• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಯೋತ್ಪಾದನೆ ನಿಗ್ರಹಕ್ಕೆ ಭಾರತದ ನೀತಿ ತೃಪ್ತಿಕರವಾಗಿಲ್ಲ

By Vicky Nanjappa
|

ಮುಂಬಯಿಯಲ್ಲಿ 2008ರ ನವೆಂಬರ್ 26ರಂದು ನಡೆದ ಉಗ್ರರ ದಾಳಿ ಇಡೀ ದೇಶದಲ್ಲಿ ಭಯ ಹುಟ್ಟಿಸಿತ್ತು. ಈ ಘಟನೆ ಕುರಿತು ನಂತರ ಸಾಕಷ್ಟು ಪುಸ್ತಕಗಳು ಹೊರಬಂದಿವೆ. ಆದರೆ, ದಾಳಿ ಕುರಿತು ತಂತ್ರ ರೂಪಿಸುವುದರಿಂದ ಆರಂಭಿಸಿ ಶಿಕ್ಷೆ ವಿಧಿಸುವವರೆಗೆ ಸಮಗ್ರ ವಿವರ ನೀಡುತ್ತಿರುವುದು 'ಫ್ರಾಜಿಯಲ್ ಫ್ರಂಟಿಯರ್: ದಿ ಸೀಕ್ರೆಟ್ ಹಿಸ್ಟರಿ ಆಫ್ ಮುಂಬಯಿ ಟೆರರ್ ಅಟಾಕ್' ಎಂಬ ಪುಸ್ತಕ.

ದೆಹಲಿ ವಿಶ್ವವಿದ್ಯಾಲಯದ ಶ್ರೀ ಅರೋಬಿಂಡೊ (ರಾತ್ರಿ) ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಸರೋಜ್ ಕುಮಾರ್ ರಥ್ ಈ ಪುಸ್ತಕದ ಲೇಖಕ. ಪ್ರಕರಣ ನಡೆದ ನಂತರ ಕೂಡ ಭಾರತದ ಯಾವ ಪಕ್ಷವೂ ತನಿಖೆಯಲ್ಲಿ ಉತ್ಸಾಹ ತೋರಿಸಿಲ್ಲ ಎಂದು ರಥ್ ಅವರು ಒನ್ಇಂಡಿಯಾ ವೆಬ್ ಸೈಟ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಆರೋಪಿಸಿದ್ದಾರೆ. ತನಿಖೆಯಲ್ಲಿ ರಾಜಕೀಯ ಪಕ್ಷಗಳ ಇಚ್ಛಾಶಕ್ತಿ ಕೊರತೆ, ಸಾಜಿದ್ ಮಿರ್‌ನ ರಹಸ್ಯ ಹಾಗೂ ನರೇಂದ್ರ ಮೋದಿ ಆಸಕ್ತಿ ತೋರಿದಾಗ ಮಹಾರಾಷ್ಟ್ರ ಸರ್ಕಾರ ನಿಂದಿಸಿದ ಘಟನೆಗಳನ್ನು ವಿವರಿಸಿದ್ದಾರೆ. [ಕಸಬ್ ಹಿಡಿದ ಓಂಬಳೆ ಸಾಹಸ ಸ್ಮರಣೀಯ]

ಮುಂಬಯಿಯಲ್ಲಿ 26/11 ರಂದು ದಾಳಿ ನಡೆದು ಇಂದಿಗೆ ಆರು ವರ್ಷ. ಈ ನಂತರ ಯುದ್ಧ ಹಾಗೂ ಭಯೋತ್ಪಾದನೆ ಕುರಿತು ನಮ್ಮ ದೇಶ ಭಿನ್ನ ನೀತಿ ತಾಳಿದೆಯೇ?

ಆಡಳಿತದ ರೀತಿ-ನೀತಿಗಳಲ್ಲಿ ಮೂಲಭೂತವಾಗಿ ಯಾವುದೇ ಬದಲಾವಣೆಯಾಗಿಲ್ಲ. ರಾಜ್ಯ ಪೊಲೀಸರಿಗೆ ಭಯೋತ್ಪಾದಕ ದಾಳಿಗಳಿಂದ ರಕ್ಷಣೆ ನೀಡುವ ಸಾಮರ್ಥ್ಯವೂ ಇಲ್ಲ, ಈ ಕುರಿತು ತರಬೇತಿಯನ್ನೂ ನೀಡಲಾಗಿಲ್ಲ. ಸ್ಫೋಟ ಸಂಭವಿಸಿದಾಗ ಕೇಂದ್ರೀಯ ರಕ್ಷಣಾ ಪಡೆಗಳನ್ನು ರಾಜ್ಯಕ್ಕೆ ಕಳುಹಿಸುವಂತೆ ಕೋರಲಾಗುತ್ತಿದೆ ಅಷ್ಟೇ.

ಕೇಂದ್ರ ಗೃಹ ಸಚಿವಾಲಯ ನೀಡಿದ ಅಂಕಿ ಅಂಶಗಳೇ ಹೇಳುವಂತೆ ನಮ್ಮ ದೇಶದಲ್ಲಿ 2009ರಿಂದ ಇಲ್ಲಿಯವರೆಗೆ ನಡೆದಿರುವ ಭಯೋತ್ಪಾದಕ ದಾಳಿಗಳಿಗೆ 1,171 ಜೀವಗಳು ಬಲಿಯಾಗಿವೆ. 734 ಉಗ್ರರನ್ನೂ ಸದೆಬಡಿಯಲಾಗಿದೆ. ಭಾರತದಲ್ಲಿ ಇಂದಿಗೂ ನೂರಾರು ಉಗ್ರರು ರಕ್ಷಣಾ ವ್ಯವಸ್ಥೆಯ ಮೂಗಿನಡಿಯಲ್ಲಿಯೇ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದಕ್ಕೆ ಬರ್ಧ್ವಾನ್ ಸ್ಫೋಟವು ಒಂದು ಉದಾಹರಣೆಯಷ್ಟೇ.

ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸಲು ನಮ್ಮ ಪೊಲೀಸ್ ಹಾಗೂ ನ್ಯಾಯಾಂಗ ವ್ಯವಸ್ಥೆಯ ಪಾತ್ರ ಹಾಗೂ ದಕ್ಷತೆ ಕುರಿತು ಪುನರ್ ವಿಮರ್ಶೆ ನಡೆಸಬೇಕಾಗಿದೆ.

ಲಷ್ಕರ್ ಇ ತಯ್ಬಾ ಇಂದಿಗೂ ಅಪಾಯಕಾರಿ ಸಂಘಟನೆಯೇ?

ಹೌದು, ಲಷ್ಕರ್ ಇ ತಯ್ಬಾ ಭಾರತಕ್ಕೆ ಮಾರಕವಾಗಿ ಬೆಳೆದುನಿಂತಿದೆ. ಅಫ್ಘಾನಿಸ್ತಾನದಲ್ಲೂ ಸಕ್ರಿಯವಾಗಿದ್ದು, ಹಕ್ಕಾನಿ ನೆಟ್‌ವರ್ಕ್ ಜೊತೆಗೆ ಹಾಗೂ ಭಾರತದಲ್ಲಿ ಇಂಡಿಯನ್ ಮುಜಾಹಿದೀನ್ ಹಾಗೂ ವಹಾಬಿ ಉಗ್ರರ ಜತೆಗೆ ಸೇರಿಕೊಂಡಿದೆ. [ಸಾವಿನಲ್ಲೂ ಸಾರ್ಥಕತೆ ಮೆರೆದ ಹುತಾತ್ಮನ ಪತ್ನಿ]

ಲಷ್ಕರ್ ಮುಖಂಡ ಹಫೀಜ್ ಸಯೀದ್ ಇಂದು ಪಾಕಿಸ್ತಾನದ ಸೈನ್ಯದೊಂದಿಗೆ ಸೇರಿ ಭಾರತದ ವಿರುದ್ಧ ಸಂಚು ರೂಪಿಸುತ್ತಿದ್ದಾನೆ. ಪಾಕಿಸ್ತಾನದಲ್ಲಿ ಲಷ್ಕರ್ ಮೇಲಿನ ನಿಷೇಧವನ್ನು ಬಹಳ ಹಿಂದೆಯೇ ತೆಗೆದುಹಾಕಲಾಗಿದೆ. ಅಲ್ಲದೆ, ನವಾಜ್ ಶರೀಫ್ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರ ಸರ್ತಾಜ್ ಅಜೀಜ್ ಕೂಡ ಸಂಘಟನೆಗೆ ಪಾಕಿಸ್ತಾನದಿಂದ ಯಾವುದೇ ಅಪಾಯವಿಲ್ಲ ಎಂದು ಭರವಸೆ ನೀಡಿದ್ದಾರೆ.

ಭಾರತದಲ್ಲಿ ಅಲ್ ಖೈದಾ ಶಾಖೆ ತೆರೆಯುತ್ತಿರುವುದು ಹಾಗೂ ಐಎಸ್ಐಎಸ್ ಶಕ್ತಿಯುತಗೊಂಡಿದ್ದು ಭಾರತಕ್ಕೆ ಅಪಾಯ ತರಬಲ್ಲದೇ?

ನಮ್ಮ ರಕ್ಷಣಾ ಪಡೆಗಳು ಅಲ್ ಖೈದಾ ಅಸ್ತಿತ್ವದ ಕುರಿತು ಸಾಕ್ಷಿಯನ್ನು ಹುಡುಕುತ್ತಿದೆ. ಸಾಕ್ಷಿ ಯಾವತ್ತೂ ದೊರೆಯುವುದಿಲ್ಲ. 'ತೆಹ್ರೀಕ್ ಇ ತಾಲಿಬಾನ್ ಪಾಕಿಸ್ತಾನ್' (ಟಿಟಿಪಿ) ಸಂಘಟನೆ ಅಲ್ ಖೈದಾ ಪರವಾಗಿ ಪಾಕಿಸ್ತಾನದಲ್ಲಿ ಕೆಲಸ ಮಾಡುತ್ತಿದೆ. ಹಕ್ಕಾನಿ ನೆಟ್‌ವರ್ಕ್ ಟಿಟಿಪಿ ಮತ್ತು ಅಲ್ ಖೈದಾ ಸಂಘಟನೆಗಳು ಪರಸ್ಪರ ಸಹಕರಿಸುತ್ತವೆ. ಬರ್ಧ್ವಾನ್ ಸ್ಫೋಟದಲ್ಲಿ ಟಿಟಿಪಿ ಪಾತ್ರವನ್ನು ಎನ್ಐಎ ಈಗಾಗಲೇ ನಿರೂಪಿಸಿದೆ. ಆದ್ದರಿಂದ ಭಾರತದಲ್ಲಿ ಅಲ್ ಖೈದಾ ಹೆಜ್ಜೆಯನ್ನು ಅಲ್ಲಗಳೆಯುವಂತಿಲ್ಲ.

ಐಎಸ್ಐಎಸ್ ಭಾರತಕ್ಕೆ ಹೊಸತಾಗಿ ಕಾಲಿಟ್ಟಿದ್ದರೂ ಇಲ್ಲಿಯ ವಾತಾವರಣ ಅದಕ್ಕೆ ಪೂರಕವಾಗಿಲ್ಲ. ಆದ್ದರಿಂದ ಉಗ್ರರನ್ನು ಸೆಳೆಯಲು ಅಲ್ ಖೈದಾದೊಂದಿಗೆ ಸ್ಪರ್ಧೆ ಆರಂಭಿಸಿದೆ.

ಅಫ್ಘಾನಿಸ್ತಾನದಲ್ಲಿ ಅಮೆರಿಕ ಸೇನೆ ಕಾರ್ಯಾಚರಣೆಯನ್ನು ಅಧ್ಯಕ್ಷ ಒಬಾಮಾ 2015ರ ಅಂತ್ಯದವರೆಗೆ ವಿಸ್ತರಿಸಿದ್ದರೂ, ತಾಲಿಬಾನ್ ಬಲಗೊಳ್ಳುತ್ತಿದೆ. ಇಲ್ಲಿ ಅಲ್ ಖೈದಾ ನೆಮ್ಮಯಿಂದಿರುತ್ತದೆ. ಆದರೆ, ಭವಿಷ್ಯದಲ್ಲಿ ಅಲ್ ಖೈದಾ, ತಾಲಿಬಾನ್ ಹಾಗೂ ಐಎಸ್ಐಎಸ್ ಒಗ್ಗೂಡುವುದನ್ನು ಅಲ್ಲಗಳೆಯುವಂತಿಲ್ಲ. [ಡೇವಿಡ್ ಹೇಡ್ಲಿಗೆ 35 ವರ್ಷ ಶಿಕ್ಷೆ]

ಭಾರತದ 26/11 ದಾಳಿಯಲ್ಲಿ ಸಾಜಿದ್ ಮಿರ್ ಎಂಬಾತ ಪಾಲ್ಗೊಂಡಿದ್ದಾನೆ ಎನ್ನಲಾಗಿದೆ. ಆತನ ಕುರಿತು ಹೆಚ್ಚಿನ ವಿವರ ನಮಗೆ ತಿಳಿಸುತ್ತೀರಾ?

ಸಾಜಿದ್ ಮಿರ್‌ನಿಗೆ ಸಾಜಿದ್ ಮಜಿದ್ ಎಂದೂ ಹೆಸರಿದೆ. ಆತ ಲಷ್ಕರ್ ತಯ್ಬಾದ ಮುಖಂಡ. ಅನೇಕ ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದು, ಪದೇ ಪದೆ ವೇಷ ಬದಲಾಯಿಸುತ್ತಾನೆ. ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯ ನಡೆದಾಗಲೆಲ್ಲ ಭಾರತಕ್ಕೆ ಭೇಟಿ ನೀಡಿದ್ದಾನೆ. ಒಮ್ಮೆ ದುಬೈನಲ್ಲಿ ಬಂಧಿಸಲ್ಪಟ್ಟಿದ್ದರೂ ಪ್ರಭಾವ ಉಪಯೋಗಿಸಿ ಹೊರಬಂದಿದ್ದಾನೆ.

ಸಾಜಿದ್ ಮಿರ್ ಅಲ್ ಖೈದಾ ಹಾಗೂ ಲಷ್ಕರ್ ತೈಬಾ ಮಧ್ಯೆ ಕೊಂಡಿಯಂತೆ ಕೆಲಸ ಮಾಡುತ್ತಿದ್ದಾನೆ. ವಿವಿಧ ದೇಶಗಳಿಂದ ಯುವಕರನ್ನು ಪಾಕಿಸ್ತಾನದ ಲಷ್ಕರ್ ಕ್ಯಾಂಪ್‌ಗೆ ಕರೆತರುತ್ತಾನೆ. ಐಎಸ್ಐ ಮುಖ್ಯಸ್ಥ ಲೆ.ಜ. ಶುಜಾ ಪಾಷಾ ಅಡಿಯಾಲಾ ಜೈಲಿನಲ್ಲಿ ಜಾಕಿ ಉರ್ ರೆಹ್ಮಾನ್ ಎಂಬ ಉಗ್ರನನ್ನು ಭೇಟಿಯಾಗಿ ಮುಂಬಯಿ ದಾಳಿಯನ್ನು ಅಲ್ ಖೈದಾ ನಡೆಸಿದೆ ಎಂದು ಹೇಳಲು ಒತ್ತಡ ಹಾಕಿದ್ದ ಎಂದು ಹೇಡ್ಲಿಗೆ ತಿಳಿಸಿದ್ದೇ ಸಾಜಿದ್ ಮಿರ್. ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ 2010ರ ಜುಲೈ 21ರಂದು ಸಾಜಿದ್ ಮಿರ್‌ನಿಗೆ ಮುಂಬಯಿ ದಾಳಿಯಲ್ಲಿ ಭಾಗವಹಿಸಿದ ಆರೋಪದ ಮೇಲೆ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.

ಭಾರತದ ವಿರುದ್ಧ ದಾಳಿಗೆ ಸಂಚು ರೂಪಿಸುತ್ತಿರುವವರ ವಿರುದ್ಧ ಪಾಕಿಸ್ತಾನ ಅಗತ್ಯ ಕ್ರಮ ಕೈಗೊಳ್ಳುತ್ತಿದೆಯೇ?

ಪಾಕಿಸ್ತಾನ ಪ್ರಸ್ತುತ ಅಪಾಯಕಾರಿ ಸ್ಥಿತಿಯಲ್ಲಿದೆ. ಅಲ್ಲಿ ಪ್ರಜಾಪ್ರಭುತ್ವ ಸೈನ್ಯದ ಅಡಿಯಲ್ಲಿದೆ. ಸೈನ್ಯವು ಉಗ್ರ ನೀತಿ ಅನುಸರಿಸುತ್ತಿದೆ. ಐಎಸ್ಐ ತಾನು ಉಗ್ರರ ವಿರುದ್ಧ ಹೋರಾಡುತ್ತಿದ್ದೇನೆಂದು ಹೇಳಿಕೊಂಡಿದ್ದರೂ, ಹಫೀಜ್ ಸಯೀದ್, ಹಿಜ್ಬ್ ಉಲ್ ಮುಜಾಹಿದೀನ್ ಮುಖಂಡ ಸೈಯದ್ ಸಲಾಲುದ್ದೀನ್ ಸ್ವತಂತ್ರವಾಗಿ ಸಂಚರಿಸುತ್ತಿದ್ದಾರೆ.

ಅಮೆರಿಕದ ಮೇಲೆ ದಾಳಿ ನಡೆದ ನಂತರ ಕೈಗೊಂಡ ಕ್ರಮಗಳನ್ನು ಮುಂಬಯಿ ದಾಳಿ ನಂತರ ಭಾರತ ಕೈಗೊಂಡಿದೆ ಎನ್ನಿಸುತ್ತಿದೆಯೇ?

ಅಮೆರಿಕ ತನ್ನ ಮೇಲೆ ದಾಳಿಯಾದ ನಂತರ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಜಗತ್ತಿನಲ್ಲಿಯೇ ಹೊಸ ಯುಗ ಆರಂಭಿಸಿತು. ಆದರೆ, ಭಾರತ ಮುಂಬಯಿ ದಾಳಿಯ ನಂತರವೂ ಜಡತ್ವ ಮುಂದುವರಿಸಿತು. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತ ಹಾಗೂ ಅಮೆರಿಕದ ಪ್ರತಿಕ್ರಿಯೆಯನ್ನು ಹೋಲಿಸಲು ಸಾಧ್ಯವಿಲ್ಲ. ಭಯೋತ್ಪಾದನೆ ತಡೆಗೆ ಅಮೆರಿಕ ಸಾಧ್ಯವಾದ ಎಲ್ಲ ಕ್ರಮಗಳನ್ನೂ ಕೈಗೊಂಡಿದ್ದರೆ, ಭಾರತ ತೋರಿಕೆಯ ಬದಲಾವಣೆ ಮಾತ್ರ ಮಾಡಿತು. [ಅಮೆರಿಕಕ್ಕೆ ಇರುವ ಕಿಚ್ಚು ಭಾರತಕ್ಕೆ ಏಕಿಲ್ಲ?]

ಸ್ಥಳೀಯರು ಉಗ್ರರೊಂದಿಗೆ ಹೊಂದಿರುವ ಸಂಪರ್ಕವು ಹೊರಬರದಂತೆ ತಡೆಯಲು ಯಾವುದೇ ರಾಜಕೀಯ ಪಕ್ಷ ಯತ್ನಿಸಿದೆಯೇ?

ಈ ಕುರಿತು ಯಾವುದೇ ರಾಜಕೀಯ ಪಕ್ಷ ಆಸಕ್ತಿಯನ್ನೇ ತೋರಿಸಲಿಲ್ಲ. 2008ರ ನವೆಂಬರ್ 28ರ ದಾಳಿ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಮುಂಬಯಿಗೆ ಹೋದಾಗ ಸಿಕ್ಕಿದ್ದು ನಿಂದನೆ ಮಾತ್ರ. ಜನಾಭಿಪ್ರಾಯ ರಾಜಕೀಯ ವ್ಯಕ್ತಿಗಳ ಅಭಿಮತಕ್ಕೆ ವಿರುದ್ಧವಾಗಿತ್ತು.

ಮುಂಬಯಿ ದಾಳಿಯ ಆರೋಪಿಗಳನ್ನು ಭಾರತಕ್ಕೆ ಕರೆತರಲು ದೆಹಲಿಯಲ್ಲಿ ಬಂದಿರುವ ಹೊಸ ಸರ್ಕಾರಕ್ಕೆ ಸಾಧ್ಯವಾಗುವುದೇ?

ಮುಂಬಯಿ ದಾಳಿಕೋರರ ರಕ್ಷಣೆಯಲ್ಲಿ ಪಾಕಿಸ್ತಾನದಷ್ಟೇ ಅಮೆರಿಕದ ಪಾತ್ರವೂ ಇದೆ. ಇದಕ್ಕೆ ಮುಂಬಯಿ ದಾಳಿಯ ಪಾತ್ರಧಾರಿ ಡೇವಿಡ್ ಹೇಡ್ಲಿ ಅಮೆರಿಕ ಜೈಲಿನಲ್ಲಿ ಸುರಕ್ಷಿತವಾಗಿರುವುದೇ ಸಾಕ್ಷಿ.

ಪ್ರಧಾನಿ ನರೇಂದ್ರ ಮೋದಿ ಅವರು ಮೂರು ತಿಂಗಳಲ್ಲಿ ಮೂರು ಬಾರಿ ಅಮೆರಿಕ ಅಧ್ಯಕ್ಷ ಒಬಾಮಾ ಅವರನ್ನು ಭೇಟಿಯಾಗಿದ್ದರೂ ಡೇವಿಡ್ ಹೇಡ್ಲಿ ಕುರಿತು ಪ್ರಸ್ತಾಪಿಸಲಿಲ್ಲ. ಅಮೆರಿಕ ಜತೆ ನಾವು ಒಪ್ಪಂದ ಹೊಂದಿದ್ದರೂ ಅವರ ಮನವೊಲಿಸುವುದು ಸಾಧ್ಯವಾಗಿಲ್ಲ. ಪಾಕಿಸ್ತಾನದ ಮೇಲೆ ಬೌಗೋಳಿಕವಾಗಿ ಒತ್ತಡ ಹಾಕುವುದು ಸಾಧ್ಯವಿಲ್ಲ.

ಅಮೆರಿಕ ಹಾಗೂ ಇಸ್ರೇಲ್ ರಾಷ್ಟ್ರಗಳು ತಮಗೆ ಅಪಾಯ ಎನ್ನಿಸಿದ ಯಾರನ್ನೇ ಆದರೂ ಜಗತ್ತಿನ ಯಾವುದೇ ಮೂಲೆಗೆ ತನ್ನ ವಿಶೇಷ ದಳ ಹಾಗೂ ಮಾನವ ರಹಿತ ವಿಮಾನ ಕಳುಹಿಸಿ ಕೊಲ್ಲುತ್ತಿದ್ದಾರೆ. ಆದರೆ, ಉಗ್ರರನ್ನು ಮುಖಾಮುಖಿ ಎದುರಿಸುವ ಕ್ರಮದಿಂದ ಭಾರತ ಅತ್ಯಂತ ದೂರದಲ್ಲಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Saroj Kumar Rath an assistant professor of history at the Sri Aurobindo College (Eve), University of Delhi has written a book on Mumbai attack known as 26/11. He told to oneindia that Indian policy towards terrorism is not satisfactory even after Mumbai attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more