ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಾಕ್‌ಡೌನ್: ಭಾರತದಲ್ಲಿ ಶೇ.23ರಷ್ಟು ತಗ್ಗಿದ ವಿದ್ಯುತ್ ಬಳಕೆ

|
Google Oneindia Kannada News

ಬೆಂಗಳೂರು, ಮೇ 8:ಕೊರೊನಾ ಲಾಕ್‌ಡೌನ್‌ನಿಂದಾಗಿ ದೇಶದ ಬಹುತೇಕ ಕಾರ್ಖಾನೆ, ಕಚೇರಿಗಳನ್ನು ಮುಚ್ಚಲಾಗಿದ್ದು, ವಿದ್ಯುತ್ ಬಳಕೆಯಲ್ಲಿ ಶೇ.23ರಷ್ಟು ಕಡಿತವಾಗಿದೆ.

ಏಪ್ರಿಲ್‌ನಲ್ಲಿ ಶೇ.22.75 ಕಡಿತದೊಂಗೆ ರೊಂದಿಗೆ 85.05 ಬಿಲಿಯನ್ ಯುನಿಟ್‌ಗಳಿಗೆ ಇಳಿದಿದೆ. ಈ ಮೊದಲು ಅಂದರೆ ಕಳೆದ ವರ್ಷ ಇದೇ ಸಂದರ್ಭದಲ್ಲಿ 110.11 ಬಿಲಿಯನ್ ಯುನಿಟ್‌ಗಳಷ್ಟು ವಿದ್ಯುತ್ ಬಳಕೆಯಾಗುತ್ತಿತ್ತು.

ಮತ್ತೆ ವಿದ್ಯುತ್ ದರ ಹೆಚ್ಚಳ ಮಾಡಲು ಮುಂದಾದ ಬೆಸ್ಕಾಂಮತ್ತೆ ವಿದ್ಯುತ್ ದರ ಹೆಚ್ಚಳ ಮಾಡಲು ಮುಂದಾದ ಬೆಸ್ಕಾಂ

ಭಾರತ ಸರ್ಕಾರವು ಮಾರ್ಚ್ 25ರಿಂದ ಸಂಪೂರ್ಣ ಲಾಕ್‌ಡೌನ್ ಘೋಷಿಸಿತ್ತು. ಇತ್ತೀಚೆಗೆ ಅದನ್ನು ಮೇ 17ರ ವರೆಗೆ ವಿಸ್ತರಿಸಿದೆ.ಏಪ್ರಿಲ್ ತಿಂಗಳು ಪೂರ್ಣವಾಗಿ ಯಾವುದೇ ಆರ್ಥಿಕ ಚಟುವಟಿಕೆಗಳಿರಲಿಲ್ಲ, ವಾಣಿಜ್ಯ ಹಾಗೂ ಕಾರ್ಖಾನೆಗಳ ಬೇಡಿಕೆಯೂ ಕಡಿಮೆಯಾಗಿತ್ತು.

ಕಳೆದ ವರ್ಷ ಏಪ್ರಿಲ್‌ನಲ್ಲಿ ಹೆಚ್ಚು ಬೇಡಿಕೆ ಇತ್ತು

ಕಳೆದ ವರ್ಷ ಏಪ್ರಿಲ್‌ನಲ್ಲಿ ಹೆಚ್ಚು ಬೇಡಿಕೆ ಇತ್ತು

ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ವಿದ್ಯುತ್‌ಗೆ ಅತಿ ಹೆಚ್ಚು ಬೇಡಿಕೆ ಇತ್ತು. 176.81 ಗಿಗಾ ವ್ಯಾಟ್‌ನಷ್ಟು ವಿದ್ಯುತ್ ಬಳಕೆಯಾಗಿತ್ತು. ಆದರೆ ಈ ಬಾರಿ ಅದು 132.77 ಗಿಗಾವ್ಯಾಟ್‌ನಲ್ಲಷ್ಟಾಗಿದೆ.

ಅಕಾಲಿಕ ಮಳೆಯಿಂದ ತಗ್ಗಿದ ವಿದ್ಯುತ್ ಬಳಕೆ

ಅಕಾಲಿಕ ಮಳೆಯಿಂದ ತಗ್ಗಿದ ವಿದ್ಯುತ್ ಬಳಕೆ

ಸಾಮಾನ್ಯವಾಗಿ ಮಾರ್ಚ್, ಏಪ್ರಿಲ್, ಮೇ ತಿಂಗಳಿನಲ್ಲಿ ಬಿಸಿಲು ಹೆಚ್ಚು, 40 ಡಿಗ್ರಿ ಸೆಲ್ಸಿಯಸ್ ದಾಟುತ್ತದೆ. ಆದರೆ ಈ ಬಾರಿ ಮಧ್ಯೆ ಮಧ್ಯೆ ಮಳೆಯಾಗುತ್ತಿರುವುದರಿಂದ ಫ್ಯಾನ್, ಎಸಿ ಸೇರಿದಂತೆ ಇತರೆ ವಸ್ತುಗಳ ಬಳಕೆ ಕಡಿಮೆಯಾಗಿರುವುದರಿಂದ ವಿದ್ಯುತ್ ಬೇಡಿಕೆ ತಗ್ಗಿದೆ.

ನಿರ್ಬಂಧ ಸಡಿಲವಾದ ಬಳಿಕ ಬೇಡಿಕೆ ಹೆಚ್ಚುತ್ತೆ

ನಿರ್ಬಂಧ ಸಡಿಲವಾದ ಬಳಿಕ ಬೇಡಿಕೆ ಹೆಚ್ಚುತ್ತೆ

ಲಾಕ್‌ಡೌನ್ ಸಡಿಲಗೊಂಡು ಆರ್ಥಿಕ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡಿದ ಬಳಿಕ ವಿದ್ಯುತ್ ಬೇಡಿಕೆ ಹೆಚ್ಚಾಗುತ್ತದೆ. ಮೇ ಮಧ್ಯದಲ್ಲಿ ಉಷ್ಣಾಂಶವು ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಆದರೆ ಕಳೆದ ವರ್ಷದ ಬೇಡಿಕೆಗೆ ತಲುಪಲು ಸಾಕಷ್ಟು ಸಮಯ ಬೇಕಾಗಲಿದೆ.

ವಿದ್ಯುತ್ ಬಿಲ್ ಪಾವತಿ ಅವಧಿ ವಿಸ್ತರಣೆ

ವಿದ್ಯುತ್ ಬಿಲ್ ಪಾವತಿ ಅವಧಿ ವಿಸ್ತರಣೆ

ವಿದ್ಯುತ್ ಬಿಲ್ ಪಾವತಿ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಕೇವಲ ಶೇ.20-25 ರಷ್ಟು ಮಾತ್ರ ಹಣ ಕಲೆಕ್ಟ್ ಮಾಡಲಾಗಿದೆ. ಸರ್ಕಾರವು 500 ಬಿಲಿಯನ್ ಸಾಲವನ್ನು ವಿದ್ಯುತ್ ವಿತರಣಾ ಕಂಪನಿಗಳಿಗೆ ನೀಡಲು ಮುಂದಾಗಿದೆ.ವಿದ್ಯುತ್ ಬೇಡಿಕೆ ಕಡಿಮೆಯಾಗಿರುವುದರಿಂದ ಈ ನಿರ್ಧಾರಕ್ಕೆ ಬಂದಿದೆ. ಆದರೆ ಕಂಪನಿಗಳ ಅಂತಿಮ ನಿರ್ಧಾರ ಇನ್ನೂ ತಿಳಿದುಬಂದಿಲ್ಲ.

English summary
The ongoing shutdown to control the spread of Covid-19 in India has resulted in a sharp drop in power consumption, as businesses and industrial sites have remained closed for more than a month. In April it dipped 22.75% to 85.05 billion units compared with 110.11 billion units in the same month a year ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X