IRCTC: ರೈಲು ಟಿಕೆಟ್ ಬುಕಿಂಗ್‌ನಲ್ಲಿ ಮಹತ್ವದ ಬದಲಾವಣೆ: ಉಚಿತ ದಿನಾಂಕ ಬದಲಾವಣೆ ನಿಯಮ ಜಾರಿ
ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯು ಟಿಕೆಟ್ ಬುಕಿಂಗ್ ಬಳಿಕ ದಿನಾಂಕ ಬದಲಾವಣೆಯ ಮಹತ್ವದ ನಿಯಮವು ಜಾರಿಗೆ ಬಂದಿದೆ. ಹೊಸ ನಿಯಮದ ಪ್ರಕಾರ, ಐಆರ್‌ಸಿಟಿಸಿ (IRCTC) ಮೂಲಕ ಆನ್‌ಲೈನ್‌ನಲ್ಲಿ ಬುಕ್ ಮಾಡಿದ ಕನ್ಫರ್ಮ್ ಇ-ಟಿಕೆಟ್‌ಗಳನ್ನು ಉಚಿತವಾಗಿ ರಿಸ್ಕೆಡ್ಯೂಲ್ (ಪ್ರಯಾಣದ ದಿನಾಂಕ ಬದಲಾಯಿಸುವುದು) ಮಾಡಲು ಅವಕಾಶ ನೀಡುವ ಈ ನಿಯಮವನ್ನು ಇದೇ ತಿಂಗಳಿನಿಂದಲೇ ಜಾರಿಗೆ ತರಲಾಗಿದೆ.
ರೈಲು ಪ್ರಯಾಣಿಕರು ಸಾಮಾನ್ಯವಾಗಿ ಐಆರ್‌ಸಿಟಿಸಿ ಆಪ್ ಇಲ್ಲವೇ ಜಾಲತಾಣದ ಮೂಲಕ ರೈಲ್ವೆ ಟಿಕೆಟ್ ಬುಕ್ ಮಾಡುತ್ತಾರೆ. ಆದರೆ ಒಂದು ವೇಳೆ ಪ್ರಯಾಣದ ದಿನಾಂಕ ಬದಲಾದರೆ, ಮುಂಗಡ ಟಿಕೆಟ್ ಬುಕಿಂಗ್ ಅನ್ನು ಕ್ಯಾನ್ಸಲ್ ಮಾಡಬೇಕಿತ್ತು. ಬಳಿಕ ನಿಗದಿತ ದಿನಾಂಕಕ್ಕೆ ಮತ್ತೊಮ್ಮೆ ಟಿಕೆಟ್ ಬುಕ್ ಮಾಡಬೇಕಾಗಿತ್ತು. ಇದೀಗ ಹೊಸ ನಿಯಮದಿಂದ ಆ ತೊಂದರೆ ತಪ್ಪಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಪ್ರಯಾಣಿಕರು ಶುಲ್ಕ ಪಾವತಿಸಬೇಕೆ?
ಪ್ರಯಾಣಿಕರು ತಾವು ಬುಕ್ ಮಾಡಿದ ರೈಲು ಟಿಕೆಟ್ ಖಚಿತವಾದ ಬಳಿಕವು ನೀವು ಉಚಿತವಾಗಿ ಬೇರೊಂದು ದಿನಾಂಕಕ್ಕೆ ಅದೆ ಟಿಕೆಟ್ ಮೂಲಕ ಪ್ರಯಾಣವನ್ನು ರಿಸ್ಕೆಡ್ಯೂಲ್ ಮಾಡಬಹುದಾಗಿದೆ. ಅದಕ್ಕಾಗಿ ನೀವು ಯಾವು ಕ್ಯಾನ್ಸಲೇಶನ್ ಶುಲ್ಕ ಅಥವಾ ಹೆಚ್ಚುವರಿ ಶುಲ್ಕ ಕಟ್ಟದೇ ದಿನಾಂಕ ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಮೊದಲಿದ್ದ ನಿಯಮ ಪ್ರಕಾರ, ಒಂದು ವೇಳೆ ಟಿಕೆಟ್ ಕ್ಯಾನ್ಸಲ್ ಮಾಡಿ ಮತ್ತೊಮ್ಮೆ ಬುಕ್ ಮಾಡಬೇಕಾಗುತ್ತಿತ್ತು. ಆಗ ಟಿಕೆಟ್ ದರದಲ್ಲಿ ಶೇಕಡಾ 25 ರಿಂದ 50 ವರೆಗೆ ದಂಡ ಕಡಿತಗೊಳಿಸಲಾಗುತ್ತಿತ್ತು. ಅದಕ್ಕೀಗ ಬ್ರೇಕ್ ಬಿದ್ದಿದೆ.
ರೈಲ್ವೆ ಇಲಾಖೆ ಮೂಲಗಳ ಪ್ರಕಾರ, 2026ರ ಜನವರಿ 12ರಿಂದ ಈ ಹೊಸ ನಿಯಮ ಜಾರಿ ಆಗಿದೆ. ಪ್ರಯಾಣಿಕರು IRCTC ಮೊಬೈಲ್ ಆಪ್ ಇಲ್ಲವೇ ಅಧಿಕೃತ ಜಾಲತಾಣ (irctc.co.in) ಮೂಲಕ ಲಾಗಿನ್ ಆಗಿ ನಿಮ್ಮ ಬುಕಿಂಗ್ ಸೆಕ್ಷನ್‌ನಲ್ಲಿ ಹೊಸ ಆಯ್ಕೆ (Change Travel Date ಅಥವಾ Reschedule ಆಯ್ಕೆ) ಕಾಣಿಸುತ್ತದೆ.
ಹೆಚ್ಚುವರಿ ಶುಲ್ಕ ಪಾವತಿಸಬೇಕೆ?
ನೀವು ಟಿಕೆಟ್ ಬುಕ್ ಮಾಡಿ ಬಳಿಕ ಆ ಪ್ರಯಾಣವನ್ನು ಬೇರೊಂದು ದಿನಾಂಕಕ್ಕೆ ರಿಸ್ಕೆಡ್ಯೂಲ್ ಮಾಡಬೇಕಾದರೆ ಒಂದು ವೇಳೆ ರಿಸ್ಕೆಡ್ಯೂಲ್ ದಿನಾಂಕದಲ್ಲಿ ಟಿಕೆಟ್ ದರ ಹೆಚ್ಚಿದ್ದರೆ ಮಾತ್ರವೇ ಆ ಹೆಚ್ಚುವರಿ ಮೊತ್ತವನ್ನು (fare difference) ನೀವು ಪಾವತಿಸಬೇಕಾಗುತ್ತದೆ. ಒಂದು ವೇಳೆ ಟಿಕೆಟ್ ದರ ಬದಲಾಗದಿದ್ದರೆ, ಕಡಿಮೆ ಇದ್ದರೆ ಮೊದಲಿನ ಪಾವತಿಯಲ್ಲಿಯೇ ದಿನಾಂಕ ಬದಲಾಯಿಸಬಹುದಾಗಿದೆ.
ಷರತ್ತು, ವಿಶೇಷ ಸೂಚನೆ ಗಮನಿಸಿ
ಪ್ರಯಾಣಿಕರು ಇಲ್ಲಿ ಗಮನಿಸಬೇಕಾದ ಅಂಶವೆಂದರೆ ನೀವು ಬುಕ್ ಮಾಡಿದ ಟಿಕೆಟ್ ದೃಢಪಟ್ಟಿದ್ದರೆ (ಕನ್ಫರ್ಮ್ ಆಗಿದ್ದರೆ) ಮಾತ್ರವೇ (ವೇಟ್‌ಲಿಸ್ಟ್ ಅಥವಾ ತತ್ಕಾಲ್ ಟಿಕೆಟ್‌ಗಳಿಗೆ ಸಾಮಾನ್ಯವಾಗಿ ಲಭ್ಯವಿಲ್ಲ) ರಿಸ್ಕೆಡ್ಯೂಲ್‌ಗೆ ಅವಕಾಶ ಇದೆ. ಅಲ್ಲದೇ ಹೊಸ ದಿನಾಂಕದಲ್ಲಿ ಸೀಟುಗಳು ಲಭ್ಯವಿರಬೇಕು. ಇಲ್ಲವಾದಲ್ಲಿ ರಿಸ್ಕೆಡ್ಯೂಲ್ ಆಗುವುದಿಲ್ಲ. ಇನ್ನೂ ಒಂದು ಟಿಕೆಟ್‌ಗೆ ಒಮ್ಮೆ ಮಾತ್ರವೇ ರಿಸ್ಕೆಡ್ಯೂಲ್‌ಗೆ ಅವಕಾಶ ಇದೆ. ಪಿಎನ್‌ಆರ್ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಈ ಟಿಕೆಟ್ ರಿಸ್ಕೆಡ್ಯೂಲ್ ನಿಯಮದ ಬಗ್ಗೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಕಳೆದ 2025 ಅಕ್ಟೋಬರ್‌ನಲ್ಲಿ ಘೋಷಿಸಿದ್ದರು. ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯ ನೀಡುವ ಡಿಜಿಟಲ್ ಸುಧಾರಣೆಯ ಭಾಗವಾಗಿದೆ. ಪ್ರಯಾಣಿಕರಿಗೆ ಇದು ಹೆಚ್ಚಿನ ಅನುಕೂಲ ಒದಗಿಸಲಿದೆ ಎಂದು ತಿಳಿಸಿದ್ದರು. ಅದರಂತೆ ಇದೀಗ ಹೊಸ ನಿಯಮ ಜಾರಿಯಾಗಿದೆ.












Click it and Unblock the Notifications