ಕೊರೊನಾ: ತೆಲಂಗಾಣ ಟೆಕ್ಕಿ ಬಂದಿದ್ದ ಇಂಡಿಗೋ ವಿಮಾನ ಸಿಬ್ಬಂದಿ ತಪಾಸಣೆ

ಬೆಂಗಳೂರು, ಮಾರ್ಚ್ 4: ಕೊರೊನಾ ಸೋಂಕಿತ ಟೆಕ್ಕಿ ಬಂದಿದ್ದ ಇಂಡಿಗೋ ವಿಮಾನದ ಸಿಬ್ಬಂದಿ ತಪಾಸಣೆ ನಡೆಸಲಾಗುತ್ತಿದೆ.

ಹೈದರಾಬಾದ್ ಮೂಲದ ಟೆಕ್ಕಿಯು ದುಬೈ-ಬೆಂಗಳೂರು ಇಂಡಿಯೋ ವಿಮಾನದಲ್ಲಿ ಬಂದಿಳಿದಿದ್ದ. ಎರಡು ದಿನ ಬೆಂಗಳೂರಿನಲ್ಲಿ ಉಳಿದು ನಂತರ ಹೈದರಾಬಾದಿಗೆ ಬಸ್ಸಿನಲ್ಲಿ ಪ್ರಯಾಣಿಸಿದ್ದ. ತೆಲಂಗಾಣಕ್ಕೆ ತೆರಳಿದ ಬಳಿಕ ಅವರಲ್ಲಿ ಕೊರೊನಾ ವೈರಸ್ ಇರುವುದು ಪತ್ತೆಯಾಗಿತ್ತು.

ಫೆಬ್ರವರಿ 20ರಂದು ದುಬೈ-ಬೆಂಗಳೂರು ಇಂಡಿಯೋ ವಿಮಾನದಲ್ಲಿ ಬೆಂಗಳೂರಿಗೆ ಬಂದಿದ್ದರು.

ಟೆಕ್ಕಿಯ ಸಹೋದ್ಯೋಗಿ ಆಸ್ಪತ್ರೆಗೆ ದಾಖಲು

ಟೆಕ್ಕಿಯ ಸಹೋದ್ಯೋಗಿ ಆಸ್ಪತ್ರೆಗೆ ದಾಖಲು

ಕೊರೊನಾ ಸೋಂಕು ತಗುಲಿರುವ ಟೆಕ್ಕಿಯ ಬೆಂಗಳೂರಿನ ನಿವಾಸ ಹಾಗೂ ಕಛೇರಿಯನ್ನು ಸೋಂಕು ಹರಡದಂತೆ ನಿನ್ನೆ ಸ್ವಚ್ಛಗೊಳಿಸಲಾಗಿದೆ. ಹಾಗೂ ಆತನ ಕಛೇರಿಯ 25 ಸಹದ್ಯೋಗಿಗಳನ್ನು ಸಂಪರ್ಕಿಸಿ, ಒಬ್ಬರನ್ನು ಮುಂಜಾಗೃತಾ ಕ್ರಮವಾಗಿ ಆಸ್ಪತ್ರೆಗೆ ಸೇರಿಸಿ, ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

ಬುಧವಾರ ಬೆಳಗ್ಗೆ ಆರೋಗ್ಯ ಸಚಿವ ಬಿ. ಶ್ರೀರಾಮುಲು ಕೊರೊನಾ ಸೋಂಕಿನ ಮಾಹಿತಿ ಬಗ್ಗೆ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ. ಮಂಗಳವಾರ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ್ದ ಸಚಿವರು, ಜನರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಕರೆ ಕೊಟ್ಟಿದ್ದರು. ಕೋಳಿ ಮಾಂಸ, ಮೊಟ್ಟೆ ಸುರಕ್ಷಿತ: ಕೊರೊನಾ ಭೀತಿ ಬೇಡ ಪ್ರಭು ಚವ್ಹಾಣ್ "ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಯಾವುದೇ ಗಾಳಿಸುದ್ದಿಗೆ ಕಿವಿಗೊಡದೆ, ಅಧಿಕೃತ ಮಾಹಿತಿಯನ್ನು ಮಾತ್ರ ಪರಿಗಣಿಸಿ" ಎಂದು ಜನರಲ್ಲಿ ಬಿ. ಶ್ರೀರಾಮುಲು ಮನವಿ ಮಾಡಿದ್ದಾರೆ.

ಅಧಿಕೃತ ಮಾಹಿತಿಯನ್ನು ಮಾತ್ರ ಪರಿಗಣಿಸಿ

ಅಧಿಕೃತ ಮಾಹಿತಿಯನ್ನು ಮಾತ್ರ ಪರಿಗಣಿಸಿ

ಅಧಿಕೃತ ಮಾಹಿತಿ ಪರಿಗಣಿಸಿ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಯಾವುದೇ ಗಾಳಿಸುದ್ದಿಗೆ ಕಿವಿಗೊಡದೆ, ಅಧಿಕೃತ ಮಾಹಿತಿಯನ್ನು ಮಾತ್ರ ಪರಿಗಣಿಸಿ ಎಂದು ಕೋರುತ್ತೇನೆ. ನಮ್ಮ ಸರ್ಕಾರ ಹಾಗೂ ಇಲಾಖೆ ಸೋಂಕು ಹರಡದಂತೆ ಎಲ್ಲಾ ಕ್ರಮ ಕೈಗೊಂಡಿದೆ.

ಕೊರೊನಾ ಸೋಂಕಿತ ಟೆಕ್ಕಿ ಕೆಲಸ ಮಾಡುತ್ತಿದ್ದ ಕಂಪನಿಗೆ ರಜೆ

ಕೊರೊನಾ ಸೋಂಕಿತ ಟೆಕ್ಕಿ ಕೆಲಸ ಮಾಡುತ್ತಿದ್ದ ಕಂಪನಿಗೆ ರಜೆ

ಕೊರೊನಾ ಸೋಂಕು ತಗುಲಿರುವ ಬೆಂಗಳೂರು ಟೆಕ್ಕಿ ಕೆಲಸ ಮಾಡುತ್ತಿದ್ದ ಕಂಪನಿಗೆ ರಜೆ ನೀಡಲಾಗಿದೆ. ತೆಲಂಗಾಣ ಟೆಕ್ಕಿ ಕೆಲಸ ಮಾಡುತ್ತಿದ್ದ ಕಂಪನಿಗೆ ಆಡಳಿತ ಮಂಡಳಿಯು ತಾತ್ಕಾಲಿಕ ರಜೆ ನೀಡಿದ್ದು, ಎಲ್ಲರೂ ಮನೆಯಿಂದಲೇ ಕೆಲಸ ಮಾಡಿ ಎಂದು ಹೇಳಿದೆ. ಆದರೆ ಆತ ಎಲ್ಲಿ ಕೆಲಸ ಮಾಡುತ್ತಿದ್ದ ಎನ್ನುವ ಮಾಹಿತಿಯನ್ನು ಮಾತ್ರ ಬಿಟ್ಟುಕೊಟ್ಟಿಲ್ಲ. ಆತನ ಸ್ನೇಹಿತನಿಗೂ ಸೋಂಕು ತಗುಲಿರುವ ಸಾಧ್ಯತೆ ಇರುವ ಕಾರಣ ಅವರನ್ನು ಗೃಹಬಂಧನದಲ್ಲಿರಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಆಗ್ರಾದಲ್ಲಿ 15 ಮಂದಿಗೆ ಕೊರೊನಾ

ಆಗ್ರಾದಲ್ಲಿ 15 ಮಂದಿಗೆ ಕೊರೊನಾ

ಆಗ್ರಾದಲ್ಲಿ 15 ಮಂದಿಗೆ ಕೊರೊನಾ ಸೋಂಕು ಆಗ್ರಾದಲ್ಲಿ ಆರು ಮಂದಿಗೆ ಕೊರೊನಾ ಸೋಂಕು ತಗುಲಿದೆ. ದೆಹಲಿ, ತೆಲಂಗಾಣ, ಜೈಪುರದಲ್ಲಿ ಒಂದೊಂದು ಪ್ರಕರಣ ದಾಖಲಾಗಿದೆ. ದೆಹಲಿಯ ಕೊರೊನಾ ಸೋಂಕಿತ ವ್ಯಕ್ತಿ ಆಗ್ರಾದಲ್ಲಿರುವ ತಮ್ಮ ಕುಟುಂಬದವರನ್ನು ಭೇಟಿ ಮಾಡಿದ್ದ, ಅವರಿಂದ ಆ 15 ಮಂದಿಗೆ ಕೊರೊನಾ ತಗುಲಿರಬಹುದು ಎಂದು ಅಂದಾಜಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+