ಅಬುಧಾಬಿಯಲ್ಲಿ ಮೊಳಗಿದ "ವಂದೇ ಮಾತರಂ" ಗೀತೆ ಸದ್ದು, ಭಾರೀ ವೈರಲ್‌

ನವದೆಹಲಿ, ಫೆಬ್ರವರಿ, 14: ಅಬುಧಾಬಿಯ ಜಾಯೆದ್ ಕ್ರೀಡಂಗಾಣದಲ್ಲಿ ಮಂಗಳವಾರ (ಫೆಬ್ರವರಿ 13) "ಅಹ್ಲಾನ್ ಮೋದಿ" ಕಾರ್ಯಕ್ರಮ ನಡೆದಿದ್ದು, ಈ ವೇಳೆ ಇಡೀ ಕ್ರೀಡಾಂಗಣದ ತುಂಬಾ "ವಂದೇ ಮಾತರಂ" ದೇಶಭಕ್ತಿಯ ಗೀತೆ ಮೊಳಗಿತ್ತು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಅಬುಧಾಬಿಯ ಸ್ಟೇಡಿಯಂನಲ್ಲಿ ವಂದೇ ಮಾತರಂ ಗೀತೆಯನ್ನು ಹಾಡಿದ ಅದ್ಭುತ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ. ಆಹ್ಲಾನ್‌ ಮೋದಿ ಕಾರ್ಯಕ್ರಮದಲ್ಲಿ ಭಾರತೀಯ ಮೂಲದ ಸಮುದಾಯವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಭಾಷಣವು ಭಾರತ ಮತ್ತು ಯುಎಇ ನಡುವಿನ ಬಲವಾದ ಬಾಂಧವ್ಯವನ್ನು ಸೂಚಿಸುವಂತಿತ್ತು.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪ್ರೇರಣೆ ಮತ್ತು ಮಾರ್ಗದರ್ಶನದ ಮಾತುಗಳಿಗಾಗಿ ಸಾಕಷ್ಟು ಜನರು ಕಾತರದಿಂದ ಕಾದಿದ್ದರು. ಮೋದಿ ಕೂಡ ತಮ್ಮ ಮಾತಿನಲ್ಲಿ ಭಾರತೀಯ ಸಮುದಾಯವನ್ನು ಸೆಳೆಯುವ ನಿಟ್ಟಿನಲ್ಲಿ ಪ್ರಮುಖ ಅಂಶಗಳನ್ನು ಹೇಳಿದರು.

Indias Vande Mataram Patriotic song at Abu Dhabi Stadium, video viral

ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಭೇಟಿಗಾಗಿ ಯುಎಇಯ ಅಬುಧಾಬಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಅವರನ್ನು ಯುಎಇ ಅಧ್ಯಕ್ಷ ಶೇಖ್‌ ಮೊಹಮದ್‌ ಜಿನ್‌ ಜಯೇದ್‌ ಅಲ್‌ ನಹ್ಯಾನ್‌ ಸ್ವಾಗತಿಸಿದ್ದರು. ಪ್ರಧಾನಿ ಮೋದಿ ಯುಎಇಗೆ ಆಗಮಿಸಿದ ನಂತರ ಉಭಯ ನಾಯಕರು ವ್ಯಾಪಕ ಮಾತುಕತೆ ನಡೆಸಿದರು.

ಪ್ರಧಾನಿ ಮೋದಿ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ಬೆಂಬಲಕ್ಕಾಗಿ ಮತ್ತು ಹಿಂದೂ ದೇವಾಲಯದ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡಿದ್ದಕ್ಕಾಗಿ ಕೃತಜ್ಞತೆ ತಿಳಿಸಿದರು. ಅಲ್ಲದೆ ಇದೇ ವೇಳೆ ಅವರು ಇದು ಭಾರತದ ಬಗ್ಗೆ ಅವರ ಆಳವಾದ ಬಾಂಧವ್ಯವನ್ನು ಸಂಕೇತಿಸುತ್ತದೆ ಎಂದರು.

ಅಬುಧಾಬಿಯಲ್ಲಿ ಮೊಟ್ಟ ಮೊದಲ ಹಿಂದೂ ದೇವಾಲಯವು ಸಂಪೂರ್ಣ ಕಲ್ಲಿನಿಂದಲೇ ನಿರ್ಮಾಣ ಮಾಡಲಾಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ (ಫೆಬ್ರವರಿ 14) ಅಬುಧಾಬಿಯಲ್ಲಿ ಈ ಮೊಟ್ಟ ಮೊದಲ ಹಿಂದೂ ಕಲ್ಲಿನ ದೇವಾಲಯವನ್ನು ಉದ್ಘಾಟನೆ ಮಾಡಿದರು.

ಅಬುಧಾಬಿಯಲ್ಲಿ ಸುಮಾರು 27 ಎಕರೆ ಭೂಮಿಯಲ್ಲಿ ಈ ದೇವಾಲಯ ನಿರ್ಮಾಣ ಆಗಿದೆ. ದೇವಾಲಯದ ಭೂಮಿಯನ್ನು ಯುಎಇ ಸರ್ಕಾರವು ದಾನ ಮಾಡುವುದರೊಂದಿಗೆ 2019ರಿಂದ ನಿರ್ಮಾಣ ಕಾರ್ಯಗಳನ್ನು ನಡೆಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+