ಭಾರತದಲ್ಲಿ 2015ರಿಂದೀಚೆಗೆ ವಿಚಾರಣಾಧೀನ ಕೈದಿಗಳ ಸಂಖ್ಯೆ ಹೆಚ್ಚಳ
ನವದೆಹಲಿ, ಫೆಬ್ರವರಿ 4: ದೇಶದಲ್ಲಿ 2015ರಿಂದೀಚೆಗೆ ವಿಚಾರಣಾಧೀನ ಕೈದಿಗಳ ಸಂಖ್ಯೆ ಹೆಚ್ಚಾಗಿದೆ.
2015 ರಿಂದ ಭಾರತದಲ್ಲಿ ಜೈಲಿನಲ್ಲಿರುವ ವಿಚಾರಣಾಧೀನ ಖೈದಿಗಳ ಸಂಖ್ಯೆ ಶೇ.30 ರಷ್ಟು ಹೆಚ್ಚಳವಾಗಿದ್ದರೆ, ಜೈಲು ಶಿಕ್ಷೆಗೆ ಒಳಗಾಗಿರುವ ಅಪರಾಧಿಗಳ ಸಂಖ್ಯೆ ಶೇ.15 ರಷ್ಟು ಇಳಿಕೆಯಾಗಿದೆ.
2015 ರಲ್ಲಿ 4.13 ಲಕ್ಷ ಮಂದಿ ದೇಶಾದ್ಯಂತ ಬಂಧಿಖಾನೆಯಲ್ಲಿದ್ದರು. 2016 ರಲ್ಲಿ ಈ ಸಂಖ್ಯೆ 4.26ಕ್ಕೆ ಏರಿಕೆಯಾಯಿತು. 2017 ರಲ್ಲಿ 4.45 ಲಕ್ಷ 2018 ರಲ್ಲಿ 4.61 ಲಕ್ಷ 2019 ರಲ್ಲಿ 4.76 ಲಕ್ಷ, 2020 ರಲ್ಲಿ 4.83 ಲಕ್ಷಕ್ಕೆ ಏರಿಕೆಯಾಗಿತ್ತು.

2015 ಕ್ಕೆ ಹೋಲಿಕೆ ಮಾಡಿದಲ್ಲಿ 2020 ರಲ್ಲಿ ಕಾರಾಗೃಹದಲ್ಲಿದ್ದವರ ಸಂಖ್ಯೆ ಶೇ.17.1 ರಷ್ಟು ಏರಿಕೆ ಕಂಡಿದೆ. ಈ ಪೈಕಿ ವಿಚಾರಣಾಧೀನ ಖೈದಿಗಳ ಸಂಖ್ಯೆ ಶೇ.31.3 ರಷ್ಟು ಹಾಗೂ ಬಂಧನಕ್ಕೊಳಗಾದವರ ಸಂಖ್ಯೆ ಶೇ.40.6 ರಷ್ಟಿದೆ, ಅಪರಾಧಿಗಳು ಜೈಲು ಶಿಕ್ಷೆ ಅನುಭವಿಸುವ ಪ್ರಕರಣಗಳು ಶೇ.15.5 ಕ್ಕೆ ಇಳಿಕೆಯಾಗಿದೆ. ಇನ್ನು 2020 ರ ಅಂತ್ಯದ ವೇಳೆಗೆ ಜೈಲು ಸೇರಿರುವ ವಿದೇಶಿಗರ ಸಂಖ್ಯೆ 4,926 ರಷ್ಟಿದೆ ಎಂದು ವರದಿ ಹೇಳಿದೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ ಸಿ ಆರ್ ಬಿ) ಡಾಟಾ ಮೂಲಕ ಈ ಮಾಹಿತಿ ಬಹಿರಂಗವಾಗಿದೆ. ವಾರ್ಷಿಕ ಬಂಧಿಖಾನೆ ಅಂಕಿ-ಅಂಶಗಳ ಪ್ರಕಾರ 2020 ರ ಅಂತ್ಯಕ್ಕೆ ದೇಶಾದ್ಯಂತ 4.83 ಲಕ್ಷ ಮಂದಿ ಕಾರಾಗೃಹದಲ್ಲಿದ್ದಾರೆ.
Recommended Video
ರಾಜ್ಯಗಳ ಪೈಕಿ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಕೈದಿಗಳನ್ನು(1.06 ಲಕ್ಷ) ಹೊಂದಿದ್ದರೆ, ಬಿಹಾರ(51,849), ಹಾಗೂ ಮಧ್ಯಪ್ರದೇಶ (45,456) ಕೈದಿಗಳನ್ನು ಹೊಂದಿದೆ.
ಎನ್‌ಸಿಆರ್‌ಬಿ ಮಾಹಿತಿ ಪ್ರಕಾರ, ಉತ್ತರ ಪ್ರತದೇಶವು ಅತಿ ಹೆಚ್ಚು ಶಿಕ್ಷೆಗೊಳಗಾದ ಕೈದಿಗಳನ್ನು(26,607) ಹೊಂದಿದ್ದರೆ, ನಂತರ ಮಧ್ಯಪ್ರದೇಶ (13,641), ಬಿಹಾರ (7,730) ಅಪರಾಧಿಗಳನ್ನು ಹೊಂದಿದೆ.












Click it and Unblock the Notifications