ಹೋಟೆಲ್ ಕಾರ್ಮಿಕನಿಗೆ 55 ಕೋಟಿ ಲಾಟರಿ ಹೊಡೆದಿದ್ದು ಹೇಗೆ?
ನವದೆಹಲಿ, ನವೆಂಬರ್ 07: ಯಾರ ಹಣೆಬರಹ, ಯಾವಾಗ, ಯಾವ ರೀತಿ ಬದಲಾಗುತ್ತೆ ಎಂಬುದನ್ನು ಹೇಳುವುದಕ್ಕೆ ಸಾಧ್ಯವಿಲ್ಲ. ನಿನ್ನೆಯವರೆಗೂ ಕಾರ್ಮಿಕನಾಗಿ ದುಡಿಯುತ್ತಿದ್ದ ವ್ಯಕ್ತಿಯ ಇವತ್ತು ಕೋಟ್ಯಧಿಪತಿ ಆಗಿದ್ದಾರೆ.
ದುಬೈನಲ್ಲಿ ಹೊಡೆದ ಲಾಟರಿಯು ಭಾರತೀಯ ಮೂಲಕ ಕಾರ್ಮಿಕನ ಭವಿಷ್ಯವನ್ನು ಬದಲಾಯಿಸಿ ಬಿಟ್ಟಿದೆ. ರಾತ್ರಿ ಕಳೆದು ಬೆಳಕು ಮೂಡುವಷ್ಟರಲ್ಲೇ ಕಾರ್ಮಿಕನು 55 ಕೋಟಿ ರೂಪಾಯಿ ಒಡೆಯನಾಗಿದ್ದಾನೆ.
ದುಬೈನಲ್ಲಿ ದುಡಿಯುತ್ತಿದ್ದ ಭಾರತೀಯ ಮೂಲದ ಕೂಲಿ ಕಾರ್ಮಿಕನ ಕೈ ಹಿಡಿದಿದ್ದು ಹೇಗೆ ಲಾಟರಿ ಟಿಕೆಟ್. ಅದೃಷ್ಟ ಬದಲಾಗಿರುವ ಬಗ್ಗೆ ಕೂಲಿ ಕಾರ್ಮಿಕನು ಹೇಳುವುದೇನು?, ಸೋಷಿಯಲ್ ಮೀಡಿಯಾದಲ್ಲಿ ದುಬೈ ಲಾಟರಿಯಲ್ಲಿ ಬಂಪರ್ ಬಹುಮಾನ ಪಡೆದ ವ್ಯಕ್ತಿಯ ಸುದ್ದಿ ವೈರಲ್ ಆಗಿದ್ದು ಯಾಕೆ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಅಬುದಾಬಿ ಬಿಗ್ ಲಾಟರಿ ಗೆದ್ದ ಎನ್ಎಸ್ ಸಜೇಶ್
ದುಬೈನ ಖಾಸಗಿ ಹೋಟೆಲ್ ವೊಂದರಲ್ಲಿ ಪರ್ಚೆಸಿಂಗ್ ಮ್ಯಾನೇಜರ್ ಆಗಿ ಎನ್ಎಸ್ ಸಜೇಶ್(47) ಕೆಲಸ ಮಾಡುತ್ತಿದ್ದಾರೆ. ಇದೇ ಕಾರ್ಮಿಕನಿಗೆ ಅಬುದಾಬಿ ಬಿಗ್ ಟಿಕೆಟ್ ಡ್ರಾನಲ್ಲಿ ಬಂಪರ್ ಲಾಟರಿ ಹೊಡೆದಿದೆ. ಆ ಮೂಲಕ ಕಾರ್ಮಿಕನ ಲಕ್ ಬದಲಾಗಿದೆ. ರಾತ್ರೋರಾತ್ರಿ ಕೋಟಿ ಕೋಟಿ ಕಾಸು ಕಾರ್ಮಿಕನ ಖಾತೆಗೆ ಬಂದು ಬಿದ್ದಿದೆ.

ಭಾರತೀಯ ಕಾರ್ಮಿಕನಿಗೆ 55 ಕೋಟಿ ಬಂದಿದ್ದು ಹೇಗೆ?
ಅಬುಧಾಬಿ ಬಿಗ್ ಟಿಕೆಟ್ ಡ್ರಾನಲ್ಲಿ ಎನ್ಎಸ್ ಸಜೇಶ್ 25 ಮಿಲಿಯನ್ ದಿರಮ್ಸ್ ಅನ್ನು ಗೆದ್ದುಕೊಂಡಿದ್ದಾರೆ. ಅಬುಧಾಬಿನಲ್ಲಿ 25 ಮಿಲಿಯನ್ ದಿರಮ್ಸ್ ಎಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ 55 ಕೋಟಿ ರೂಪಾಯಿ ಆಗುತ್ತದೆ. ಎರಡು ವರ್ಷಗಳಿಂದ ಓಮನ್ ನಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಕಾರ್ಮಿಕನು ಬಂದಿದ್ದ ಎಂದು ಗೊತ್ತಾಗಿದೆ.

ನಾಲ್ಕು ವರ್ಷಗಳಿಂದ ಲಾಟರಿ ಖರೀದಿಸುತ್ತಿದ್ದ ಕಾರ್ಮಿಕ
ಹೋಟೆಲ್ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರೂ ಕಳೆದ ನಾಲ್ಕು ವರ್ಷಗಳಿಂದ ಬಿಡದಂತೆ ಲಾಟರಿ ಖರೀದಿಸುತ್ತಿದ್ದನು. ಕಾರ್ಮಿಕನಿಗೆ ನಾಲ್ಕು ವರ್ಷಗಳಿಂದಲೂ ಈ ಲಾಟರಿ ಖರೀದಿಯ ಗೀಳು ಅಂಟಿಕೊಂಡಿತ್ತು. ಆನ್ ಲೈನ್ ಮೂಲಕ ಲಾಟರಿ ಖರೀದಿಸುವುದಕ್ಕೆ ಈತನಿಗೆ ಕೆಲವು ಸಹದ್ಯೋಗಿಗಳು ಸಹಕಾರ ನೀಡುತ್ತಿದ್ದರು. ಅಂಥ 20 ಜನರಿಗೆ ಬಹುಮಾನವನ್ನು ಹಂಚಿಕೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.

ಗಂಡನ ಮಾತು ನೆಚ್ಚಿಕೊಳ್ಳದ ಪತ್ನಿ
ದುಬೈನಲ್ಲಿ ತಾನು ಕೆಲಸ ಮಾಡುವ ರೆಸ್ಟೋರೆಂಟ್‌ನಲ್ಲಿ 150ಕ್ಕೂ ಹೆಚ್ಚು ಕಾರ್ಮಿಕರು ಉದ್ಯೋಗ ಮಾಡುತ್ತಿದ್ದಾರೆ. ಈ ಎಲ್ಲ ಕಾರ್ಮಿಕರಿಗೆ ತನ್ನ ಕೈಯಲ್ಲಿ ಸಾಧ್ಯವಾದಷ್ಟು ಸಹಾಯ ಮಾಡುವುದಾಗಿ ಎನ್ಎಸ್ ಸಜೇಶ್ ಹೇಳಿದ್ದಾರೆ. ಅದೇ ರೀತಿ ಮೊದಲಿಗೆ ತಾನು ಲಾಟರಿಯಲ್ಲಿ 55 ಕೋಟಿ ರೂಪಾಯಿ ಹಣವನ್ನು ಗೆದ್ದುಕೊಂಡಿರುವುದಾಗಿ ತನ್ನ ಪತ್ನಿಗೆ ತಿಳಿಸಿದರು. ಆದರೆ ಆರಂಭದಲ್ಲಿ ಸಜೇಶ್ ಪತ್ನಿಯು ಇದೆಲ್ಲ ತಮಾಷೆ ಎಂದುಕೊಂಡಿದ್ದರು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications