ಹೆಚ್ಚಿದ ಬೇಡಿಕೆ! ಜೂನ್‌ನಲ್ಲಿ 660 ಹೆಚ್ಚುವರಿ ರೈಲುಗಳ ಸಂಚಾರ

ನವದೆಹಲಿ, ಜೂನ್ 20: ದೇಶದೆಲ್ಲೆಡೆ ಕೊರೊನಾ ಸೋಂಕು ತಗ್ಗುತ್ತಿರುವ ನಡುವೆಯೇ, ಭಾರತೀಯ ರೈಲ್ವೆಯು ಸಾರ್ವಜನಿಕರಿಗೆ ಪ್ರಯಾಣಿಕ ಸೌಲಭ್ಯ ಒದಗಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ದೇಶದ ವಿವಿಧ ಭಾಗಗಳಿಗೆ ಹೆಚ್ಚಿನ ಸಂಖ್ಯೆಯ ವಿಶೇಷ ರೈಲುಗಳನ್ನು ಓಡಿಸಲು ಕ್ರಮ ಕೈಗೊಳ್ಳುತ್ತಿದೆ. ವಲಸೆ ಕಾರ್ಮಿಕರು ಮತ್ತು ರೈಲು ಪ್ರಯಾಣಕ್ಕೆ ಕಾಯುತ್ತಿರುವವರ ಪಟ್ಟಿ ಏರಿಕೆ ಕಾಣುತ್ತಿರುವುದರಿಂದ, ಭಾರತೀಯ ರೈಲ್ವೆಯು ರೈಲುಗಳ ಸಂಚಾರ ಸಂಖ್ಯೆಯನ್ನು ಹೆಚ್ಚಿಸುತ್ತಿದೆ.

ಕೋವಿಡ್-19 2ನೇ ಅಲೆ ಕಾಣಿಸಿಕೊಳ್ಳುವ ಮುನ್ನ ದೇಶಾದ್ಯಂತ ದಿನನಿತ್ಯ ಸರಾಸರಿ 1768 ಮೇಲ್/ಎಕ್ಸ್‌ಪ್ರೆಸ್ ರೈಲುಗಳು ಸಂಚರಿಸುತ್ತಿದ್ದವು. ಜೂನ್ 18ಕ್ಕೆ ಅನ್ವಯವಾಗುವಂತೆ, ದಿನನಿತ್ಯ ಸುಮಾರು 983 ಮೇಲ್/ಎಕ್ಸ್‌ಪ್ರೆಸ್ ರೈಲುಗಳು ಕಾರ್ಯಾಚರಣೆ ನಡೆಸುತ್ತಿವೆ. ಕೋವಿಡ್-ಪೂರ್ವದ ಮಟ್ಟಕ್ಕೆ ಹೋಲಿಸಿದರೆ ಶೇಕಡ 56ರಷ್ಟು ಪ್ರಮಾಣ ಇದಾಗಿದೆ. ಆದರೆ ಇದೀಗ ಬೇಡಿಕೆಗೆ ಅನುಗುಣವಾಗಿ ರೈಲುಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲಾಗುತ್ತಿದೆ.

01.06.2021ಕ್ಕೆ ಅನ್ವಯವಾಗುವಂತೆ, ಸುಮಾರು 800 ಮೇಲ್/ಎಕ್ಸ್‌ಪ್ರೆಸ್ ರೈಲುಗಳು ಕಾರ್ಯಾಚರಣೆಯಲ್ಲಿವೆ. 01.06.2021ರಿಂದ 18.06.2021ರ ವರೆಗೆ ಹೆಚ್ಚುವರಿ 660 ಮೇಲ್/ಎಕ್ಸ್‌ಪ್ರೆಸ್ ರೈಲುಗಳ ಕಾರ್ಯಾಚರಣೆಗೆ ಅನುಮೋದನೆ ನೀಡಲಾಗಿದೆ.

Indian Railways approves 660 more trains in June 2021

ಸ್ಥಳೀಯ ಪರಿಸ್ಥಿತಿ, ಟಿಕೆಟ್‌ಗಳ ಬೇಡಿಕೆ ಮತ್ತು ಈ ಪ್ರದೇಶದಲ್ಲಿನ ಕೋವಿಡ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ರೈಲುಗಳನ್ನು ಶ್ರೇಣೀಕೃತ ರೀತಿಯಲ್ಲಿ ಮರುಸ್ಥಾಪಿಸಲು ವಲಯ ರೈಲ್ವೆಗೆ ಸೂಚಿಸಲಾಗಿದೆ ಎಂಬುದು ಗಮನಾರ್ಹ ವಿಷಯವಾಗಿದೆ. ವಲಯವಾರು ರೈಲುಗಳ ವಿವರ ಇಲ್ಲಿದೆ..

ಜೂನ್‌ನಲ್ಲಿ ಹೆಚ್ಚುವರಿ ರೈಲುಗಳ ಸಂಚಾರ
ಕ್ರಮ ಸಂಖ್ಯೆ ರೈಲ್ವೆ ಮೇಲ್/ ಎಕ್ಸ್‌ಪ್ರೆಸ್ ರೈಲು ರಜೆ, ವಿಶೇಷ ರೈಲು ಒಟ್ಟು
01 ಕೇಂದ್ರೀಯ ರೈಲ್ವೆ 24 2 26
02 ಕೇಂದ್ರೀಯ ರೈಲ್ವೆ 10 8 18
03 ಕೆ.ಎಸ್.ಈಶ್ವರಪ್ಪ ಪೂರ್ವ ರೈಲ್ವೆ 64 4 68
04 ಉತ್ತರ ಕೇಂದ್ರೀಯ ರೈಲ್ವೆ 16 0 16
05 ಈಶಾನ್ಯ ರೈಲ್ವೆ 32 6 38
06 ಈಶಾನ್ಯ ಪ್ರಾಂತೀಯ ರೈಲ್ವೆ 28 0 28
07 ಉತ್ತರ ರೈಲ್ವೆ 158 0 158
08 ವಾಯುವ್ಯ ರೈಲ್ವೆ 32 2 34
09 ದಕ್ಷಿಣ ಕೇಂದ್ರೀಯ ರೈಲ್ವೆ 20 64 84
10 ಆಗ್ನೇಯ ಕೇಂದ್ರೀಯ ರೈಲ್ವೆ 16 0 16
11 ಆಗ್ನೇಯ ರೈಲ್ವೆ 44 16 60
12 ದಕ್ಷಿಣ ರೈಲ್ವೆ 66 4 70
13 ಪಶ್ಚಿಮ ಕೇಂದ್ರೀಯ ರೈಲ್ವೆ 28 0 28
14 ಪಶ್ಚಿಮ ರೈಲ್ವೆ 14 2 16
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+