ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಯಾಣಿಕರ ರೈಲು ಆರಂಭ; ಒಂದೇ ದಿನದಲ್ಲಿ ರೈಲ್ವೆಗೆ 16 ಕೋಟಿ ಆದಾಯ

|
Google Oneindia Kannada News

ಬೆಂಗಳೂರು, ಮೇ 13 : ಲಾಕ್ ಡೌನ್ ಘೋಷಣೆಯಾದ ಬಳಿಕ ಭಾರತೀಯ ರೈಲ್ವೆ ಪ್ರಯಾಣಿಕ ರೈಲುಗಳ ಸಂಚಾರ ರದ್ದುಗೊಳಿಸಿತ್ತು. ಇದರಿಂದಾಗಿ ಇಲಾಖೆಗೆ ಭಾರೀ ನಷ್ಟವಾಗಿದೆ. ಆದರೆ, ಈಗ ರೈಲುಗಳ ಸಂಚಾರವನ್ನು ಪುನಃ ಆರಂಭಿಸಲಾಗಿದೆ.

ಸೋಮವಾರ ರೈಲ್ವೆ ಟಿಕೆಟ್ ಬುಕ್ಕಿಂಗ್ ಆರಂಭಿಸಿತು. ಕೇವಲ ಒಂದೇ ದಿನದಲ್ಲಿ 82,317 ಜನರು ಟಿಕೆಟ್ ಬುಕ್ ಮಾಡಿದ್ದಾರೆ. ಭಾರತೀಯ ರೈಲ್ವೆಗೆ 16 ಕೋಟಿ ಹಣ ಸಂಗ್ರಹವಾಗಿದೆ.

ಬೆಂಗಳೂರು-ದೆಹಲಿ ಪ್ರತಿದಿನದ ರೈಲು; ವೇಳಾಪಟ್ಟಿ, ನಿಲ್ದಾಣಗಳು ಬೆಂಗಳೂರು-ದೆಹಲಿ ಪ್ರತಿದಿನದ ರೈಲು; ವೇಳಾಪಟ್ಟಿ, ನಿಲ್ದಾಣಗಳು

ಮೇ 10ರಂದು ರೈಲ್ವೆ ಕೆಲವು ಮಾರ್ಗದಲ್ಲಿ ಪ್ರಯಾಣಿಕ ರೈಲು ಸಂಚಾರ ಆರಂಭ ಮಾಡುವುದಾಗಿ ಘೋಷಣೆ ಮಾಡಿತು. ಸೋಮವಾರ ಬುಕ್ಕಿಂಗ್ ಆರಂಭಿಸಿತು. ಹಲವು ಮಾರ್ಗದ ಟಿಕೆಟ್‌ಗಳು ಅರ್ಧ, ಒಂದು ಗಂಟೆಯಲ್ಲಿಯೇ ಸಂಪೂರ್ಣವಾಗಿ ಸೋಲ್ಡ್‌ ಔಟ್ ಆಯಿತು.

ರೈಲು ಸೇವೆ ಆರಂಭ; ಪ್ರಯಾಣಿಕರಿಗೆ ಮಾರ್ಗಸೂಚಿಗಳು ರೈಲು ಸೇವೆ ಆರಂಭ; ಪ್ರಯಾಣಿಕರಿಗೆ ಮಾರ್ಗಸೂಚಿಗಳು

Indian Railways Collection Over 16 Crore In One Day

ಟಿಕೆಟ್ ಬುಕ್ಕಿಂಗ್ ಆರಂಭವಾಗುತ್ತಿದ್ದಂತೆ ಜನರು ವೆಬ್‌ಸೈಟ್‌ಗೆ ಮುಗಿಬಿದ್ದರು. 82,317 ಜನರಿಗೆ ಒಂದು ದಿನದಲ್ಲಿ ಟಿಕೆಟ್ ಸಿಕ್ಕಿತು. 16,15,63,821 ರೂ. ಹಣ ಸಂಗ್ರಹವಾಯಿತು.

ಪ್ರಯಾಣಿಕರ ರೈಲು ಸಂಚಾರ ಆರಂಭ, ಟಿಕೆಟ್ ಬುಕ್ ಹೇಗೆ? ಪ್ರಯಾಣಿಕರ ರೈಲು ಸಂಚಾರ ಆರಂಭ, ಟಿಕೆಟ್ ಬುಕ್ ಹೇಗೆ?

ದೇಶದಲ್ಲಿ 3ನೇ ಹಂತದ ಲಾಕ್ ಡೌನ್ ಜಾರಿಯಲ್ಲಿದೆ. ಆದರೆ, ಹಲವು ಮಾರ್ಗಸೂಚಿಯೊಂದಿಗೆ ರೈಲ್ವೆ ಪ್ರಯಾಣಿಕರ ರೈಲು ಸಂಚಾರವನ್ನು ಹಲವು ಮಾರ್ಗಗಳಲ್ಲಿ ಮಂಗಳವಾರದಿಂದ ಆರಂಭಿಸಿದೆ.

ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಯಾತ್ರಾರ್ಥಿಗಳು, ಪ್ರವಾಸಿಗರನ್ನು ತಮ್ಮ ತವರು ರಾಜ್ಯಕ್ಕೆ ಕಳಿಸಲು ವಿವಿಧ ರಾಜ್ಯಗಳಿಂದ ಶ್ರಮಿಕ್ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ.

ಲಾಕ್ ಡೌನ್ ಜಾರಿಯಲ್ಲಿದ್ದರೂ ಗೂಡ್ಸ್ ರೈಲುಗಳ ಸಂಚಾರ ಮತ್ತು ವಿಶೇಷ ಪಾರ್ಸೆಲ್ ರೈಲುಗಳ ಸಂಚಾರ ಸ್ಥಗಿತಗೊಂಡಿಲ್ಲ. ಮುಂದಿನ ವಾರದಲ್ಲಿ ಮತ್ತೆ ಇನ್ನಷ್ಟು ಮಾರ್ಗದಲ್ಲಿ ಸಂಚಾರ ಆರಂಭವಾಗುವ ನಿರೀಕ್ಷೆ ಇದೆ.

English summary
Indian railways have generated over 16 crore and issued 82,317 tickets in one day after passenger train service open for public in the time of lock down.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X