Vande Bharat Sleeper Rail: ವಂದೇ ಭಾರತ್ ಸ್ಲೀಪರ್ ರೈಲು ಉತ್ಪಾದನೆ, ಪೂರೈಕೆ ಅಪ್ಡೇಟ್

ನವದೆಹಲಿ, ಫೆಬ್ರವರಿ 13: ಭಾರತೀಯ ರೈಲ್ವೆ ಇಲಾಖೆಯಡಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಮೂಡಿಸಿದ ಭರವಸೆ, ಹೆಚ್ಚಿಸಿದ ಸುರಕ್ಷತೆ ಹಿನ್ನೆಲೆಯಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಪರಿಚಯಿಸಲಾಗುತ್ತಿದೆ. ಇದೀಗ ದೈತ್ಯ ಕಂಪನಿ ಜೊತೆಗೆ ಮಹತ್ವದ ಒಪ್ಪಂದ ನಡೆದಿದೆ. ಇದು ಭಾರತದ ಮೇಕ್-ಇನ್-ಇಂಡಿಯಾ ದೃಷ್ಟಿಕೋನ ಬೆಂಬಲಿಸುತ್ತದೆ. ಅಗತ್ಯ ಸಾರಿಗೆ ಮೂಲಸೌಕರ್ಯ, ತಯಾರಿಕೆ, ಪೂರೈಕೆ ಸೇವೆ ನೀಡುವ ಉದ್ದೇಶ ಈ ಒಪ್ಪಂದ ಹೊಂದಿದೆ.

ಕೇಂದ್ರ ಸರ್ಕಾರ ಸ್ಮಾರ್ಟ್ ಹಾಗೂ ಸುಸ್ಥಿರ ಚಲನಶೀಲತೆಯಲ್ಲಿ ಜಾಗತಿಕ ನಾಯಕ ಸಂಸ್ಥೆ ರೈಲು ತಯಾರಿಕಾ ಕಂಪನಿ 'ಆಲ್‌ಸ್ಟೊಮ್' (Alstom Railway Company) ಜೊತೆಗೆ ರೂ. 1285 ಕೋಟಿ (€144 ಮಿಲಿಯನ್) ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದ ಉದ್ದೇಶಿತ 17 ವಂದೇ ಭಾರತ್ ಸ್ಲೀಪರ್ ರೈಲು ಸೆಟ್‌ಗಳಿಗೆ ಟ್ರಾಕ್ಷನ್ ಘಟಕ ಹಾಗೂ ನಿರ್ವಹಣಾ ಸೇವೆ ಪೂರೈಕೆ ಮಾಡಲಾಗುತ್ತದೆ. ವಂದೇ ಭಾರತ್ ಸ್ಲೀಪರ್ ರೈಲು ಸಾರಿಗೆಯ ಭವಿಷ್ಯದಲ್ಲಿ ಈ ಒಪ್ಪಂದ ಮಹತ್ವ ಪಾತ್ರ ನಿರ್ವಹಿಸುತ್ತದೆ.

Indian Railway Agreement With Alstom Company for supply traction components and maintenance services

ದೇಶಿಯವಾಗಿ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬಹುನಿರೀಕ್ಷೆ ಭಾರತದ ಮೇಕ್-ಇನ್-ಇಂಡಿಯಾ ಮತ್ತು ಆತ್ಮನಿರ್ಭರ್ ಭಾರತ್ ಉಪಕ್ರಮಕ್ಕೆ ಪೂರಕವಾಗಿದೆ. ಈ ಒಪ್ಪಂದಡಿ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿರುವ ಭಾರತೀಯ ರೈಲ್ವೆಯ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ಗೆ ಮಿಟ್ರಾಕ್ ಟ್ರಾಕ್ಷನ್ ಘಟಕಗಳು ಮತ್ತು ವಿದ್ಯುತ್ ಉಪಕರಣಗಳ ಪೂರೈಸಲಿದೆ.

ಈಗಾಗಲೇ ಬೆಂಗಳೂರಿನ ಬಿಎಚ್‌ಇಎಲ್ ಸ್ಲೀಪರ್ ರೈಲು ತಯಾರಿಕೆಯಲ್ಲಿ ತೊಡಗಿದೆ. ಈ ಒಪ್ಪಂದದಡಿ ಬೆಂಗಳೂರು, ಸಾವ್ಲಿ, ಕೊಯಮತ್ತೂರು ಹಾಗೂ ಮನೆಜಾ ಸೇರಿದಂತೆ ಆಲ್‌ಸ್ಟೊಮ್‌ನ ವಿವಿಧ ಹಾಲಿ ಘಟಕಗಳಲ್ಲಿ ಪೂರೈಕೆ ಆಗುವ ಸಲಕರಣೆಗಳು ತಯಾರಾಗಲಿವೆ.

ವಂದೇ ಭಾರತ್ ಸ್ಲೀಪರ್ ರೈಲು ಪ್ರತಿ ಗಂಟೆಗೆ ಗರಿಷ್ಠ 180 ಕಿಲೋ ಮೀಟರ್ ವೇಗದಲ್ಲಿ ಚಲಿಸುವಂತೆ ತಯಾರಿಸಲಾಗುತ್ತಿದೆ. ಒಟ್ಟು 24 ಕೋಚ್‌ಗಳು ಇರುವ ಒಂದು ರೈಲು ಸೆಟ್ ಆಗಿರಲಿದ್ದು, ಪ್ರಪಂಚದಲ್ಲೇ ಅತ್ಯಾಧುನಿಕ ತಂತ್ರಜ್ಞಾನ, ಫೀಚರ್ ಹೊಂದಿದ ರೈಲುಗಳಾಗಿರಲಿವೆ ಎಂದು ರೈಲ್ವೆ ಇಲಾಖೆ ಮೂಲಗಳು ಮಾಹಿತಿ ನೀಡಿವೆ.

ಒಪ್ಪಂದ ಬಳಿಕವೂ 05 ವರ್ಷ ಕಂಪನಿ ನಿರ್ವಹಣೆ

ಒಪ್ಪಂದ ಬಳಿಕ ಭಾರತೀಯ ರೈಲ್ವೆ ಜೊತೆಗಿನ ಪಾಲುದಾರಿಕೆ ಬಗ್ಗೆ ಹರ್ಷ ವ್ಯಕ್ತಪಡಿಸಿ 'ಆಲ್ಸ್ಟೋಮ್' ಕಂಪನಿ ವ್ಯವಸ್ಥಾಪಕ ನಿರ್ದೇಶಕ ಆಲಿವಿಯರ್ ಲೂಯಿಸನ್ ಮಾತನಾಡಿದರು. ಇಲಾಖೆ ವ್ಯಾಪ್ತಿಯಲ್ಲಿ ಆಧುನಿಕ ತಂತ್ರಜ್ಞಾನ ಸಹಿತ ಸಾರಿಗೆ ಸೇವೆಯನ್ನು ಈ ವಂದೇ ಭಾರತ್ ರೈಲುಗಳು ಪ್ರತಿನಿಧಿಸುತ್ತವೆ. ಈ ಒಪ್ಪಂದವು ತನ್ನ ಮಾನ್ಯತೆ ಮುಗಿದ ಬಳಿಕವೂ 05 ವರ್ಷದ ನಿರ್ವಹಣೆ ಮಾಡಲಿದೆ. ನಾವು ಬಹುಕಾಲದವರೆಗೆ ಸುರಕ್ಷತೆ, ವಿಶ್ವಾಸಾರ್ಹತೆ ಹೊಂದಿದೆ ಎಂದು ಅವರು ತಿಳಿಸಿದರು.

ಆಗಸ್ಟ್ 2026ರ ಹೊತ್ತಿಗೆ ಮೂಲ ಮಾದಿರ ರೈಲು ಪೂರೈಕೆ ಆಗುವ ಸಾಧ್ಯತೆ ಇದೆ. 2027 ರಲ್ಲಿ ವಂದೇ ಭಾರತ್ ಸರಣಿ ರೈಲು, ಸಲಕರಣೆಗಳ ಸರಣಿ ಉತ್ಪಾದನೆ ಆರಂಭವಾಗುತ್ತದೆ. ಆಲ್ಸ್ಟೋಮ್‌ನ ಸ್ಥಳೀಯವಾಗಿ ಉತ್ಪಾದನೆ ಹೆಚ್ಚಿಸಲು, ಸಕಾಲಕ್ಕೆ ಪೂರೈಕೆ ಮಾಡಲು ಬದ್ಧತೆ ಹೊಂದಿದೆ. ಹೀಗಾಗಿ ಭವಿಷ್ಯದಲ್ಲಿ ರೈಲ್ವೆಯು ಪರಿಣಾಮಕಾರಿ ಸಾರಿಗೆಯಾಗಿ ಬದಲಾಗಲಿದೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+