ಇಂದೋರ್ : ಸುಮಿತ್ರಾ ಮಹಾಜನ್ ಬದಲಿಗೆ ಲಾಲ್ವಾನಿಗೆ ಟಿಕೆಟ್

ನವದೆಹಲಿ, ಏಪ್ರಿಲ್ 22: ಲೋಕಸಭಾ ಚುನಾವಣೆಗಾಗಿ ಭಾರತೀಯ ಜನತಾ ಪಕ್ಷ ತನ್ನ ಅಭ್ಯರ್ಥಿಗಳ 23ನೇ ಪಟ್ಟಿಯನ್ನು ಭಾನುವಾರದಂದು ಪ್ರಕಟಿಸಿದೆ. ಹಿರಿಯ ಬಿಜೆಪಿ ನಾಯಕಿ, ಇಂದೋರ್ ಹಾಲಿ ಸಂಸದೆ, ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೆ ಟಿಕೆಟ್ ಸಿಕ್ಕಿಲ್ಲ

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಸ್ಪೀಕರ್​ ಸುಮಿತ್ರಾ ಮಹಾಜನ್​ ಅವರ ಬದಲಿಗೆ ಇಂದೋರ್​ನಿಂದ ಈ ಬಾರಿ ಶಂಕರ್​ಲಾಲ್ವಾನಿ ಅವರನ್ನು ಲೋಕಸಭಾ ಅಭ್ಯರ್ಥಿಯಾಗಿ ಬಿಜೆಪಿ ಘೋಷಿಸಿದೆ. ಲಾಲ್ವಾನಿ ಅವರ ಹೆಸರನ್ನು ಸುಮಿತ್ರಾ ಅವರೇ ಶಿಫಾರಸು ಮಾಡಿದ್ದರು ಎಂಬು ವಿಶೇಷ.

1989ರಿಂದ ಇಂದೋರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಾ ಬಂದಿದ್ದ , 8 ಬಾರಿ ಸಂಸದೆ ಸುಮಿತ್ರಾ ಅವರು ಇತ್ತೀಚೆಗೆ ಚುನಾವಣಾ ಕಣಕ್ಕಿಳಿಯುವುದಿಲ್ಲ ಎಂದು ಘೋಷಿಸಿದ್ದರು.

Indore Lok sabha seat : BJP replaces Sumitra Mahajan with Shankar Lalwani

75 ವರ್ಷ ಮೇಲ್ಪಟ್ಟವರಿಗೆ ಅಧಿಕಾರ, ಚುನಾವಣೆ ಸ್ಪರ್ಧೆಗೆ ಬಿಜೆಪಿ ತಡೆ ನೀಡುವ ಕ್ರಮ ಮುಂದುವರೆದಿದೆ. ಸೂಪರ್ ಸೀನಿಯರ್ ಮುಖಂಡರ ಸ್ಪರ್ಧೆಗೆ ಯಾವುದೆ ನಿರ್ಬಂಧ ವಿಧಿಸಿಲ್ಲ ಎಂದು ಬಿಜೆಪಿ ಹೈಕಮಾಂಡ್ ಹೇಳಿದ್ದರೂ, ಈ ಅಘೋಷಿತ ನಿಯಮ ಮುಂದುವರೆದಿದ್ದು, ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಅವರ ಸಾಲಿಗೆ 76 ವರ್ಷ ವಯಸ್ಸಿನ ಸುಮಿತ್ರಾ ಮಹಾಜನ್ ಸೇರಿದ್ದಾರೆ.

ಇಂದೋರ್​ನ ಇನ್ನೊಂದು ಬಣ ಕೈಲಾಶ್ ವಿಜಯ್​​ವರ್ಗಿಯ ಮತ್ತು ಅವರ ಆಪ್ತ ಇಂದೋರ್​ನ ಶಾಸಕ ರಮೇಶ್​ ಮೆಂಡೋಲ ಅವರ ಹೆಸರು ಕೇಳಿ ಬಂದಿತ್ತು. ಕೊನೆಗೆ ಸಿಂಧಿ ಸಮುದಾಯದ ಲಾಲ್ವಾನಿ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಸುಮಿತ್ರಾ ಅವರು ಯಶಸ್ವಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+