Dating: ಹುಡುಗರ ಜೊತೆ ಡೇಟಿಂಗ್ ಮಾಡಲು ದರ ನಿಗದಿ ಮಾಡಿದ ಮಹಿಳೆ! ವಿಡಿಯೋ ವೈರಲ್
ಡೇಟಿಂಗ್ ಎನ್ನುವ ಕಲ್ಪನೆ ಇತ್ತೀಚೆಗೆ ಭಾರತದಲ್ಲಿ ಪರಿಚಯವಾಗುತ್ತಿದೆ. ಜಪಾನ್‌ನಲ್ಲಿ ಈಗಾಗಲೇ ಡೇಟಿಂಗ್ ಎನ್ನುವ ಕಲ್ಪನೆ ಪರಿಚಿತವಾಗಿದ್ದು, ಗೆಳೆಯ ಅಥವಾ ಗೆಳತಿಯನ್ನು ಬಾಡಿಗೆಗೆ ಪಡೆಯುವ ವಿಶಿಷ್ಠ ಆಯ್ಕೆಗಳನ್ನು ನೋಡಬಹುದು.
ಈ ಬಾಡಿಗೆ ಸಂಬಂಧಗಳು ನಿಜವಾದ ಸಂಬಂಧವನ್ನು ಅನುಕರಿಸುವ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ, ಉದಾಹರಣೆಗೆ ಡೇಟ್‌ಗಳಿಗೆ ಹೋಗುವುದು, ಒಟ್ಟಿಗೆ ಊಟ ಮಾಡುವುದು, ಈವೆಂಟ್‌ಗಳಿಗೆ ಹಾಜರಾಗುವುದು ಅಥವಾ ಪರಸ್ಪರರ ಸಾಂಗತ್ಯವನ್ನು ಆನಂದಿಸುವುದು. ಇದು ಜಪಾನ್‌ನಲ್ಲಿ ಪರಿಚಿತ ಪರಿಕಲ್ಪನೆಯಾಗಿದ್ದರೂ, ಭಾರತದಲ್ಲಿ ಇದು ತುಂಬಾ ಅಪರೂಪ.

ಆದರೆ, ಇತ್ತೀಚೆಗೆ ಭಾರತೀಯ ಮಹಿಳೆಯೊಬ್ಬರು ಇದೇ ರೀತಿಯ ಸೇವೆಯನ್ನು ನೀಡುವ ಪೋಸ್ಟ್ ಹಂಚಿಕೊಳ್ಳುವ ಮೂಲಕ ನೆಟ್ಟಿಗರನ್ನು ಬೆಚ್ಚಿಬೀಳಿಸಿದ್ದಾರೆ, ಆ ಪೋಸ್ಟ್ ಸದ್ಯ ಆನ್‌ಲೈನ್‌ನಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ.
1500 ದಿಂದ 10000 ದರ ನಿಗದಿ
ಇನ್‌ಸ್ಟಾಗ್ರಾಂನಲ್ಲಿ ದಿವ್ಯ ಗಿರಿ ಎನ್ನುವ ಇನ್‌ಸ್ಟಾಗ್ರಾಂ ಖಾತೆಯಿಂದ ಮಹಿಳೆಯೊಬ್ಬರು ರೀಲ್ ಅನ್ನು ಪೋಸ್ಟ್ ಮಾಡಿದ್ದಾರೆ. ಕನ್ನಡಿಯಲ್ಲಿ ಫೋಸ್ ನೀಡುವ ವಿಡಿಯೋ ಹಂಚಿಕೊಂಡಿರುವ ಅವರು, "ಒಂಟಿಯಾ? ಡೇಟ್‌ಗೆ ಹೋಗಲು ಸಿದ್ಧರಿದ್ದೀರಾ? ಡೇಟ್‌ಗೆ ಬಾಡಿಗೆಗೆ ಸಿಗುತ್ತೇನೆ !!" ಎಂದು ಹೇಳಿದ್ದಾರೆ.
ಒಂದೊಂದು ರೀತಿಯ ಡೇಟ್‌ಗೆ ಒಂದೊಂದು ದರ ನಿಗದಿ ಮಾಡಿದ್ದು, ಅದನ್ನು ಕೂಡ ಹಂಚಿಕೊಂಡಿದ್ದಾರೆ. 'ಚಿಲ್ ಕಾಫಿ ಡೇಟ್' ₹1500 ನಿಗದಿ ಮಾಡಿದ್ದರೆ, ಒಂದು ಸಾಮಾನ್ಯ ಡೇಟ್‌ಗೆ (ಭೋಜನ ಮತ್ತು ಚಲನಚಿತ್ರ ನೋಡುವುದು) ₹2000 ನಿಗದಿ ಮಾಡಿದ್ದಾರೆ. ಬೈಕ್‌ನಲ್ಲಿ ಜೊತೆಯಲ್ಲಿ ಪ್ರಯಾಣ ಮಾಡಲು ₹ 4000, ಡೇಟ್ ಬಗ್ಗೆ ಸಾರ್ವಜನಿಕವಾಗಿ ಪೋಸ್ಟ್ ಮಾಡಲು ₹6000 ಮತ್ತು ವಾರಾಂತ್ಯದಲ್ಲಿ ಎರಡು ದಿನ ಡೇಟ್ ಮಾಡಲು ₹10,000 ನಿಗದಿ ಮಾಡಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ ಏನು?
ಇನ್ನು ಪೋಸ್ಟ್ ವ್ಯಾಪಕವಾಗಿ ವೈರಲ್ ಆಗಿದ್ದು, ಹಲವು ಮಂದಿ ಹಲವು ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಇದು ನಿಜವಾಗಿಯೂ ಪೋಸ್ಟ್ ಮಾಡಿದ್ದಾ ಅಥವಾ ತಮಾಷೆಗಾಗಿ ಪೋಸ್ಟ್ ಮಾಡಿದ್ದಾರಾ ಎನ್ನುವುದು ಇನ್ನೂ ಗೊತ್ತಿಲ್ಲ. ಆದರೆ ಇದಕ್ಕೆ ಹಲವು ರೀತಿಯ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ.
ಕೆಲವರು ಕಾಮೆಂಟ್ ಮಾಡಿ, ತಾನು ಜಪಾನ್‌ನಲ್ಲಿದ್ದೇನೆ ಎಂದು ಹುಡುಗಿ ಭಾವಿಸುತ್ತಾಳೆ ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಜಪಾನ್‌ನ ಪ್ರಸಿದ್ಧ ಬಾಡಿಗೆ ಗೆಳತಿಯ ಸೇವೆಗಳನ್ನು ಉಲ್ಲೇಖಿಸಿ, ಇದು ಬಾಡಿಗೆ ಕುಟುಂಬಗಳು ಮತ್ತು ಸ್ನೇಹಿತರನ್ನು ಒಳಗೊಂಡಂತೆ ದೊಡ್ಡ ಉದ್ಯಮದ ಭಾಗವಾಗಿದೆ. ಈ ಪರಿಕಲ್ಪನೆಯು ಮಂಗಾ, ಅನಿಮೆ ಚಲನಚಿತ್ರಗಳಿಗೆ ಸಹ ಸ್ಫೂರ್ತಿ ನೀಡಿದೆ, ಜಪಾನೀಸ್ ಸಂಸ್ಕೃತಿಯಲ್ಲಿ ಅದರ ವಿಶಿಷ್ಟ ಪಾತ್ರವನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದ್ದಾರೆ.
ಅನೇಕ ಜನ ಇದೊಂದು ಸಂಚು ಎಂದು ಭಾವಿಸಿದ್ದಾರೆ. ಒಬ್ಬರು ಎಕ್ಸ್ ಬಳಕೆದಾರರು ಪ್ರತಿಕ್ರಿಯೆ ನೀಡಿ, ಇವೆಲ್ಲ ಕೇವಲ ಸಂಚಿನ ಭಾಗಗಳು, ಹನಿ ಟ್ಯ್ರಾಪ್ ಕೂಡ ಆಗಿರಬಹುದು ಆದ್ದರಿಂದ ಇಂತಹ ವಿಷಯಗಳೀಂದ ದೂರವಿರಿ. ನೀವು ಸಿಕ್ಕಿಬಿದ್ದರೆ ಲಕ್ಷಗಟ್ಟಲೆ ಹಣ ಕಳೆದುಕೊಳ್ಳುವಿರಿ, ಆದ್ದರಿಂದ ಹುಷಾರಾಗಿರಿ ಎಂದು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications