ಕುಲಭೂಷಣ್ ಪರ ತೀರ್ಪಿಗೆ ದೇಶಾದ್ಯಂತ ಪ್ರಾರ್ಥನೆ

By: ಚೆನ್ನಬಸವೇಶ್ವರ್
Subscribe to Oneindia Kannada

ನವದೆಹಲಿ, ಮೇ 18: ಹೇಗ್ ನಲ್ಲಿ ಅಂತರಾಷ್ಟ್ರೀಯ ನ್ಯಾಯಾಲಯ ಇಂದು ಮಧ್ಯಾಹ್ನ 3.30ಕ್ಕೆ ಕುಲಭೂಷಣ್ ಜಾಧವ್ ಮರಣ ದಂಡನೆಗೆ ಸಂಬಂಧಿಸಿದಂತೆ ತನ್ನ ತೀರ್ಪು ನೀಡಲಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ತೀರ್ಪು ಹೊರ ಬೀಳಲಿದೆ.

ಇದೇ ವೇಳೆ ಕುಲಭೂಷಣ್ ಜಾಧವ್ ಶಿಕ್ಷೆ ರದ್ದಾಗಲಿ ಎಂದು ಕೋರಿ ದೇಶಾದ್ಯಂತ ಪ್ರಾರ್ಥನೆ ನಡೆಸಲಾಗುತ್ತಿದೆ.

ಮುಂಬೈನ ಹನುಮಾನ್ ಜಯಂತಿ ಉತ್ಸವ ಸಮಿತಿ ಸದಸ್ಯರು ಕುಲಭೂಷಣ್ ಜಾಧವ್ ಶಿಕ್ಷೆ ರದ್ದಿಗೆ ಕೋರಿ ವಿಶೇಷ ಪೂಜೆ ಸಲ್ಲಿಸಿದರು. ಇನ್ನು ಕಾನ್ಪುರದಲ್ಲಿ ಈ ಹಿಂದೆ ಮೇ 15ರಂದು ವಿಚಾರಣೆ ಆರಂಭವಾದಾಗಲೇ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿತ್ತು.

ಇನ್ನು ಮೊರಾದಾಬಾದ್ ನ ಶಾಲಾ ಮಕ್ಕಳು ಕೂಡಾ ಇಂದು ಕುಲಭೂಷಣ್ ಪರ ತೀರ್ಪು ಬರಲಿ ಎಂದು ಹಾರೈಸಿದ್ದಾರೆ.

Indians offer prayers for safe release of Kulbhushan Jadhav

ಸರಕಾರ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಹರೀಶ್ ಸಾಳ್ವೆ ಮೇಲೆ ಎಲ್ಲಾ ಭಾರ ಹಾಕಿ ಕುಳಿತುಕೊಂಡಿದೆ. ಅವರು ಮೇ 15ರಂದು ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಕುಲಭೂಷಣ್ ಪರ ವಾದ ಮಂಡಿಸಿದ್ದರು. ಇನ್ನೊಂದು ಕಡೆ ದೇಶದ ಜನ ದೇವರ ಮೇಲೆ ಭಾರ ಹಾಕಿ ಶಿಕ್ಷೆಗಾಗಿ ಕಾದು ಕುಳಿತಿದ್ದಾರೆ.

ಕುಲಭೂಷಣ್ ಯಾದವ್ ಬಿಡುಗಡೆಯಾಗಲಿ ಎಂದು ಹಲವಾರು ಜನ ತಮ್ಮ ತಮ್ಮಲ್ಲೇ ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದಾರೆ. ಬಾಲಿವುಡ್ ನ ಖ್ಯಾತ ಚಿತ್ರಕಥೆಗಾರ ಸಲೀಮ್ ಖಾನ್ ಕೂಡಾ ಕುಲಭೂಷಣ್ ಜಾಧವ್ ಬೇಗ ಬಿಡುಗಡೆಯಾಗಿ ಬರಲಿ ಎಂದು ಹಾರೈಸಿದ್ದಾರೆ.

ಕುಲಭೂಷಣ್ ಜಾಧವ್ ಗೆ ಪಾಕಿಸ್ತಾನದ ಮಿಲಿಟರಿ ಕೋರ್ಟ್ ಗಲ್ಲು ಶಿಕ್ಷೆ ನೀಡಿದೆ. ಅವರೀಗ ಗಲ್ಲು ಶಿಕ್ಷೆ ಎದುರಿಸುತ್ತಿದ್ದಾರೆ. ಅವರ ಭವಿಷ್ಯವನ್ನು ಅಂತರಾಷ್ಟ್ರೀಯ ನ್ಯಾಯಾಲಯ ನಿರ್ಧರಿಸಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Since the beginning of the trial in the International Court of Justice Indians are offering prayers for the release of Kulbhushan Jadhav who has been sentenced to death by a Pakistan military court in connection with alleged espionage case.
Please Wait while comments are loading...