ಅಡುಗೆಮನೆಯ ಹುಣಸೆ ಬೀಜ ಬಳಸಿಕೊಡು ವಿಶ್ವಮಟ್ಟದಲ್ಲಿ ಅಮೋಘ ಸಾಧನೆ ಮಾಡಿದ ಭಾರತೀಯ ವಿದ್ಯಾರ್ಥಿಗಳು

ಭಾರತದ ಮೂವರು ವಿದ್ಯಾರ್ಥಿಗಳು ಹುಣಸೆ ಬೀಜಗಳನ್ನು ಬಳಸಿಕೊಂಡು ನೀರಿನಲ್ಲಿರುವ ಕಣ್ಣಿಗೆ ಕಾಣಿಸದ ಅಪಾಯಕಾರಿ ಮೈಕ್ರೋಪ್ಲಾಸ್ಟಿಕ್ ಕಣಗಳನ್ನು ತೆರವುಗೊಳಿಸುವ ವಿನೂತನ ತಂತ್ರಜ್ಞಾನ ಕಂಡುಹಿಡಿದು ಗಮನ ಸೆಳೆದಿದ್ದಾರೆ. ಇವರ ಸಾಧನೆಗೆ ಮೆಚ್ಚುಗೆಗಳ ಸುರಿಮಳೆಯೇ ಹರಿದುಬರುತ್ತಿದೆ.

ನೀರಿನಲ್ಲಿ ಬೆರೆತು ಪರಿಸರ ಹಾಗೂ ಮಾನವ ಆರೋಗ್ಯಕ್ಕೆ ಮಾರಕವಾಗುತ್ತಿರುವ 'ಮೈಕ್ರೋಪ್ಲಾಸ್ಟಿಕ್' ಕಣಗಳನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ತೆರವುಗೊಳಿಸುವ ಹೊಸ ತಂತ್ರಜ್ಞಾನವನ್ನು ಕಂಡುಹಿಡಿದಿದ್ದಾರೆ. ಈ ಮೂಲಕ ಭಾರತದ ಈ ಮೂವರು ಯುವ ವಿಜ್ಞಾನಿಗಳು ಜಾಗತಿಕ ಮಟ್ಟದಲ್ಲಿ ದೇಶದ ಕೀರ್ತಿಪತಾಕೆಯನ್ನು ಹಾರಿಸಿದ್ದಾರೆ. ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಬಳಸುವ ಹುಣಸೆಹಣ್ಣಿನ ಬೀಜಗಳನ್ನು ಬಳಸಿಕೊಂಡು ನೀರನ್ನು ಶುದ್ಧೀಕರಿಸುವ ಈ ವಿನೂತನ ಪ್ರಯೋಗಕ್ಕಾಗಿ ಇವರಿಗೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ ಅಂತಾ ಟೈಮ್ಸ್ ಆಫ್‌ ಇಂಡಿಯಾ ವರದಿ ಮಾಡಿದೆ.

Indian Students Win Global Award for Tamarind Seed Innovation That Removes Microplastics from Water

ಸಂಶೋಧನೆಯ ಹಿನ್ನೆಲೆ ಮತ್ತು ತಂತ್ರಜ್ಞಾನ

ಸಾಮಾನ್ಯವಾಗಿ ನೀರಿನಲ್ಲಿರುವ ಅತ್ಯಂತ ಸೂಕ್ಷ್ಮವಾದ ಪ್ಲಾಸ್ಟಿಕ್ ಕಣಗಳನ್ನು ಫಿಲ್ಟರ್‌ಗಳ ಮೂಲಕ ತಡೆಯುವುದು ಕಷ್ಟ. ಇದನ್ನು ನಿಯಂತ್ರಿಸಲು ಈ ಮೂವರು ಹದಿಹರೆಯದ ವಿದ್ಯಾರ್ಥಿಗಳು ನೈಸರ್ಗಿಕ ವಸ್ತುವಾದ ಹುಣಸೆ ಬೀಜಗಳ ಕಡೆಗೆ ಗಮನ ಹರಿಸಿದರು.

ಈ ಬೀಜಗಳಿಂದ ಹೊರತೆಗೆಯಲಾದ ನೈಸರ್ಗಿಕ ಅಂಶವನ್ನು ನೀರಿನ ಶುದ್ಧೀಕರಣ ಪ್ರಕ್ರಿಯೆಯಲ್ಲಿ ಬಳಸಿದಾಗ, ಅದು ನೀರಿನಲ್ಲಿ ತೇಲುವ ಮೈಕ್ರೋಪ್ಲಾಸ್ಟಿಕ್ ಕಣಗಳನ್ನು ಒಂದೆಡೆ ಸೇರಿಸಿ ದೊಡ್ಡ ಗಂಟಿನಂತಾಗಿಸುತ್ತದೆ. ಇದರಿಂದಾಗಿ ಅತ್ಯಂತ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳನ್ನು ಸಹ ನೀರಿನಿಂದ ಸುಲಭವಾಗಿ ಬೇರ್ಪಡಿಸಿ ಹೊರತೆಗೆಯಲು ಸಾಧ್ಯವಾಗುತ್ತದೆ.

ಪರಿಸರಸ್ನೇಹಿ ತಂತ್ರಜ್ಞಾನ

ಪ್ರಸ್ತುತ ಮಾರುಕಟ್ಟೆಯಲ್ಲಿ ಮೈಕ್ರೋಪ್ಲಾಸ್ಟಿಕ್ ತೆರವುಗೊಳಿಸಲು ಬಳಸಲಾಗುವ ರಾಸಾಯನಿಕ ಹಾಗೂ ಕೃತಕ ತಂತ್ರಜ್ಞಾನಗಳು ಅತ್ಯಂತ ದುಬಾರಿಯಾಗಿದ್ದು, ಮರು-ಮಾಲಿನ್ಯಕ್ಕೆ ಕಾರಣವಾಗುವ ಸಾಧ್ಯತೆಗಳಿರುತ್ತವೆ. ಆದರೆ ಹುಣಸೆ ಬೀಜ ಆಧಾರಿತ ಈ ತಂತ್ರಜ್ಞಾನವು 100% ನೈಸರ್ಗಿಕ, ಶೇಕಡಾ 100ರಷ್ಟು ಅತ್ಯಂತ ಅಗ್ಗದ ವೆಚ್ಚದಲ್ಲಿ ಲಭ್ಯವಾಗುವಂತಹದ್ದಾಗಿದೆ. ಈ ವಿಧಾನದಿಂದ ಜಲಚರಗಳಿಗೆ ಅಥವಾ ಕುಡಿಯುವ ನೀರಿನ ಗುಣಮಟ್ಟಕ್ಕೆ ಯಾವುದೇ ರೀತಿಯ ಹಾನಿ ಆಗುವುದಿಲ್ಲ ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ.

ಭಾರತೀಯ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆಗಳ ಸುರಿಮಳೆ

ಈ ಯುವ ವಿಜ್ಞಾನಿಗಳ ಪರಿಸರಸ್ನೇಹಿ ಮತ್ತು ಪರಿಣಾಮಕಾರಿ ಆವಿಷ್ಕಾರವನ್ನು ಪರಿಶೀಲಿಸಿದ ಜಾಗತಿಕ ತಜ್ಞರ ಸಮಿತಿಯು ಜಲ ಮಾಲಿನ್ಯ ತಡೆಯುವಲ್ಲಿ ಇದು ಅತ್ಯಂತ ಕ್ರಾಂತಿಕಾರಿ ಹೆಜ್ಜೆ ಎಂದು ಬಣ್ಣಿಸಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ನಡೆದ ಜಾಗತಿಕ ಸ್ಪರ್ಧೆಯಲ್ಲಿ ನೂರಾರು ದೇಶಗಳನ್ನು ಹಿಂದಿಕ್ಕಿ ಈ ಭಾರತೀಯ ವಿದ್ಯಾರ್ಥಿಗಳ ಪ್ರಾಜೆಕ್ಟ್ ಪ್ರಥಮ ಸ್ಥಾನ ಪಡೆಯುವ ಮೂಲಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಈ ಸಂಶೋಧನೆಯನ್ನು ಕೇವಲ ಪ್ರಯೋಗಾಲಯಕ್ಕೆ ಸೀಮಿತಗೊಳಿಸದೆ ಗ್ರಾಮೀಣ ಹಾಗೂ ನಗರ ಪ್ರದೇಶಗಳ ನೀರು ಶುದ್ಧೀಕರಣ ಘಟಕಗಳಲ್ಲಿ ಅಳವಡಿಸಿಕೊಳ್ಳಲು ಸೂಕ್ತ ಮಾದರಿಯನ್ನು ಅಭಿವೃದ್ಧಿಪಡಿಸುವುದು ಈ ವಿದ್ಯಾರ್ಥಿಗಳ ಮುಂದಿನ ಗುರಿಯಾಗಿದೆ. ಜಲ ಮಾಲಿನ್ಯಕ್ಕೆ ಭಾರತೀಯ ಯುವ ವಿದ್ಯಾರ್ಥಿಗಳು ನೀಡಿದ ಈ ಸಾಂಪ್ರದಾಯಿಕ ಹಾಗೂ ವೈಜ್ಞಾನಿಕ ಪರಿಹಾರವು ಇದೀಗ ಪ್ರಪಂಚದಾದ್ಯಂತ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+