ಸೆ.1 ಪ್ರಯಾಣಿಕರಿಗೆ ಉಚಿತ ಪ್ರಯಾಣ ವಿಮೆ ಸೌಲಭ್ಯ ಇನ್ನಿಲ್ಲ

ನವದೆಹಲಿ, ಆಗಸ್ಟ್ 12: ಪ್ರಯಾಣಿಕರಿಗೆ ನೀಡುತ್ತಿದ್ದ ಉಚಿತ ಪ್ರಯಾಣ ವಿಮೆ ಸೌಲಭ್ಯವನ್ನು ಸೆಪ್ಟೆಂಬರ್ 01ರಿಂದ ಸ್ಥಗಿತಗೊಳಿಸಲಾಗುವುದು ಎಂದು ಭಾರತೀಯ ರೈಲ್ವೆ ಇಲಾಖೆ ಪ್ರಕಟಿಸಿದೆ.

ಸೆಪ್ಟೆಂಬರ್ 1ರಿಂದ ಐ ಆರ್ ಸಿ ಟಿ ಸಿ ಉಚಿತ ಪ್ರಯಾಣ ವಿಮೆ ಸೌಲಭ್ಯವನ್ನು ನೀಡದಿರಲು ನಿರ್ಧರಿಸಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

2017ರ ಡಿಸೆಂಬರ್ ನಲ್ಲಿ ಡಿಜಿಟಲ್ ವ್ಯವಹಾರಕ್ಕೆ ಉತ್ತೇಜನ ನೀಡಲು ರೈಲ್ವೆ ಇಲಾಖೆಯು ಉಚಿತ ಪ್ರಯಾಣ ವಿಮೆ ಆರಂಭಿಸಿತ್ತು.ಆದರೆ, ಈಗ ವೆಬ್ಸೈಟ್ ಹಾಗೂ ಮೊಬೈಲ್ ಆ್ಯಪ್ ಮೂಲಕ ಟಿಕೆಟ್ ಬುಕ್ ಮಾಡುವ ವೇಳೆ ಈ ಆಯ್ಕೆ ಇರುವುದಿಲ್ಲ ಎಂದು ಐಆರ್ ಸಿಟಿಸಿ ಹೆಳಿದೆ.

Indian Railways: No free travel insurance in trains from Sept 1

ಉಚಿತ ಪ್ರಯಾಣ ವಿಮೆಯಲ್ಲಿ ಪ್ರಯಾಣದ ವೇಳೆ ಸಂಭವಿಸುವ ದುರ್ಘಟನೆಯಲ್ಲಿ ಪ್ರಯಾಣಿಕ ಸಾವನ್ನಪ್ಪಿದ್ರೆ 10 ಲಕ್ಷದವರೆಗೆ ವಿಮೆ ಹಣ ಸಿಗ್ತಾಯಿತ್ತು. ಗಾಯಾಳುಗಳಿಗೆ 2 ಲಕ್ಷ ರೂಪಾಯಿ ನೀಡಲಾಗುತ್ತಿತ್ತು. ಆದರೆ, ಇನ್ಮುಂದೆ ಪ್ರಯಾಣ ವಿಮೆ ಇನ್ಮುಂದೆ ಉಚಿತವಾಗಿರುವುದಿಲ್ಲ.

ಹಣ ಪಾವತಿ ಮಾಡಿ ಸೌಲಭ್ಯ ಪಡೆದುಕೊಳ್ಳುವ ಬಗ್ಗೆ ಇನ್ನೂ ಮಾಹಿತಿಯಿಲ್ಲ. ಬುಕ್ ಮಾಡುವಾಗ ವಿಮೆ ಸೌಲಭ್ಯ ಬೇಕು ಅಥವಾ ಬೇಡ ಎಂಬ ಆಯ್ಕೆ ಮಾಡಬಹುದು. ಶೀಘ್ರದಲ್ಲೇ ರೈಲ್ವೆ ಇಲಾಖೆ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+