India's longest sea bridge: ₹17,843 ಕೋಟಿ ವೆಚ್ಚದ ಈ ಸೇತುವೆ ಮೇಲೆ ಸಂಚಾರಕ್ಕೆ ಯಾವ್ಯಾವ ವಾಹನಗಳಿಗೆ ಟೋಲ್ ದರ ಎಷ್ಟು?
ಮುಂಬೈ, ಜನವರಿ, 05: ಪ್ರಧಾನಿ ನರೇಂದ್ರ ಮೋದಿ ಅವರು ಈ ಪ್ರದೇಶದಲ್ಲಿ ದೇಶದ ಅತೀ ಉದ್ದದ ಸಮುದ್ರ ಸೇತುವೆಯನ್ನು ಜನವರಿ 12ರಂದು ಉದ್ಘಾಟನೆ ಮಾಡಲಿದ್ದಾರೆ. ಹಾಗಾದರೆ ಈ ಸೇತುವೆ ಎಲ್ಲಿದೆ ಹಾಗೂ ಉದ್ಘಾಟನೆ ದಿನಾಂಕ, ವಿಶೇಷತೆಗಳು, ಟೋಲ್‌ಗಳ ವೆಚ್ಚದ ಬಗ್ಗೆ ಮಾಹಿತಿಯನ್ನು ಇಲ್ಲಿ ಗಮನಿಸಿ.
ದೇಶದ ಮೂಲಸೌಕರ್ಯ ಅಭಿವೃದ್ಧಿ ಹಿನ್ನೆಲೆ ಮಹತ್ವಾಕಾಂಕ್ಷಿಯ ಯೋಜನೆಯಾದ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (MTHL) ಜನವರಿ 12ರಂದು ಉದ್ಘಾಟನೆ ಆಗಗಲಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ತಿಳಿಸಿದ್ದಾರೆ. ಇದರಿಂದ ಮುಂಬೈನ ಸೆವ್ರಿ ಮತ್ತು ರಾಯಗಡ ಜಿಲ್ಲೆಯ ನ್ಹವಾ ಶೇವಾ ಪ್ರದೇಶದ ನಡುವಿನ ಪ್ರಯಾಣದ ಸಮಯ ಇಳಿಕೆಯಾಗಲಿದೆ.

ಈ ಸೇತುವೆಯು ಆರ್ಥಿಕ ಅಭಿವೃದ್ಧಿ ಮತ್ತು ಅದಕ್ಕೆ ಸಂಬಂಧಿಸಿದ ಪ್ರದೇಶಗಳಲ್ಲಿ ಬೆಳವಣಿಗೆಗೆ ಕಾರಣ ಆಗಲಿದೆ ಎಂದು ತಿಳಿಸಿದ್ದಾರೆ. 21.8 ಕಿ.ಮೀ. ಉದ್ದದ ಈ ಸಮುದ್ರ ಸೇತುವೆಯನ್ನು ಅಂದಾಜು ಸುಮಾರು 17,843 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್‌ಗೆ ಈಗಾಗಲೇ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಲೋಕಾರ್ಪಣೆ ನಂತರ ಇದನ್ನು ಅಟಲ್ ಸೇತು ಎಂದು ಕರೆಯಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇದು 2023ರ ಡಿಸೆಂಬರ್ 25ರಂದು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಜಯಂತಿಯನ್ನು ಉದ್ಘಾಟನೆ ಆಗಬೇಕಿತ್ತು. ಆದರೆ ಸೇತುವೆ ಪೂರ್ಣ ಪ್ರಮಾಣದಲ್ಲಿ ನಿರ್ಮಾಣ ಆಗದ ಹಿನ್ನೆಲೆ ದಿನಾಂಕವನ್ನು ಮುಂದೂಡಿಕೆ ಮಾಡಲಾಗಿತ್ತು. 2018ರಲ್ಲಿ ಈ ಸೇತುವೆಯ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಇಲ್ಲಿಯವರೆಗೂ ಎರಡು ನಿಗದಿ ದಿನಾಂಕಗಳು ಮುಂದೂಡಿಕೆಯಾಗಿವೆ. 2022ರಲ್ಲಿ ಇದರ ನಿರ್ಮಾಣ ಕಾರ್ಯ ಮುಗಿಯಬೇಕಿತ್ತು. ಆದರೂ, ಮಹಾಮಾರಿ ಕೊರೊನಾ ಹಿನ್ನೆಲೆ ಮುಂದೂಡಿಕೆ ಮಾಡಲಾಗಿತ್ತು.
ಟೋಲ್ ದರದ ವಿವರ: ಇನ್ನು ಮಹಾರಾಷ್ಟ್ರ ಸರ್ಕಾರ ನಿನ್ನೆ (ಜನವರಿ 04)ರಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ಸೇತುವೆಯ ಟೋಲ್ ದರವನ್ನು ನಿಗದಿ ಮಾಡಲು ನಿರ್ಧರಿಸಿದೆ. ಕ್ಯಾಬಿನೆಟ್ ಪ್ರಕಾರ, ಈ ಸೇತುವೆಯ ಮೇಲೆ ಏಕಮುಖ ಸಂಚಾರಕ್ಕೆ ಮಿನಿ ಬಸ್‌ಗಳಿಗೆ 560 ರೂಪಾಯಿ, ಬಸ್/2-ಆಕ್ಸಲ್ ಟ್ರಕ್‌ಗಳು 1,180 ರೂಪಾಯಿ, 3-ಆಕ್ಸಲ್ ಟ್ರಕ್‌ಗಳು 1,290 ರೂಪಾಯಿ, 4-6 ಆಕ್ಸಲ್ ವಾಹನಗಳಿಗೆ 1,850 ರೂಪಾಯಿ ಮತ್ತು ದೊಡ್ಡ ಗಾತ್ರದ ವಾಹನಗಳಿಗೆ 2,250 ರೂಪಾಯಿ ನಿಗದಿಪಡಿಸಲು ನಿರ್ಧಾರ ಮಾಡಿದೆ ಎನ್ನಲಾಗಿದೆ.
2024ರಿಂದ 2053ರವರೆಗೆ ಅಂದರೆ 30 ವರ್ಷಗಳ ಕಾಲ ಟೋಲ್ ಸಂಗ್ರಹದ ಗುರಿ ಇರಿಸಿಕೊಳ್ಳಲಾಗಿದೆ. ಪ್ರತಿವರ್ಷ ಅಂದಾಜು 70 ಸಾವಿರ ವಾಹನಗಳು ಈ ಮಾರ್ಗದಲದಲು ಸಂಚಾರ ಮಾಡುವ ಸಾಧ್ಯತೆಯಿದ್ದು, 100 ಕಿಲೋ ಮೀಟರ್ ವೇಗದಲ್ಲಿ ಈ ಮಾರ್ಗದಲ್ಲಿ ಸಂಚಾರ ಮಾಡಬಹುದಾಗಿದೆ. ಈ ಮಾರ್ಗದುದ್ದಕ್ಕೂ ಎಐ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಏನಾದರೂ ಆಘಾತಗಳು ಸಂಭವಿಸಿದರೆ ಕಂಟ್ರೋಲ್ ರೂಮ್‌ಗೆ ಅಲರ್ಟ್ ಮಾಡಲಿದೆ ಎಂದು ತಿಳಿದುಬಂದಿದೆ.
ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (MTHL) 6 ಲೇನ್ ಆಗಿದ್ದು, 21.8 ಕಿಲೋ ಮೀಟರ್ ಉದ್ದದ ಸೇತುವೆ ಇದಾಗಿದೆ. ಇದು ಭಾರತದ ಅತಿ ಉದ್ದದ ಸಮುದ್ರ ಸೇತುವೆಯಾಗಿದ್ದು, ಸಮುದ್ರದ ಮೇಲೆ 16.5 ಕಿಲೋಮೀಟರ್ ದೂರು ಹೊಂದಿದ್ದರೆ, ಉಳಿದ 5.5 ಕಿಲೋಮೀಟರ್ ಮಾರ್ಗ ಭೂಮಿಯ ಮೇಲಿದೆ.
ಈ ಸೇತುವೆಯು ನವಿ ಮುಂಬೈ ತುದಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ 4Bಯಲ್ಲಿ ಸೆವ್ರಿ, ಶಿವಾಜಿ ನಗರ, ಜಸ್ಸಿ ಮತ್ತು ಚಿರ್ಲೆಯಲ್ಲಿ ಇಂಟರ್‌ಚೇಂಜ್‌ಗಳನ್ನು ಹೊಂದಿದೆ. ಇದು ರಾಜ್ಯದ ಎರಡು ದೊಡ್ಡ ನಗರಗಳಾದ ಮುಂಬೈ ಹಾಗೂ ಪುಣೆಗೆ ಸಂಪರ್ಕಿಸುವ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಗೆ ಲಿಂಕ್ ಆಗಿಯೂ ಸಂಪರ್ಕ ಕಲ್ಪಿಸುತ್ತದ.












Click it and Unblock the Notifications