ಭಾರತೀಯ ರೈಲ್ವೆ ಸುರಕ್ಷತೆಯಲ್ಲಿ ಬೃಹತ್ ಸುಧಾರಣೆ: ತಂತ್ರಜ್ಞಾನದಿಂದ ಅಪಘಾತ ಪ್ರಮಾಣ ಇಳಿಕೆ
ನವದೆಹಲಿ: ವಿಶ್ವದಲ್ಲಿ ಬೃಹತ್ ಜಾಲ ಹೊಂದಿರುವ ಭಾರತೀಯ ರೈಲ್ವೆಯು ವ್ಯಾಪ್ತಿಯಲ್ಲಿ ಪ್ರತಿನಿತ್ಯ 25,000 ಕ್ಕೂ ಹೆಚ್ಚು ರೈಲುಗಳನ್ನು ಓಡಿಸುತ್ತಿದೆ. ಅದರಲ್ಲಿ 14,000 ಕ್ಕೂ ಹೆಚ್ಚು ಪ್ರಯಾಣಿಕ ರೈಲುಗಳಾಗಿವೆ. 2014 ರಿಂದ ಈವರೆಗೆ ರೈಲ್ವೆ ಮೂಲಭೂತ ಸೌಕರ್ಯ ಅಭಿವೃದ್ಧಿಪಡಿಸಲಾಗಿದೆ. ಪ್ರಯಾಣಿಕರ ಸುರಕ್ಷತೆಗೆ ಆದ್ಯೆತೆ ನೀಡಿರುವ ಕಾರಣ ಅಪಘಾತ ಪ್ರಮಾಣ ತೀವ್ರ ಸ್ವರೂಪದಲ್ಲಿ ಇಳಿಕೆ ಆಗಿದೆ. ಜೊತೆಗೆ ಜನರ ಸುಕ್ಷಿತೆಗೆ, ರೈಲ್ವೆ ಸುಧಾರಣೆಗೆ ಮಾಡುವ ವೆಚ್ಚ ಹೆಚ್ಚಾಗಿದೆ.
ರೈಲ್ವೆ ಇಲಾಖೆ ಸಚಿವ ಅಶ್ವಿನಿ ವೈಷ್ಣವ್ ಅವರು ಮಾಹಿತಿ ನೀಡಿದ್ದು, ರೈಲುಗಳಿಗೆ ಆಗುವ ಹಾನಿ ಪ್ರಮಾಣ ಶೇ.92 ರಷ್ಟು ಕಡಿಮೆಯಾಗಿದೆ. ಗಂಭೀರ ವೈಫಲ್ಯಗಳು ಶೇ.93 ರಷ್ಟು ಕಡಿಮೆಯಾಗಿದೆ. ಇದಕ್ಕೆ ರೈಲ್ವೆ ವಲಯದಲ್ಲಿ ರಚನಾತ್ಮಕ, ತಾಂತ್ರಿಕ ಮತ್ತು ಆರ್ಥಿಕ ರೂಪಾಂತರ ಕಾರಣವಾಗಿವೆ ಎಂದು ತಿಳಿಸಿದ್ದಾರೆ.

ಅಪಘಾತ ಶೇ.89ರಷ್ಟು ಇಳಿಕೆ
2014 ರಿಂದ 15ರಲ್ಲಿ 135 ಅಪಘಾತಗಳು ದಾಖಲಾಗುತ್ತಿದ್ದರೆ ಇಂದು 2025-26ರಲ್ಲಿ ಈ ಸಂಖ್ಯೆ ತೀವ್ರವಾಗಿ ಕಡಿಮೆಯಾಗಿದೆ. ಶೇ. ಸುಮಾರು 89ರಷ್ಟು ಇಳಿಕೆ ಆಗಿದೆ. ಪ್ರಯಾಣಿಕ ಮತ್ತು ಸರಕು ಸಾಗಣೆ ಕಾರ್ಯಾಚರಣೆಗಳು ಗಮನಾರ್ಹವಾಗಿ ಹೆಚ್ಚಿವೆ. ಅಪಘಾತ ಪ್ರಮಾಣ ಕಡಿಮೆ ಆಗಿದೆ. ರೈಲ್ವೆ ಜಾಲ ಶೇಕಡಾ 91 ರಷ್ಟು ಸುಧಾರಣೆಯಾಗಿದೆ.
Tour Package: ರಾಯರ ಭಕ್ತರಿಗೆ ಶುಭ ಸುದ್ದಿ, ಬೆಂಗಳೂರು-ಮಂತ್ರಾಲಯ ಟೂರ್ ಪ್ಯಾಕೇಜ್, ಬುಕಿಂಗ್ ಹೇಗೆ?
ಪ್ರಯಾಣಿಕರು, ಸರಕು ಸಾಗಣೆ, ಉಪನಗರ ಮತ್ತು ಎಕ್ಸ್‌ಪ್ರೆಸ್ ಸೇವೆಗಳು ಒಂದೇ ಕಾರಿಡಾರ್ ಗಳನ್ನು ಹಂಚಿಕೊಳ್ಳುವ ವಿಶ್ವದ ಅತ್ಯಂತ ಪ್ರಮುಖ ರೈಲ್ವೆ ಜಾಲ ಭಾರತ ಹೊಂದಿದೆ. ರೈಲ್ವೆ ಕೈಗೊಂಡ ಮಹತ್ವದ ಕ್ರಮಗಳಿಂದಾಗಿ ರೈಲುಗಳ ಸಂಖ್ಯೆ, ಪ್ರಯಾಣಿಕರ ಸಂಖ್ಯೆ ಏರಿಕೆ ಆಗಿದೆ ಎಂದು ಸಚಿವರು ವಿವರಿಸಿದ್ದಾರೆ.
ಯುರೋಪಿಯನ್ ಒಕ್ಕೂಟದಲ್ಲಿ ಪರಿಗಣಿಸಿರುವ ಅಂಕಿ ಅಂಶದ ಪ್ರಕಾರ, ರೈಲು ಪ್ರಯಾಣಿಕರ ಸಾವಿನ ಅಪಾಯವನ್ನು ಪ್ರತಿ ಬಿಲಿಯನ್ ಪ್ರಯಾಣಿಕರ ಕಿಲೋಮೀಟರ್‌ಗೆ ಸುಮಾರು 0.09 ಸಾವು ಎಂದು ಪರಿಗಣಿಸಲಾಗಿದೆ. ರೈಲು ಪ್ರಯಾಣ ರಸ್ತೆ ಸಾರಿಗೆಗಿಂತ ಸುರಕ್ಷಿತವಾಗಿದೆ ಎಂದು ಅವರು ಗಮನಸೆಳೆದರು. ಅಪಘಾತ ಸೂಚ್ಯಂಕವು ದರದಲ್ಲಿ ಇಳಿಕೆ ಆಗಿದೆ.
ಅಪ್‌ಗ್ರೇಡ್ ಆದ ರೈಲ್ವೆ ಇಲಾಖೆ
60 ಕೆಜಿ ತೂಕದ ಹಳಿಗಳ ಬಳಕೆ ಹೆಚ್ಚಿಸಲಾಗಿದೆ. ಉದ್ದವಾದ ಬೆಸುಗೆ ಹಾಕಿದ ಫಲಕಗಳು ಮತ್ತು ಸುಧಾರಿತ, ದೋಷ ಪತ್ತೆ ವ್ಯವಸ್ಥೆಗಳು ಹಳಿತಪ್ಪುವ ಅಪಾಯವನ್ನು ಕಡಿಮೆ ಮಾಡಿವೆ. ಕವಚ ತಂತ್ರಜ್ಞಾನವನ್ನು ಇಂಜಿನ್‌ಗಳಲ್ಲಿ ಅಳವಡಿಸಲಾಗುತ್ತಿದೆ. ರೈಲ್ವೆ ದ್ವಿಪಥ ಇನ್ನಿತರ ಉಪಕ್ರಮಗಳು ಜಾರಿಯಲ್ಲಿವೆ ಎಂದರು.
ಮಂಜು, ಹಿಮಪಾತದ ಪ್ರದೇಶಗಳಲ್ಲಿ ಕಡಿಮೆ ಗೋಚರತೆ ಇದ್ದರೂ ಸಹ 30,000 ಜಿಪಿಎಸ್ ಆಧಾರಿತ ಮಂಜು ಸುರಕ್ಷತಾ ಸಾಧನಗಳ ಅಳವಡಿಕೆಯಿಂದ ಡಿಜಿಟಲ್ ಮೇಲ್ವಿಚಾರಣೆ ಮತ್ತು ವಿಶ್ವಾಸಾರ್ಹ ಕಾರ್ಯಾಚರಣೆ ಮಾಡಲಾಗುತ್ತಿದೆ. ಪ್ರಯಾಣಿಕರಿಗೆ ಸುರಕ್ಷಿತೆಗೆ ಆದ್ಯತೆ ನೀಡಿ ಸಾರ್ವಜನಿಕ ವಿಶ್ವಾಸ ಗಳಿಸಿದೆ. ಕಳೆದೊಂದು ದಶಕಕ್ಕೆ ಹೋಲಿಸಿದರೆ ರೈಲ್ವೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಆಗಿವೆ.
ಹಣಕಾಸು ಒದಗಿಸುವಲ್ಲಿ ಬದ್ಧತೆ, ದೇಶಿಯ ಬೋಗಿ ಉತ್ಪಾದನೆ
ದಶಕದಲ್ಲಿ ರೈಲ್ವೆ ಸುರಕ್ಷತಾ ಜಾಲವಾಗಿ ಬದಲಾಗಲು ಅಭೂತಪೂರ್ವ ಪ್ರಮಾಣದಲ್ಲಿ ಹಣಕಾಸಿನ ನೆರವು ಒದಗಿಸಲಾಗಿದೆ. ಅಪಘಾತ ಪ್ರಮಾಣ ಇಳಿಕೆ ಆಗಿದೆ. ಸುರಕ್ಷತೆ ಹೆಚ್ಚಿಸಲು 2013-14ರಲ್ಲಿ ಬಳಕೆ ಮಾಡುತ್ತಿದ್ದ ವೆಚ್ಚ (ಅನುದಾನ) 39,200 ಕೋಟಿ ರೂ. ಇತ್ತು. ಅದೀಗ 2025-26ರಲ್ಲಿ ಬರೋಬ್ಬರಿ 1,17,693 ಕೋಟಿ ರೂಪಾಯಿಗೆ, ಮುಂದಿನ ಆರ್ಥಿಕ ವರ್ಷಕ್ಕೆ 2026-27ರಲ್ಲಿ 1,20,389 ಕೋಟಿ ರೂ.ಗೆ ಹೆಚ್ಚಾಗಿದೆ ಎಂದು ಮಾಹಿತಿ ನೀಡಿದರು.
ಭಾರತೀಯ ರೈಲ್ವೆ 42,600 ಕ್ಕೂ ಹೆಚ್ಚು ಎಲ್.ಎಚ್.ಬಿ. ಕೋಚ್‌ಗಳನ್ನು ಉತ್ಪಾದಿಸಿಸುತ್ತಿದೆ. 1,674 ಲೋಕೋಮೋಟಿವ್‌ಗಳನ್ನು ಉತ್ಪಾದಿಸುವ ಮೂಲಕ ತನ್ನ 'ಮೇಕ್ ಇನ್ ಇಂಡಿಯಾ' ಉಪ್ರಕಮಕ್ಕೆ ಪೂರಕವಾದ ಕ್ರಮ ಕೈಗೊಂಡಿದೆ. ಈಗಾಗಲೇ 6,677 ಎಲ್.ಎಚ್.ಬಿ. ಕೋಚ್‌ಗಳನ್ನು ತಯಾರಿಸಲಾಗಿದೆ.













Click it and Unblock the Notifications