Indian Railways: ಪ್ರಯಾಣಿಕನಿಗೆ ₹30000 ರೂ.ದಂಡ ಕಟ್ಟಿದ ರೈಲ್ವೆ ಇಲಾಖೆ, ಯಾಕೆ?

ನವದೆಹಲಿ, ಜನವರಿ 22: ಅತ್ಯಂತ ಕಡಿಮೆ ಬೆಲೆಗೆ ಸುರಕ್ಷಿತ ಸಾರಿಗೆ ಸೇವೆ ನೀಡುತ್ತಿರುವ ಭಾರತೀಯ ರೈಲ್ವೆಯು ಕಳಪೆ ನೈರ್ಮಲ್ಯ ವಿಚಾರವಾಗಿ ಸುದ್ದಿಯಾಗಿದೆ. ಅಲ್ಲದೇ ಸ್ವಚ್ಛತೆ ಕಾಪಾಡಿಕೊಳ್ಳದ ಕಾರಣದಿಂದ ಭಾರೀ ಮೊತ್ತದ ದಂಡವನ್ನು ರೈಲ್ವೆ ಇಲಾಖೆ ತೆತ್ತಿದೆ.

ಹೌದು, ರೈಲಿನ ಶೌಚಾಲಯ ಸ್ವಚ್ಛವಾಗಿಲ್ಲ, ಒಳಗೆ ನೀರಿಲ್ಲ ಎಂದು ಪ್ರಯಾಣಿಕರೊಬ್ಬರು ದೂರಿದ್ದಾರೆ. ಈ ಕಳಪೆ ನೈರ್ಮಲ್ಯದ ಕಾರಣದಿಂದ ಭಾವನಾತ್ಮಕ ಮತ್ತು ದೈಹಿಕ ತೊಂದರೆ ಅನುಭವಿಸಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ. ಪರಿಣಾಮವಾಗಿ 30,000 ರೂಪಾಯಿ ಪಾವತಿಸಲು ಭಾರತೀಯ ರೈಲ್ವೆಗೆ ಆದೇಶಿಸಲಾಗಿದೆ. ಈ ಹಣವನ್ನು ಪ್ರಯಾಣಿಕರಿಗೆ ಪಾವತಿಸುವಂತೆ ದೆಹಲಿ ಜಿಲ್ಲಾ ಗ್ರಾಹಕ ಆಯೋಗವು ಭಾರತೀಯ ರೈಲ್ವೆಗೆ ನಿರ್ದೇಶನ ನೀಡಿದೆ ಎಂದು TOI ವರದಿ ಮಾಡಿದೆ.

Indian Railways Pay Rs 30000 Fine to Passenger: Check what is the reason for this direction get

ಭಾರತೀಯ ರೈಲ್ವೇಯು ಪ್ರಯಾಣಿಕರಿಗೆ ಮೂಲಭೂತ ಸೌಕರ್ಯ ಒದಗಿಸಿಲ್ಲ ಎಂಬುದು ಜಿಲ್ಲಾ ಗ್ರಾಹಕ ಆಯೋಗದ ಗಮನಕ್ಕೆ ಬಂದಿದೆ. ಪ್ರಯಾಣಿಕರಿಗೆ ಮೂಲಸೌಕರ್ಯಗಳನ್ನು 'ನಾಗರಿಕರ ಚಾರ್ಟರ್' ಅಡಿಯಲ್ಲಿ ಭಾರತೀಯ ರೈಲ್ವೇ ಒದಗಿಸಬೇಕು. ಸರ್ಕಾರಿ ಸಂಸ್ಥೆಗಳು ಬದ್ಧತೆ ಮೆರೆಯಬೇಕು. ಆದರೆ ಇಲ್ಲಿ ಗ್ರಾಹಕರಿಗೆ ಒದಗಿಸುವ ಸೇವೆಗಳಲ್ಲಿ ಕೊರತೆ ಕಂಡು ಬಂದಿದೆ.

ದೂರದಾರರ ಪರ ವಕೀಲರ ವಾದ

ಇಂತಹ ಸೌಲಭ್ಯಗಳ ಕೊರತೆ ಗ್ರಾಹಕರು ತೊಂದರೆಗೀಡಾಗಿದ್ದಾರೆ. ರೈಲಿನಲ್ಲಿ ಪ್ರಯಾಣಿಸಲು ಭಾರತೀಯ ರೈಲ್ವೆಯ ಪ್ರಯಾಣಿಕರು ತಮ್ಮ ಟಿಕೆಟ್‌ಗೆ ಸಂಪೂರ್ಣ ಬೆಲೆಯನ್ನು ಪಾವತಿಸಿರುತ್ತಾರೆ. ಆದರೆ ರೈಲುಗಳಲ್ಲಿ ನೀರು ಮತ್ತು ಶುದ್ಧ ಶೌಚಾಲಯಗಳಂತಹ ಮೂಲಭೂತ ಸೌಕರ್ಯಗಳು ಅವರಿಗೆ ನಿರ್ಬಂಧ ವಿರುತ್ತದೆ ಎಂದು ದೂರುದಾರರ ಪರ ವಕೀಲರು ವಾದಿಸಿದರು. ಇತರ ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ ಎಂದರು.

Indian Railways Pay Rs 30000 Fine to Passenger: Check what is the reason for this direction get

ನೀರಿಲ್ಲದೇ ರೈಲಿನ ಶೌಚಾಲಯದ ಅವ್ಯವಸ್ಥೆ

ಮೂಲಗಳ ಪ್ರಕಾರ, ದೂರುದಾರರು 2021 ರಂದು ಸೆಪ್ಟೆಂಬರ್ 3 ರಂದು 3AC ಟಿಕೆಟ್‌ನಲ್ಲಿ ನವದೆಹಲಿ ರೈಲು ನಿಲ್ದಾಣದಿಂದ ಇಂದೋರ್‌ಗೆ ಪ್ರಯಾಣ ಮಾಡಿದ್ದರು. ಆರಾಮದಾಯಕ ಪ್ರಯಾಣಕ್ಕಾಗಿ ಸ್ಲೀಪರ್ ಕೋಚ್‌ಗಿಂತ ಹೆಚ್ಚು ದುಬಾರಿ ಆದ 3AC ಟಿಕೆಟ್ ಖರೀದಿಸಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.

ಬೆಳಗ್ಗೆ ಎದ್ದು ಶೌಚಕ್ಕೆ ಹೋಗಬೇಕು ಎಂದು ಅನಿಸಿದಾಗ ನೀರು ಇಲ್ಲದಿರುವುದು ಹಾಗೂ ರೈಲಿನ ಶೌಚಾಲಯ ಕೊಳಕಾಗಿರುವುದು ಗಮನಕ್ಕೆ ಬಂದಿದೆ. ಕೈ ತೊಳೆಯಲು ಸಾಕಷ್ಟು ನೀರು ಇರಲಿಲಲ್ಲ ಎಂದು ಅವರು ದೂರಿದ್ದಾರೆ.

ಭಾರತೀಯ ರೈಲ್ವೆಗೆ ದೂರು ಸಲ್ಲಿಕೆ

ವಾಶ್ ಬೇಸಿನ್ ಕೂಡ ಕೊಳಕಿನಿಂದ ಕೊಡಿತ್ತು. ಪ್ರಯಾಣಿಕರು ನಂತರ ಭಾರತೀಯ ರೈಲ್ವೆಗೆ ಅದರ ಆನ್‌ಲೈನ್ ಪೋರ್ಟಲ್ "ರೈಲ್ ಮದದ್" ನಲ್ಲಿ ದೂರು ಸಲ್ಲಿಸಿದರು. ಜೊತೆ ಈ ಘಟನೆ ಕುರಿತು ಅವರು X ನಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಕೇಂದ್ರ ರೈಲ್ವೇ ಮಂತ್ರಿ ಮತ್ತು ರೈಲ್ವೆ ಸೇವಾ ಖಾತೆ ದೂರು ದಾಖಲಿಸಿಕೊಂಡರೂ ಸಹಿತ ಯಾವ ಕ್ರಮ ಕೈಗೊಳ್ಳಲಿಲ್ಲ.

ಅವ್ಯವಸ್ಥೆಯಿಂದ ತೊಂದರೆ

ರೈಲು ಇಂದೋರ್ ನಿಲ್ದಾಣವನ್ನು ತಲುಪಿದ ಬಳಿಕ ರೈಲಿನ ಶೌಚಾಲಯದೊಳಗೆ ಹೋಗಲು ಸಾಧ್ಯವಾಗಲಿಲ್ಲ. ಇದರಿಂದ ನನಗೆ ಭಾವನಾತ್ಮಕ ಮತ್ತು ದೈಹಿಕ ತೊಂದರೆ ಉಂಟಾಯಿತು. ಈ ಸೇವೆಗಳು ನಾಗರಿಕರ ಚಾರ್ಟರ್ ಅಡಿಯಲ್ಲಿ ಒಳಗೊಂಡಿಲ್ಲ ಎಂದು ರೈಲ್ವೆ ನಿರಾಕರಿಸುತ್ತಲೇ ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದೆಲ್ಲ ವಿಚಾರಣೆ ನಡೆಸಿ ಗ್ರಾಹಕ ಆಯೋಗವು ಭಾರತೀಯ ರೈಲ್ವೇಗೆ 30,000 ರೂಪಾಯಿಗಳ ಪರಿಹಾರವನ್ನು ಮತ್ತು ವ್ಯಾಜ್ಯ ಶುಲ್ಕಕ್ಕಾಗಿ 10,000 ರೂಪಾಯಿಗಳನ್ನು ನೀಡುವಂತೆ ತಿಳಿಸಿದೆ. ನಿರ್ದೇಶನ ಮೇರೆಗೆ ಭಾರತೀಯ ರೈಲ್ವೆಯು ಪ್ರಯಾಣಿಕರಿಗೆ ದಂಡದ ಹಣ ಪಾವತಿಸಿದೆ ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+