• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಿನಕ್ಕೆ 27 ಕೋಟಿ ದೇಣಿಗೆ: ಭಾರತದ ಟಾಪ್-10 ದಾನಿಗಳ ಪಟ್ಟಿ ಓದಿ!

|
Google Oneindia Kannada News

ನವದೆಹಲಿ, ಅಕ್ಟೋಬರ್ 29: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಸಾಕಷ್ಟು ದಾನಿಗಳು ಪರೋಪಕಾರಿ ಕಾರ್ಯಗಳಿಗೆ ತಮ್ಮದೇ ಆಗಿರುವ ಕೊಡುಗೆಯನ್ನು ನೀಡಿದ್ದಾರೆ. ಇಂಥವರ ಮಧ್ಯೆ ಉದಾರ ಮನಸ್ಸಿನಿಂದ ದಾನ ನೀಡಿದ 2021ನೇ ಸಾಲಿನ ಭಾರತದ ಟಾಪ್-10 ದಾನಿಗಳನ್ನು ಪಟ್ಟಿ ಮಾಡಲಾಗಿದೆ.

ಎಡೆಲ್ ಗಿವ್ ಹುರುನ್ ಇಂಡಿಯಾ ಪರೋಪಕಾರಿಗಳ ಪಟ್ಟಿ 2021ರ ಪ್ರಕಾರ, ವಿಪ್ರೋ ಸಂಸ್ಥಾಪಕ ಅಜೀಂ ಹಶ್ಮಿ ಪ್ರೇಮ್‌ಜಿ ಅವರನ್ನು ಅತ್ಯಂತ ಉದಾರವಾದ ಪರೋಪಕಾರಿ ಎಂದು ಗುರುತಿಸಲಾಗಿದ್ದು, ಪಟ್ಟಿಯಲ್ಲಿ ಅಗ್ರಸ್ಥಾನ ನೀಡಲಾಗಿದೆ.

ಕೋವಿಡ್-19 ನಿರ್ವಹಣೆಯಲ್ಲಿ ಕರ್ನಾಟಕ ಅತ್ಯುತ್ತಮ ಎನಿಸಲು ಏನು ಕಾರಣ? ಕೋವಿಡ್-19 ನಿರ್ವಹಣೆಯಲ್ಲಿ ಕರ್ನಾಟಕ ಅತ್ಯುತ್ತಮ ಎನಿಸಲು ಏನು ಕಾರಣ?

76 ವರ್ಷದ ಉದ್ಯಮಿ ಅಜೀಂ ಪ್ರೇಮ್ ಜೀ ಇದೇ ಆರ್ಥಿಕ ಸಾಲಿನಲ್ಲಿ ಒಟ್ಟು 9,713 ಕೋಟಿ ರೂಪಾಯಿ ಹಣವನ್ನು ದಾನವಾಗಿ ನೀಡಿದ್ದಾರೆ. ಅಂದರೆ ಪ್ರತಿನಿತ್ಯ 27 ಕೋಟಿ ರೂಪಾಯಿ ದಾನವನ್ನು ನೀಡಿದಂತೆ ಆಗುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹಾಗಿದ್ದರೆ ಅತಿಹೆಚ್ಚು ದಾನವನ್ನು ನೀಡಿರುವ ಭಾರತದ ಟಾಪ್-10 ಪರೋಪಕಾರಿಗಳು ಯಾರು ಎಂಬುದನ್ನು ಮುಂದೆ ಓದಿ.

ಭಾರತದ ಟಾಪ್-10 ದಾನಿಗಳ ಪಟ್ಟಿ:

* ಅಜೀಂ ಹಶ್ಮಿ ಪ್ರೇಮ್‌ಜಿ - 9,713 ಕೋಟಿ ರೂ

* ಶಿವ ನಾಡರ್, ಎಚ್‌ಸಿಎಲ್ ಟೆಕ್ನಾಲಜೀಸ್ - 1263 ಕೋಟಿ ರೂ

* ಮುಖೇಶ್ ಅಂಬಾನಿ, ರಿಲಾಯನ್ಸ್ ಇಂಡಸ್ಟ್ರೀಸ್ - 577 ಕೋಟಿ ರೂ

* ಕುಮಾರ್ ಮಂಗಳಂ ಬಿರ್ಲಾ, ಆದಿತ್ಯ ಬಿರ್ಲಾ ಗ್ರೂಪ್ - 377 ಕೋಟಿ ರೂ

* ನಂದನ್ ನಿಲೇಕಣಿ, ಇನ್ಫೋಸಿಸ್ - 183 ಕೋಟಿ ರೂ

* ಹಿಂದುಜಾ ಫ್ಯಾಮಿಲಿ, ಹಿಂದುಜಾ ಗ್ರೂಪ್ - 166 ಕೋಟಿ ರೂ

* ಬಜಾಜ್ ಕುಟುಂಬ, ಬಜಾಜ್ ಗ್ರೂಪ್ - 136 ಕೋಟಿ ರೂ

* ಗೌತಮ್ ಅದಾನಿ, ಅದಾನಿ ಸಮೂಹ - 130 ಕೋಟಿ ರೂ

* ಅನಿಲ್ ಅಗರ್ವಾಲ್, ವೇದಾಂತ - 130 ಕೋಟಿ ರೂ

* ಬರ್ಮನ್ ಕುಟುಂಬ, ಡಾಬರ್ ಇಂಡಿಯಾ - 114 ಕೋಟಿ ರೂ

ದಾನಿಗಳ ಪಟ್ಟಿಗೆ ಸೇರಿದ ಬಿಗ್ ಬಿ:

ಭಾರತೀಯ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಕೂಡಾ ದೇಶದ ಅಗ್ರಮಾನ್ಯ ದಾನಿಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಸಿನಿಮಾ ರಂಗದ ಶ್ರೇಷ್ಠ ನಟ ಎನಿಸಿರುವ ಬಿಗ್ ಬಿ ಈ ಆರ್ಥಿಕ ಸಾಲಿನಲ್ಲಿ ಒಟ್ಟು 15 ಕೋಟಿ ರೂಪಾಯಿ ಹಣವನ್ನು ದೇಣಿಯಾಗಿ ನೀಡುವ ಮೂಲಕ ಸೈ ಎನಿಸಿದ್ದಾರೆ. ಅಲ್ಲದೇ ಎಡೆಲ್ ಗಿವ್ ಹುರುನ್ ಇಂಡಿಯಾ ಪರೋಪಕಾರಿಗಳ ಪಟ್ಟಿ 2021ರಲ್ಲಿ ಅಮಿತಾಬ್ ಬಚ್ಚನ್ ಪ್ರವೇಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಪರೋಪಕಾರಿ ಪಟ್ಟಿಯಲ್ಲಿರುವ ಮಹಿಳೆಯರು?:

ಭಾರತದ ಪರೋಪಕಾರಿಗಳ ಪಟ್ಟಿಯಲ್ಲಿ ಒಟ್ಟು ಒಂಬತ್ತು ಮಹಿಳೆಯರೂ ಸಹ ಪ್ರವೇಶ ಪಡೆದುಕೊಂಡಿದ್ದಾರೆ. ರೋಹಿಣಿ ನಿಲೇಕಣಿ 69 ಕೋಟಿ ರೂಪಾಯಿ ದೇಣಿಗೆ ನೀಡುವುದರೊಂದಿಗೆ ಪರೋಪಕಾರಿ ಪಟ್ಟಿಯ ಮಹಿಳೆಯರ ವಿಭಾಗದಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 24 ಕೋಟಿ ರೂಪಾಯಿ ದಾನ ನೀಡಿರುವ ಯುಎಸ್‌ವಿ ಅಧ್ಯಕ್ಷೆ ಲೀನಾ ಗಾಂಧಿ ತಿವಾರಿ ಎರಡನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಇಂಧನ ಮತ್ತು ಪರಿಸರ ಎಂಜಿನಿಯರಿಂಗ್ ವ್ಯವಹಾರದ ಥರ್ಮ್ಯಾಕ್ಸ್ ನೇತೃತ್ವ ವಹಿಸಿರುವ ಅನು ಅಗಾ, ಒಟ್ಟು 20 ಕೋಟಿ ದೇಣಿಗೆ ನೀಡುವ ಮೂಲಕ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಪ್ರದೇಶವಾರು ದಾನಿಗಳ ವಿಂಗಡಣೆ:

ಭಾರತದಲ್ಲಿ ಅತಿಹೆಚ್ಚು ದಾನಿಗಳು ಇರುವ ಪ್ರದೇಶಗಳನ್ನು ವಿಂಗಡಣೆ ಮಾಡಿ ನೋಡಲಾಗಿದೆ. ಅದರಿಂದೆ ಮುಂಬೈನಲ್ಲಿ ಅತಿಹೆಚ್ಚು ದೇಣಿಗೆದಾರರು ಅಥವಾ ದಾನಿಗಳು ಕಂಡು ಬಂದಿದ್ದಾರೆ. ಮುಂಬೈನಲ್ಲಿ ಶೇ.31ರಷ್ಟು ದಾನಿಗಳು ಕಂಡು ಬಂದರೆ, ಶೇ.17ರಷ್ಟು ದಾನಿಗಳನ್ನು ಹೊಂದಿರುವ ಹೊಸ ದೆಹಲಿ ಎರಡನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಇದರ ಜೊತೆಗೆ ಬೆಂಗಳೂರಿನಲ್ಲಿ ಶೇ.10ರಷ್ಟು ದಾನಿಗಳಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

   Facebook ನ ಇನ್ಮೇಲೆ ಏನಂತ ಕರಿಬೇಕು ಗೊತ್ತಾ? | Oneindia Kannada
   English summary
   Indian Philanthropy List 2021 | Top 10 Most Charitable Person in India. Know More.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X