Navy Skydivers: ವಿಶಾಖಪಟ್ಟಣಂನಲ್ಲಿ ಭಾರತೀಯ ನೌಕಾಪಡೆಯ ಸ್ಕೈಡೈವರ್‌ಗಳ ಡಿಕ್ಕಿ!
ಭಾರತೀಯ ನೌಕಾಪಡೆಯ ಇಬ್ಬರು ಸ್ಕೈಡೈವರ್‌ಗಳು ಆಕಾಶದಲ್ಲಿ ಡಿಕ್ಕಿ ಹೊಡೆದುಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಭಾರತೀಯ ನೌಕಾಪಡೆಯಿಂದ ಆಯೋಜಿಸಿದ್ದ ಪೂರ್ವಾಭ್ಯಾಸದಲ್ಲಿ ಈ ಘಟನೆ ನಡೆದಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂನ ಆರ್‌ಕೆ ಬೀಚ್‌ನಲ್ಲಿ ಪೂರ್ವ ನೌಕಾ ಕಮಾಂಡ್‌ನ ವಿಶೇಷ ಕಾರ್ಯಾಚರಣೆಯ ಪ್ರದರ್ಶನದ ಪೂರ್ವಾಭ್ಯಾಸ ನಡೆಯುತ್ತಿತ್ತು. ಭಾರತೀಯ ನೌಕಾಪಡೆಯ ಇಬ್ಬರು ಸಿಬ್ಬಂದಿಯ ಪ್ಯಾರಾಚೂಟ್ ಮೂಲಕ ಇಳಿಯುವ ಸಂದರ್ಭದಲ್ಲಿ ಮುಖಾಮುಖಿ ಡಿಕ್ಕಿಯಾಗಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ. ಗಾಳಿಯಲ್ಲಿ ಡಿಕ್ಕಿಯಾಗಿರುವ ಸಿಬ್ಬಂದಿ ಸಮುದ್ರಕ್ಕೆ ಬಿದಿದ್ದಾರೆ. ಸಮುದ್ರಕ್ಕೆ ಬೀಳುತ್ತಿದ್ದಂತೆಯೇ ನೌಕಾಪಡೆಯ ತುರ್ತು ಸಿಬ್ಬಂದಿ ಮಧ್ಯಪ್ರವೇಶಿಸಿದ್ದು, ತಕ್ಷಣ ಇಬ್ಬರನ್ನು ರಕ್ಷಣೆ ಮಾಡಿದ್ದಾರೆ. ಈ ರೋಚಕ ವಿಡಿಯೋ ಚರ್ಚೆಗೆ ಕಾರಣವಾಗಿದೆ.
ಗುರವಾರ ಈ ಘಟನೆ ನಡೆದಿದ್ದು, ಯಾವ ಕಾರಣಕ್ಕೆ ಈ ರೀತಿ ಆಗಿದೆ ಎನ್ನುವ ಬಗ್ಗೆ ತನಿಖೆ ನಡೆದಿದೆ. ವಿಶಾಖಪಟ್ಟಣಂನಲ್ಲಿ ಪೂರ್ವ ನೌಕಾ ಕಮಾಂಡ್‌ನ ವಿಶೇಷ ಕಾರ್ಯಾಚರಣೆ ಪ್ರದರ್ಶನ ನಡೆಯಲಿದೆ. ಇದಕ್ಕೆ ಸಂಬಂಧಿಸಿದಂತೆ ಪೂರ್ವಾಭ್ಯಾಸ ನಡೆದಿದ್ದು. ಪೂರ್ವಾಭ್ಯಾಸದಲ್ಲಿ ಈ ಅವಘಡ ಆಗಿದೆ. ಪ್ರದರ್ಶನ ಪೂರ್ವಾಭ್ಯಾಸದ ಸಮಯದಲ್ಲಿ ಪ್ಯಾರಾಚೂಟ್ ಹಾಕಿಕೊಂಡು ಗೈಡ್ ಮಾಡುತ್ತಿದ್ದ ಇಬ್ಬರು ನೌಕಾಪಡೆಯ ಸ್ಕೈಡೈವರ್‌ಗಳ ನಡುವೆ ಆಕಾಶದಲ್ಲಿ ಏಕಾಏಕಿ ಡಿಕ್ಕಿ ಸಂಭವಿಸಿದೆ.

ಘಟನೆಯ ಹಿನ್ನೆಲೆ: ಭಾರತೀಯ ನೌಕಾಪಡೆಯುವ ದೇಶದ ವಿವಿಧ ಭಾಗದಲ್ಲಿ ನೌಕಾ ಕಮಾಂಡ್‌ನ ವಿಶೇಷ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳುತ್ತದೆ. ಅದೇ ರೀತಿ ಇದೀಗ ಆಂಧ್ರಪ್ರದೇಶದ ವಿಶಾಖಪಟ್ಟಣಂನ ಆರ್‌ಕೆ ಬೀಚ್‌ನಲ್ಲಿ ಪೂರ್ವ ನೌಕಾ ಕಮಾಂಡ್‌ನ ವಿಶೇಷ ಕಾರ್ಯಾಚರಣೆಯ ಪ್ರದರ್ಶನ ನಡೆಯುತ್ತಿದೆ. ಇದರ ಪೂರ್ವಾಭ್ಯಾಸ ಸಮಯದಲ್ಲಿ ಭಾರೀ ಎಡವಟ್ಟು ಸಂಭವಿಸಿದ್ದು ಸ್ವಲ್ಪದರಲ್ಲೇ ಭಾರೀ ಅವಘಡ ತಪ್ಪಿದೆ. ಪೂರ್ವಾಭ್ಯಾಸದ ಸಮಯದಲ್ಲಿ ಇಬ್ಬರು ನೌಕಾಪಡೆಯ ಸ್ಕೈಡೈವರ್‌ಗಳು ಡಿಕ್ಕಿ ಹೊಡೆದು ಬಿದಿದ್ದಾರೆ. ಕೆಳಗೆ ಇಳಿಯುವ ಸಂದರ್ಭದಲ್ಲಿ ಇಬ್ಬರು ನೌಕಾಪಡೆಯು ಸಿಬ್ಬಂದಿಯ ಪ್ಯಾರಾಚೂಟ್‌ಗಳು ಒಂದಕ್ಕೊಂದು ಗಂಟು ಬಿಗಿದುಕೊಂಡಂತಾಗಿ ಇಬ್ಬರೂ ಸಮುದ್ರಕ್ಕೆ ಬಿದಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರು ನೆಲದ ಮೇಲೆ ಬಿದ್ದಿದ್ದರೆ ಅವರಿಗೆ ಗಂಭೀರ ಗಾಯಗಳಾಗುತ್ತಿದ್ದವು ಎನ್ನಲಾಗಿದೆ.
ಇನ್ನು ಈ ಸಂಬಂಧ ನೌಕಾಪಡೆಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ. ಈ ರೀತಿಯ ದೊಡ್ಡ ಪ್ರದರ್ಶನವನ್ನು ನೀಡುವ ಮುನ್ನ ಪೂರ್ವಾಭ್ಯಾಸವನ್ನು ನಡೆಸಲಾಗುತ್ತದೆ. ಇದರ ಮುಖ್ಯ ಉದ್ದೇಶ ಮುಖ್ಯ ಪ್ರದರ್ಶನದಲ್ಲಿ ಯಾವುದೇ ತಪ್ಪು ಹಾಗೂ ಅವಘಡಗಳು ಸಂಭವಿಸಬಾರದು ಎನ್ನುವುದೇ ಆಗಿದೆ. ಇದೀಗ ಪೂರ್ವಾಭ್ಯಾಸದಲ್ಲಿ ಈ ರೀತಿ ಅಚಾತುರ್ಯ ನಡೆದಿರುವ ಹಿನ್ನೆಲೆಯಲ್ಲಿ ಕೆಲವು ನಿರ್ದಿಷ್ಟ ಬದಲಾವಣೆಗಳನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ.
ಮೈನವಿರೇಳಿಸುವ ಸಾಹನ ಪ್ರದರ್ಶನ: ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಭಾರತೀಯ ನೌಕಾಪಡೆಯಿಂದ ಮೈನವಿರೇಳಿಸುವ ಸಾಹಸಗಳ ಪ್ರದರ್ಶನ ನಡೆದಿದೆ. ಈ ಸಾಹಸ ಪ್ರದರ್ಶವನ್ನು ನೋಡುವುದಕ್ಕೆ ಸಾವಿರಾರು ಜನ ಸೇರುತ್ತಿದ್ದಾರೆ. ವಿಶಾಖಪಟ್ಟಣಂನ ಆರ್‌ಕೆ ಬೀಚ್‌ನಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದೆ. ವಿಮಾನಗಳ ಮೂಲಕ ಸಮುದ್ರಕ್ಕೆ ಇಳಿಯುವುದು ಹಾಗೂ ಸಮುದ್ರದಲ್ಲಿ ಕಾರ್ಯಾಚರಣೆ ನಡೆಸುವುದು. ಶತ್ರುಗಳನ್ನು ಮಟ್ಟ ಹಾಕುವ ಮಾದರಿ ಅಥವಾ ಅಣಕು ಪ್ರದರ್ಶನವನ್ನು ನೀಡಲಾಗುತ್ತಿದೆ. ಮೈನವಿರೇಳಿಸುವ ಪ್ರದರ್ಶನವನ್ನು ಪ್ರೇಕ್ಷಕರು ಕುತೂಹಲದಿಂದ ನೋಡುತ್ತಿದ್ದಾರೆ. ಇನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮತ್ತು ಉಪಮುಖ್ಯಮಂತ್ರಿ ಕೆ. ಪವನ್ ಕಲ್ಯಾಣ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.












Click it and Unblock the Notifications