Indian Railways: ಅಕ್ಟೋಬರ್ 17 ರ ವರೆಗೆ 18 ವಿಶೇಷ ರೈಲುಗಳು ರದ್ದು- ಯಾವ ರೈಲು, ಏನು ಕಾರಣ? ಇಲ್ಲಿ ತಿಳಿಯಿರಿ
ನವದೆಹಲಿ, ಅಕ್ಟೋಬರ್ 03: ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 17 ರ ವರೆಗೆ ಭಾರತೀಯ ರೈಲ್ವೆಯು ದೇಶದಾದ್ಯಂತ 18 ವಿಶೇಷ ರೈಲುಗಳನ್ನು ರದ್ದುಗೊಳಿಸಿದೆ.
ಪೂರ್ವ ಕೇಂದ್ರ ರೈಲ್ವೇಯಿಂದ ಕಾರ್ಯನಿರ್ವಹಿಸುವ ಕನಿಷ್ಠ 18 ವಿಶೇಷ ಮೇಲ್ / ಎಕ್ಸ್‌ಪ್ರೆಸ್ ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ಭಾರತೀಯ ರೈಲ್ವೆ ಮಾಹಿತಿ ನೀಡಿದೆ.

ಆಗ್ನೇಯ ರೈಲ್ವೆಯ (ಎಸ್‌ಇಆರ್) ಚಕ್ರಧರಪುರ ವಿಭಾಗದಲ್ಲಿ ಮೂರನೇ ಮಾರ್ಗದ ಕಮಿಷನಿಂಗ್, ಯಾರ್ಡ್‌ಗಳ ಮರು ನಿರ್ಮಾಣ ಮತ್ತು ಇಂಟರ್‌ಲಾಕಿಂಗ್ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ಭಾರತೀಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ಆಗ್ನೇಯ ವಿಭಾಗದಲ್ಲಿ ಹಳಿಗಳ ಸುರಕ್ಷತೆ ಕ್ರಮಗಳನ್ನು ಮತ್ತಷ್ಟು ಬಲಪಡಿಸಲು ಈ ಕ್ರಮವನ್ನು ತೆಗೆದುಕೊಂಡಿದೆ ಎಂದೂ ಭಾರತೀಯ ರೈಲ್ವೆ ಹೇಳಿದೆ.
ಈ ಕುರಿತು ಮಾತನಾಡಿರುವ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬೀರೇಂದ್ರ ಕುಮಾರ್, ರಾಜೇಂದ್ರ ನಗರ ಟರ್ಮಿನಲ್-ದುರ್ಗ ದಕ್ಷಿಣ ಬಿಹಾರ್ ಎಕ್ಸ್‌ಪ್ರೆಸ್ (13287/13288) ಅಕ್ಟೋಬರ್ 10 ರ ವರೆಗೆ ರದ್ದಾಗಲಿದೆ ಎಂದು ತಿಳಿಸಿದ್ದಾರೆ.

ಬಿಲಾಸ್‌ಪುರ-ಪಾಟ್ನಾ ಎಕ್ಸ್‌ಪ್ರೆಸ್ (22843/22844) ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 15 ರ ವರೆಗೆ ರದ್ದಾಗಿದೆ ಎಂದು ಹೇಳಿದ್ದಾರೆ.
ಹೈದರಾಬಾದ್- ರಕ್ಸೌಲ್ ಎಕ್ಸ್‌ಪ್ರೆಸ್ (17005/17006) ಅಕ್ಟೋಬರ್ 12 ರಂದು ಹೈದರಾಬಾದ್‌ನಿಂದ ಮತ್ತು ಅಕ್ಟೋಬರ್ 15 ರಂದು ರಕ್ಸಾಲ್‌ನಿಂದ ರದ್ದುಗೊಳ್ಳುತ್ತದೆ.
ಸಿಕಂದರಾಬಾದ್- ದರ್ಬಂಗಾ ಎಕ್ಸ್‌ಪ್ರೆಸ್ (17007/17008) ಅಕ್ಟೋಬರ್ 14 ರಂದು ಸಿಕಂದರಾಬಾದ್‌ನಿಂದ ಮತ್ತು ಅಕ್ಟೋಬರ್ 17 ರಂದು ದರ್ಭಾಂಗಾದಿಂದ ರದ್ದುಗೊಳ್ಳುತ್ತದೆ.

ಸೂರತ್- ಮಾಲ್ಡಾ ಟೌನ್ ಎಕ್ಸ್‌ಪ್ರೆಸ್ (13425/13426) ಅಕ್ಟೋಬರ್ 2 ಮತ್ತು 16 ರಂದು ಸೂರತ್‌ನಿಂದ ಮತ್ತು ಅಕ್ಟೋಬರ್ 7 ಮತ್ತು 14 ರಂದು ಮಾಲ್ಡಾ ಟೌನ್‌ನಿಂದ ರದ್ದುಗೊಳ್ಳುತ್ತದೆ.
ಸಂಬಲ್‌ಪುರ- ವಾರಣಾಸಿ ಎಕ್ಸ್‌ಪ್ರೆಸ್ (18311/18312) ಅಕ್ಟೋಬರ್ 4, 11 ಮತ್ತು 15 ರಂದು ಸಂಬಲ್‌ಪುರದಿಂದ ಮತ್ತು ಅಕ್ಟೋಬರ್ 5, 12, 13 ಮತ್ತು 16 ರಂದು ವಾರಣಾಸಿಯಿಂದ ರದ್ದಾಗಲಿದೆ.
ಸಂಬಲ್‌ಪುರ- ಜಮ್ಮು ತಾವಿ ಎಕ್ಸ್‌ಪ್ರೆಸ್ (18309/18310) ಅಕ್ಟೋಬರ್ 9, 12 ಮತ್ತು 14 ರಂದು ಸಂಬಲ್‌ಪುರದಿಂದ ಮತ್ತು ಅಕ್ಟೋಬರ್ 10, 12 ಮತ್ತು 13 ರಂದು ಜಮ್ಮು ತಾವಿಯಿಂದ ರದ್ದಾಗಲಿದೆ.
ಭುವನೇಶ್ವರ್- ಆನಂದ್ ವಿಹಾರ್ ಎಕ್ಸ್‌ಪ್ರೆಸ್ (22805/22806) ಅಕ್ಟೋಬರ್ 14 ಮತ್ತು 15 ರಂದು ರದ್ದುಗೊಳ್ಳುತ್ತದೆ.
ವಾಸ್ಕೋ ಡಿ ಗಾಮಾ- ಜಸಿದಿಹ್ ಎಕ್ಸ್‌ಪ್ರೆಸ್ (17321/17322) ಅಕ್ಟೋಬರ್ 13 ಮತ್ತು 16 ರಂದು ರದ್ದುಗೊಳ್ಳುತ್ತದೆ.
ಜಯನಗರ- ರೂರ್ಕೆಲಾ ಎಕ್ಸ್‌ಪ್ರೆಸ್ (18105/18106) ಅಕ್ಟೋಬರ್ 4, 6, 9, 11 ಮತ್ತು 13 ರಂದು ಹಟಿಯಾದಲ್ಲಿ ಅಲ್ಪಾವಧಿಗೆ ಕಾರ್ಯಸ್ಥಗಿತಗೊಳಿಸಲಿದೆ.
ಜಮ್ಮು ತಾವಿ- ಸಂಬಲ್ಪುರ್ ಎಕ್ಸ್‌ಪ್ರೆಸ್ ಅಕ್ಟೋಬರ್ 3 ಮತ್ತು 5 ರಂದು ಹಟಿಯಾದಲ್ಲಿ ಅಲ್ಪಾವಧಿಗೆ ಕಾರ್ಯಸ್ಥಗಿತಗೊಳಿಸಲಿದೆ.
ಅಸನ್ಸೋಲ್- ವಾರಣಾಸಿ ಎಕ್ಸ್‌ಪ್ರೆಸ್ (13553/13554) ವಾರಣಾಸಿ ವಿಭಾಗದಲ್ಲಿ ದುರಸ್ತಿ ಕಾರಣ ಅಕ್ಟೋಬರ್ 15 ರವರೆಗೆ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್‌ನಲ್ಲಿ ಅಲ್ಪಾವಧಿಗೆ ಕಾರ್ಯಸ್ಥಗಿತಗೊಳಿಸಲಿದೆ.












Click it and Unblock the Notifications