾಗುತ್ತದೆ ಎಂದು ಘೋಷಣೆ ಮಾಡಲಾಗಿದೆ.

ಮೆಟ್ಟಿಲುಬಾವಿಗಳ ಬಗ್ಗೆ ವಿಶೇಷವಾಗಿ ಎಚ್ಚರಿಕೆ
ಘಟನೆಯ ಬಳಿಕ ಶಿವರಾಜ್ ಸಿಂಗ್ ಚೌಹಾಣ್ ಅವರು ತಮ್ಮ ನಿವಾಸದ ಕಚೇರಿಯಲ್ಲಿ ಭಾನುವಾರ ಜಿಲ್ಲಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು. ಸಾಂಪ್ರದಾಯಿಕ ಪುರಾತನ ಬಾವಿಗಳು ಮತ್ತು ಮೆಟ್ಟಿಲುಬಾವಿಗಳನ್ನು ಗುರುತಿಸಿ ಪಟ್ಟಿಯನ್ನು ಸಿದ್ಧಪಡಿಸುವಂತೆ ಸೂಚನೆ ನೀಡಿದರು. ಮೆಟ್ಟಿಲುಬಾವಿಗಳ ಬಗ್ಗೆ ವಿಶೇಷವಾಗಿ ಎಚ್ಚರಿಕೆ ವಹಿಸುವಂತೆ ತಿಳಿಸಿದರು. ಅಂತಹ ಸ್ಥಳವಿದ್ದರೆ ಅವುಗಳನ್ನು ತೆರೆದು ಅವಘಡ ಸಂಭವಿಸದಂತೆ ವ್ಯವಸ್ಥೆ ಮಾಡಬೇಕು. ಅಗತ್ಯವಿದ್ದರೆ, ಅಂತಹ ಸ್ಥಳಗಳ ಸುತ್ತಲೂ ಗಡಿ ಗೋಡೆಗಳು, ಬೇಲಿಗಳು ಅಥವಾ ರೇಲಿಂಗ್ ಅನ್ನು ಮಾಡಬೇಕು ಎಂದು ಸಲಹೆ ನೀಡಿದರು.

ಮೆಟ್ಟಿಲುಬಾವಿಗಳ ಪತ್ತೆ ಕಾರ್ಯಕ್ಕೆ ಸೂಚನೆ
'ಬಾವಿ, ಮೆಟ್ಟಿಲುಬಾವಿಗಳ ಬಗ್ಗೆ ಸ್ಥಳೀಯ ಹಿರಿಯರಿಂದ ಮಾಹಿತಿ ಪಡೆಯಬೇಕು. ಇಂದೋರ್‌ನಂತಹ ಘಟನೆ ರಾಜ್ಯದಲ್ಲಿ ಎಲ್ಲಿಯೂ ಮರುಕಳಿಸದಂತೆ ನೋಡಿಕೊಳ್ಳಬೇಕು. ತೆರೆದ ಕೊಳವೆಬಾವಿಗಳ ಬಗ್ಗೆಯೂ ಎಚ್ಚರಿಕೆ ವಹಿಸುವಂತೆ' ತಿಳಿಸಿದರು. ಸರಕಾರಿ ಹಾಗೂ ಖಾಸಗಿ ಜಮೀನಿನಲ್ಲಿ ಇರುವ ಇಂತಹ ಕೊಳವೆಬಾವಿಗಳನ್ನು ಗುರುತಿಸಬೇಕು. ಸರ್ಕಾರಿ ಜಮೀನಿನಲ್ಲಿ ತೆರೆದ ಕೊಳವೆಬಾವಿ ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿ-ನೌಕರರ ವಿರುದ್ಧ ಹಾಗೂ ಖಾಸಗಿ ಜಮೀನಿನಲ್ಲಿ ಕೊಳವೆಬಾವಿ ತೆರೆದಿರುವುದು ಕಂಡು ಬಂದಲ್ಲಿ ಸಂಬಂಧಪಟ್ಟ ಜಮೀನಿನ ಮಾಲೀಕರ ಮೇಲೆ ಕ್ರಮ ಕೈಗೊಳ್ಳಬೇಕು ಎಂದರು.
ಅವರ ಆದೇಶದ ನಂತರ, ಇಂದೋರ್ ಜಿಲ್ಲಾಡಳಿತವು CrPC ಯ ಸೆಕ್ಷನ್ 144 ರ ಅಡಿಯಲ್ಲಿ ಎಲ್ಲಾ ಮೆಟ್ಟಿಲುಬಾವಿಗಳನ್ನು ಅತಿಕ್ರಮಣದಿಂದ ಗುರುತಿಸಲು ಮತ್ತು ಮುಕ್ತಗೊಳಿಸಲು ಆದೇಶವನ್ನು ಹೊರಡಿಸಿದೆ. ಜಿಲ್ಲಾಧಿಕಾರಿ ಇಳಯರಾಜ ಟಿ ಬಿಡುಗಡೆ ಮಾಡಿರುವ ಆದೇಶದಲ್ಲಿ, ಜಿಲ್ಲೆಯಾದ್ಯಂತ ಎಲ್ಲಾ ಮೆಟ್ಟಿಲುಬಾವಿಗಳು ಮತ್ತು ಬಾವಿಗಳ ಸಮೀಕ್ಷೆಯನ್ನು ನಡೆಸಲಾಗುವುದು ಮತ್ತು ಶಿಥಿಲಗೊಂಡ ಹೊದಿಕೆಗಳನ್ನು ಅಪಾಯಕಾರಿ ಎಂದು ಗುರುತಿಸಲಾಗುವುದು ಎಂದು ಹೇಳಿದರು.












Click it and Unblock the Notifications