Indian Indri Whiskey: ಭಾರತದ ಈ ವಿಸ್ಕಿಗೆ ಪ್ರಪಂಚದ 'ಅತ್ಯುತ್ತಮ ವಿಸ್ಕಿ' ಪಟ್ಟ, ಪ್ರಶಸ್ತಿಗೆ ಭಾಜನ
ಬೆಂಗಳೂರು, ಅಕ್ಟೋಬರ್ 04: ಭಾರತದ ವಿಸ್ಕಿಗಳಲ್ಲಿ ಒಂದು ಇದೀಗ ಪ್ರಪಂಚದ 'ಅತ್ಯುತ್ತಮ ವಿಸ್ಕಿ' ಎಂಬ ಕಿರೀಟವನ್ನು ಭಾರತದ 'ಇಂದ್ರಿ' ದೀಪಾವಳಿ ಕಲೆಕ್ಟರ್ಸ್ ಆವೃತ್ತಿ 2023 ಯು ಪಡೆದುಕೊಂಡಿದೆ. ಈ ಮೂಲಕ ಭಾರತದ ಹತ್ತಾರು ನಮೂನೆ ಮದ್ಯಗಳ ಪೈಕಿ ಇದು ಈ ವರ್ಷದ ಆಕರ್ಷಣೆಯಾಗಿದೆ.
ಸದ್ಯ 'ಇಂದ್ರಿ'ಗೆ ಸಿಕ್ಕ ಈ ಪುರಸ್ಕಾರವು ಭಾರತೀಯ ವಿಸ್ಕಿಗಳ ಜಾಗತಿಕ ಮನ್ನಣೆಯಲ್ಲಿ ಒಂದು ಮೈಲಿಗಲ್ಲನ್ನು ಗುರುತಿಸುವಂತಾಗಿದೆ. ಮುಂಬರಲಿರುವ ದೀಪಾವಳಿ ಹಬ್ಬಕ್ಕೆಂದು 'ಇಂದ್ರಿ' (ದೀಪಾವಳಿ ಕಲೆಕ್ಟರ್ಸ್ ಆವೃತ್ತಿ 2023) ಉತ್ಪನ್ನು ಮಾರುಕಟ್ಟೆ ಪ್ರವೇಶಿಸಿದೆ. ಇದು ವಿಶ್ವದ ನೂರಾರು ಪ್ರಸಿದ್ಧ ವಿಸ್ಕಿ ಬ್ರ್ಯಾಂಡ್‌ಗಳನ್ನು ಮೀರಿಸುತ್ತದೆ.

ಈ ಇಂದ್ರಿ ವಿಸ್ಕಿಯು ಭಾರತದ ಸಿಂಗಲ್ ಮಾಲ್ಟ್ ಸ್ಕಾಚ್, ಬೋರ್ಬನ್, ಕೆನಡಿಯನ್, ಆಸ್ಟ್ರೇಲಿಯನ್ ಹಾಗೂ ಬ್ರಿಟಿಷ್ ಸಿಂಗಲ್ ಮಾಲ್ಟ್‌ಗಳನ್ನು ಒಳಗೊಂಡ ಅಂತಾರಾಷ್ಟ್ರೀಯ ಬ್ರಾಂಡ್‌ಗಳನ್ನು ಸೋಲಿಸಿ ಅತ್ಯುತ್ತಮ ವಿಸ್ಕಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
'ಡಬಲ್ ಗೋಲ್ಡ್ ಬೆಸ್ಟ್ ಇನ್ ಶೋ'ನಲ್ಲಿ ಪ್ರಶಸ್ತಿ
'ಇಂದ್ರಿ' ದೀಪಾವಳಿ ಕಲೆಕ್ಟರ್ಸ್ ಆವೃತ್ತಿಯ 2023 ಪಿಕ್ಯಾಡಿಲಿ ಡಿಸ್ಟಿಲರೀಸ್‌ನ ಉತ್ಪನ್ನ ಆಗಿದೆ. ಇದು ವಿಸ್ಕಿ ಉದ್ಯಮದಲ್ಲಿ ಗುಣಮಟ್ಟ ಮತ್ತು ನಾವೀನ್ಯತೆಗೆ ತನ್ನದೇ ಆದ ಬದ್ಧತೆ ಹೊಂದಿದ್ದರಿಂದಲೇ ವಿಶ್ವ ಮಟ್ಟದಲ್ಲಿ ಸ್ಥಾನ ಪಡೆದಿದೆ. ಇದಕ್ಕೆ 'ಡಬಲ್ ಗೋಲ್ಡ್ ಬೆಸ್ಟ್ ಇನ್ ಶೋ' ಪ್ರಶಸ್ತಿಯನ್ನು ನೀಡಲಾಯಿತು ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಮುಂದಿನ ದೀಪಾವಳಿ ಹಬ್ಬದ ಆಚರಣೆಯನ್ನು ಈ ಆವೃತ್ತಿ ಸಂಗ್ರಾಹಕರು ಈ ಇಂದ್ರಿ ಜೊತೆಗೆ ಆಚರಿಸಿಕೊಳ್ಳಲಿದ್ದು, ಈ ವಿಚಾರ ಕುರಿತ ಮಾಹಿತಿಯನ್ನು ಕಂಪನಿಯು ಇನ್‌ಸ್ಟಾಗ್ರಾಮ್ (Instagram) ಪೋಸ್ಟ್‌ನಲ್ಲಿ ಹಂಚಿಕೊಂಡಿದೆ.

ಕೆಲವು ವಿಶೇಷತೆ ಹೊಂದಿರುವ 'ಇಂದ್ರಿ'
ವಿಶ್ವದ ಅತ್ಯುತ್ತಮ ಪ್ರಶಸ್ತಿಗೆ ಭಾಜನವಾದ ಈ ವಿಸ್ಕಿಯನ್ನು ಹಿಮಾಲಯದ ತಪ್ಪಲಿನಲ್ಲಿ ರಾಜಸ್ಥಾನದಲ್ಲಿ ಆರಿಸಿದ ಆರು-ಸಾಲು ಬಾರ್ಲಿ ಮತ್ತು ಯಮುನಾ ನದಿಯಿಂದ ತಾಜಾ ಗ್ಲೇಸಿಯರ್ ನೀರನ್ನು ಬಳಸಿ ಸಿದ್ಧಪಡಿಸಲಾಗಿದೆ. ಇದು ಗಾಢ ಅಂಬರ್ ವರ್ಣ ಮತ್ತು ಸಿಹಿ ಸೇರಿದಂತೆ ವಿಶೇಷ ಅನುಭವ ನೀಡಲಿದೆ ಎಂದು ಕಂಪನಿ ತಿಳಿಸಿದೆ.
ಇನ್ನೂ ವಿಸ್ಕಿಸ್ ಆಫ್ ದಿ ವರ್ಲ್ಡ್ ಅವಾರ್ಡ್ಸ್ ಇದೊಂದು ವರ್ಷ ವರ್ಷ ನಡೆದುಕೊಂಡು ಬರುವ ಕಾರ್ಯಕ್ರಮವಾಗಿದೆ. ಪಾನೀಯ ಉದ್ಯಮದಲ್ಲಿ ಕೆಲವು ಪ್ರಭಾವಶಾಲಿ ರುಚಿ ತಯಾರಕರನ್ನು ಸೆಳೆಯಲು ಒಟ್ಟುಗೂಡಿಸಲು ಈ ಕಾರ್ಯಕ್ರಮ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
ಇದು ಭಾರತೀಯ ವಿಸ್ಕಿ ಉದ್ಯಮದ ವಿಜಯ
100 ಕ್ಕೂ ಹೆಚ್ಚು ವಿಧದ ವಿಸ್ಕಿಗಳನ್ನು ಕಾರ್ಯಕ್ರಮದಲ್ಲಿ ರುಚಿಸಲಾಗುತ್ತದೆ. ರುಚಿ, ಸುಗಂಧ, ಸುವಾಸನೆ ಇನ್ನಿತರ 100-ಪಾಯಿಂಟ್ ಆಧಾರದಲ್ಲಿ ಅತ್ಯುತ್ತಮ ವಿಸ್ಕಿ ಯಾವುದು ಎಂದು ಇಲ್ಲಿ ನಿರ್ಧರಿಸಿ ಪುರಸ್ಕಾರ ನೀಡಲಾಗುತ್ತದೆ.
ಈ ಗೆಲುವು ಕೇವಲ ಪಿಕ್ಯಾಡಿಲಿ ಡಿಸ್ಟಿಲರೀಸ್‌ನ ಗೆಲುವು ಅಲ್ಲ. ಒಟ್ಟಾರೆಯಾಗಿ ಭಾರತೀಯ ವಿಸ್ಕಿ ಉದ್ಯಮದ ವಿಜಯವಾಗಿದೆ. ಇದು ಭಾರತೀಯ ವಿಸ್ಕಿಗಳ ಜಾಗತಿಕ ಮೆಚ್ಚುಗೆಯನ್ನು ಸೂಚಿಸುತ್ತದೆ. ಇಂದ್ರಿ ದೀಪಾವಳಿ ಕಲೆಕ್ಟರ್ಸ್ ಎಡಿಶನ್ 2023 ನಲ್ಲಿ ದುಬಾರಿ ಚಾಕೊಲೇಟ್, ಹಣ್ಣು ಮತ್ತು ಬೀಜಗಳ ಶ್ರೀಮಂತಿಕೆ ಹೊಂದಿದೆ. ಇದರಿಂದ ಭಾರತೀಯ ವಿಸ್ಕಿ ಉದ್ಯಮ ಇನ್ನಷ್ಟು ಎತ್ತರಕ್ಕೇರಿದೆ ಎಂದು ಕಂಪನಿ ಸಂತಸ ಹಂಚಿಕೊಂಡಿದೆ.












Click it and Unblock the Notifications