ವಿಮಾನಗಳ ಹಾರಾಟ ರದ್ದಾಗಿದ್ದರೆ ಮರುಪಾವತಿ ಪಡೆಯೋದೇಗೆ?: ಇಲ್ಲಿವೆ ಪಾಲಿಸಬೇಕಾದ ಸರಳ ಮಾರ್ಗಗಳು
Flight Ticket Refund: ಕಳೆದ ಕೆಲ ದಿನಗಳಿಂದ ದೇಶಾದ್ಯಂತ ಇಂಡಿಗೋ ವಿಮಾನಗಳ ಹಾರಾಟವನ್ನು ರದ್ದುಪಡಿಸಿದೆ. ಪರಿಣಾಮ ಪ್ರಯಾಣಿಕರು ಏರ್ಪೋರ್ಟ್ಗಳಲ್ಲಿ ಈಗಲೂ ಕೂಡ ಪರದಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಟಿಕೆಟ್ ಬುಕ್ ಮಾಡಿರುವವರಿಗೆ ಮರುಪಾವತಿ ಮಾಡುವುದಾಗಿ ಇಂಡಿಗೋ ಘೋಷಣೆ ಮಾಡಿದೆ. ಹಾಗಾದ್ರೆ, ಇದನ್ನು ಪಡೆಯುವುದೇಗೆ ಹಾಗೂ ಪಾಲಿಸಬೇಕಾದ ವಿಧಾನಗಳೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕಳೆದ ಕೆಲ ದಿನಗಳಿಂದ ದೇಶಾದ್ಯಂತ ಇಂಡಿಗೋ ವಿಮಾನಗಳ ಹಾರಾಟವನ್ನು ದಿಢೀರ್ ರದ್ದುಗೊಳಿಸಲಾಗಿದೆ. ಇದರಿಂದ ಪ್ರಯಾಣಿಕರು ಪರದಾಡಿದ್ದು, ವಿಮಾನಯಾನ ಸಂಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲಿದ್ದು, ಈ ಘಟನೆ ಇಡೀ ದೇಶದ ಗಮನ ಸೆಳೆದಿದೆ.

ಈ ಘಟನೆಗೆ ಇಂಡಿಗೋ ಪ್ರಯಾಣಿಕರಲ್ಲಿ ಕ್ಷಮೆಯಾಚನೆ ಮಾಡಿದೆ. ಡಿಸೆಂಬರ್ 5ರಿಂದ 15ರ ನಡುವೆ ಟಿಕೆಟ್ ಬುಕ್ ಮಾಡಿದವರಿಗೆ ಪೂರ್ಣ ಮರುಪಾವತಿ ನೀಡುವುದಾಗಿ ಘೋಷಣೆ ಮಾಡಿದೆ. ಹಾಗಾದ್ರೆ ಇದನ್ನು ಪಡೆದುಕೊಳ್ಳುವುದು ಹೇಗೆ ಎನ್ನುವ ಪ್ರಶ್ನೆಗಳಿಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಮರುಪಾವತಿ ಪಡೆಯುವುದೇಗೇ?
* ಮರುಪಾವತಿ ಪಡೆಯಲು ನೀವು ಟಿಕೆಟ್ ಬುಕ್ ಮಾಡಿದ ಏರ್ಲೈನ್ನ ವೆಬ್ಸೈಟ್ ಅಥವಾ ಅಪ್ಲಿಕೇಶನ್ ತೆರೆಯಿರಿ
* ಬುಕಿಂಗ್ಗಳನ್ನು ನಿರ್ವಹಿಸಿ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ
* ನಂತರ ನಿಮ್ಮ PNR ಅಥವಾ ಬುಕಿಂಗ್ ಉಲ್ಲೇಖ, ನಿಮ್ಮ ಕೊನೆಯ ಹೆಸರನ್ನು ನಮೂದಿಸಿ
* ನೀವು ತೆಗೆದುಕೊಳ್ಳಬೇಕಾದ ವಿಮಾನ ರದ್ದಾಗಿದೆಯೇ ಅಥವಾ ಇಲ್ಲವೇ ಪರಿಶೀಲಿಸಿ
* ಒಂದು ವೇಳೆ ಅದು ರದ್ದಾಗಿದೆ ಎಂದು ತೋರಿಸಿದರೆ, ನಿಮಗೆ ಎರಡು ಆಯ್ಕೆಗಳನ್ನು ನೀಡಲಾಗುತ್ತದೆ
* ಪೂರ್ಣ ಮರುಪಾವತಿ ಅಥವಾ ಮರು ಬುಕ್ ಮಾಡಿ ಎನ್ನುವ ಆಯ್ಕೆಗಳನ್ನು ನೀಡಲಾಗುತ್ತದೆ.
* ಮರುಪಾವತಿ ಪಡೆಯಲು, ನೀವು ನಿಮ್ಮ PNR, ಇಮೇಲ್ ಐಡಿ ಮತ್ತು ಸಂಪರ್ಕ ವಿವರಗಳನ್ನು ನಮೂದಿಸಿ ಸಬ್ಮಿಟ್ ಅಥವಾ ಸಲ್ಲಿಸು ಎಂಬುದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ
* ಮರುಪಾವತಿಯನ್ನು 5 ರಿಂದ 7 ದಿನಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
* ನೀವು ಆಫ್ಲೈನ್ನಲ್ಲಿ ಟಿಕೆಟ್ ಬುಕ್ ಮಾಡಿದ್ದರೆ, ವಿಮಾನ ನಿಲ್ದಾಣದ ಟಿಕೆಟ್ ಕೌಂಟರ್ ಅನ್ನು ಸಂಪರ್ಕಿಸಿ ನಿಮ್ಮ ಹಣವನ್ನು ಮರುಪಡೆಯಬಹುದು.
* ನೀವು ಮೂರನೇ ವ್ಯಕ್ತಿಯ ಏಜೆನ್ಸಿಗಳ ಮೂಲಕ ಟಿಕೆಟ್ ಬುಕ್ ಮಾಡಿದ್ದರೆ, ಅವರನ್ನು ಸಂಪರ್ಕಿಸಬೇಕಾಗುತ್ತದೆ.
ಇನ್ನು ಮರುಪಾವತಿ ಪಡೆಯುವ ಬದಲು, ನೀವು ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ಟಿಕೆಟ್ ಅನ್ನು ಮರುಬುಕ್ ಮಾಡಬಹುದು. ಇದಕ್ಕಾಗಿ, ಟಿಕೆಟ್ ರದ್ದಾದಾಗ ಆ ಮಾಹಿತಿಯೊಂದಿಗೆ ನಿಮ್ಮ ಇಮೇಲ್ ಐಡಿಗೆ ಮರುಬುಕಿಂಗ್ ಲಿಂಕ್ ಅನ್ನು ಕಳುಹಿಸಲಾಗುತ್ತದೆ. ಆ ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ವಿವರಗಳನ್ನು ನಮೂದಿಸಿ ಟಿಕೆಟ್ ಬುಕ್ ಮಾಡಬಹುದಾಗಿಕೆ.
ವಿಮಾನವು 2 ಗಂಟೆಗಳಿಗಿಂತ ಹೆಚ್ಚು ಕಾಲ ವಿಳಂಬ ಆದರೂ ಅಥವಾ ರದ್ದಾದರೂ ಸಹ ಪ್ರಯಾಣಿಕರಿಗೆ ಪೂರ್ಣ ಮರುಪಾವತಿಯನ್ನು ನೀಡಬೇಕು ಎಂದು DGCA ನಿಯಮಗಳು ಹೇಳುತ್ತವೆ. ಇಲ್ಲದಿದ್ದರೆ, ಅದೇ ಟಿಕೆಟ್ ಬೆಲೆಗೆ ಮತ್ತೊಂದು ವಿಮಾನದಲ್ಲಿ ಪ್ರಯಾಣ ಮಾಡಲು ಅವಕಾಶ ಕಲ್ಪಿಸಬೇಕು. ಮರುಪಾವತಿಸಲಾಗದ ಟಿಕೆಟ್ಗಳನ್ನು ಕೂಡ ಅಸಾಧಾರಣ ಸಂದರ್ಭಗಳಲ್ಲಿ ಸಂಪೂರ್ಣವಾಗಿ ಮರುಪಾವತಿಸಬೇಕು. ಹವಾಮಾನ ಪರಿಸ್ಥಿತಿಗಳಿಂದಾಗಿ ವಿಮಾನ ವಿಳಂಬದ ವೇಳೆ ಮರುಪಾವತಿಯನ್ನು ನೀಡಲಾಗುವುದಿಲ್ಲ ಎಂದು ತಿಳಿಸಲಾಗಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications