ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ PUBG ಅಲ್ಲ BGMI ಆಟಕ್ಕೂ ನಿರ್ಬಂಧ; ಕಾರಣ ತಿಳಿಯಿರಿ

|
Google Oneindia Kannada News

ನವದೆಹಲಿ, ಜುಲೈ 29: ಭಾರತದಲ್ಲಿ ಇನ್ಮುಂದೆ ಗೂಗಲ್ ಮತ್ತು ಆಪಲ್ ಸ್ಟೋರ್‌ಗಳಲ್ಲಿ ಯುದ್ಧಕ್ಕೆ ಸಂಬಂಧಿಸಿದ ಗೇಮ್ ಅನ್ನು ನೀವು ಡೌನ್‌ಲೋಡ್‌ ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ. ಅಂಥ ಆಟಗಳನ್ನು ಆಡುವುದಕ್ಕೆ ಅವಕಾಶವೂ ಇರುವುದಿಲ್ಲ. ಅದೇಕೆ ಎಂಬ ಪ್ರಶ್ನೆಗೆ ಈ ವರದಿ ಉತ್ತರಿಸಲಿದೆ.

ಕಳೆದ ವರ್ಷ ಭಾರತದಲ್ಲಿ ಪಬ್-ಜಿ(PUBG) ಅಪ್ಲಿಕೇಶನ್‌ಗೆ ಪರ್ಯಾಯವಾಗಿ ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ(BGMI) ಆ್ಯಪ್ ಅನ್ನು ಪ್ರಾರಂಭಿಸಲಾಗಿದ್ದು, ಇದೀಗ ಅದನ್ನೂ ನಿರ್ಬಂಧಿಸಲಾಗಿದೆ.

 ಪಬ್ಜಿ ಆಡುತ್ತಾ ನೀರಿಗೆ ಬಿದ್ದ; ಹುಬ್ಬಳ್ಳಿಯಲ್ಲಿ ನಾಲ್ವರ ಪ್ರಾಣಕ್ಕೇ ಎರವಾಯ್ತ ಆಟ? ಪಬ್ಜಿ ಆಡುತ್ತಾ ನೀರಿಗೆ ಬಿದ್ದ; ಹುಬ್ಬಳ್ಳಿಯಲ್ಲಿ ನಾಲ್ವರ ಪ್ರಾಣಕ್ಕೇ ಎರವಾಯ್ತ ಆಟ?

ದೇಶದ ಭದ್ರತೆಗೆ ಬೆದರಿಕೆಯ ಹಿನ್ನೆಲೆ 2020ರಲ್ಲಿ ಪಬ್-ಜಿ ಮೊಬೈಲ್ ಸೇರಿದಂತೆ ಚೀನಾದ ಹಲವು ಅಪ್ಲಿಕೇಶನ್‌ಗಳನ್ನು ನಿಷೇಧಿಸಲಾಗಿತ್ತು. ಆದರೆ ಈಗ ಗೂಗಲ್ ಮತ್ತು ಆಪಲ್ ಸ್ಟೋರ್‌ಗಳಿಂದ ಯುದ್ಧಕ್ಕೆ ಸಂಬಂಧಿಸಿದ ಬಿಜಿಎಂಐ ಅಪ್ಲಿಕೇಶನ್ ತೆಗೆದು ಹಾಕುವಂತೆ ಕೇಂದ್ರ ಸರ್ಕಾರ ಕೇಳಿದೆ.

ಆಪಲ್ ನೀಡಿಲ್ಲ ಯಾವುದೇ ರೀತಿ ಸ್ಪಷ್ಟನೆ

ಆಪಲ್ ನೀಡಿಲ್ಲ ಯಾವುದೇ ರೀತಿ ಸ್ಪಷ್ಟನೆ

ಕೇಂದ್ರ ಸರ್ಕಾರವು ಸೂಚನೆ ನೀಡಿದ ಬೆನ್ನಲ್ಲೇ ಗುರುವಾರ ಸಂಜೆಯೇ ಗೂಗಲ್ ಮತ್ತು ಆಪಲ್ ಎರಡೂ BGMI ಅನ್ನು ನಿರ್ಬಂಧಿಸಿದೆ. ಆದರೆ ಆಪಲ್ ಸಂಸ್ಥೆಯು ಅಧಿಕೃತವಾಗಿ ಇನ್ನೂ ಸ್ಪಷ್ಟನೆ ನೀಡದಿದ್ದರೂ ಗೂಗಲ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಸರ್ಕಾರವು ಮೊಬೈಲ್ ಗೇಮ್ ಅನ್ನು ತೆಗೆದುಹಾಕುವಂತೆ ಕೇಳಿಕೊಂಡ ನಂತರ ಕ್ರಮ ತೆಗೆದುಕೊಂಡಿರುವುದಾಗಿ ಗೂಗಲ್ ಹೇಳಿದೆ.

ನಿಮ್ಮ ಪ್ರದೇಶದಲ್ಲಿ ಲಭ್ಯವಿಲ್ಲ ಬಿಜಿಎಂಐ ಅಪ್ಲಿಕೇಶನ್

ನಿಮ್ಮ ಪ್ರದೇಶದಲ್ಲಿ ಲಭ್ಯವಿಲ್ಲ ಬಿಜಿಎಂಐ ಅಪ್ಲಿಕೇಶನ್

ಯುದ್ಧಕ್ಕೆ ಸಂಬಂಧಿಸಿದ ಗೇಮ್ ಅಪ್ಲಿಕೇಶನ್ ಅನ್ನು ತೆಗೆದು ಹಾಕಲು ಕೇಂದ್ರ ಸರ್ಕಾರದ ಆದೇಶದ ಪ್ರತಿ ಕೈ ಸೇರುತ್ತಿದ್ದಂತೆ ನಾವು ಕ್ರಮ ತೆಗೆದುಕೊಂಡಿದ್ದೇವೆ. ಈ ಅಪ್ಲಿಕೇಶನ್ ಅಭಿವೃದ್ಧಿಪಡಿಸುವ ಕಂಪನಿಗಳು ಮತ್ತು ವ್ಯಕ್ತಿಗಳು ಭಾರತದಲ್ಲಿ ಪ್ಲೇ ಸ್ಟೋರ್ ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗಿದೆ. ಅಂದರೆ ನೀವು ಬಿಜಿಎಂಐ ಅಪ್ಲಿಕೇಶನ್ ಮೇಲೆ ಒಂದು ಬಾರಿ ಕ್ಲಿಕ್ ಮಾಡಿ ನೋಡಿದರೆ, "ನಿಮ್ಮ ಪ್ರದೇಶದಲ್ಲಿ ಇದು ಲಭ್ಯವಿಲ್ಲ," ಎಂಬ ಸಂದೇಶ ತೋರುತ್ತದೆ.

ದೇಶದಲ್ಲಿ BGMI ನಿರ್ಬಂಧಿಸಲು ಕಾರಣವೇನು?

ದೇಶದಲ್ಲಿ BGMI ನಿರ್ಬಂಧಿಸಲು ಕಾರಣವೇನು?

ಯುದ್ಧಕ್ಕೆ ಸಂಬಂಧಿಸಿದ BGMI ಅಪ್ಲಿಕೇಶನ್ ಅನ್ನು ಏಕೆ ನಿರ್ಬಂಧಿಸಲಾಗಿದೆ ಎಂಬುದರ ಕುರಿತು ಯಾವುದೇ ಸುಳಿವು ಸಿಕ್ಕಿಲ್ಲ. ಗೇಮ್ ಡೆವಲಪರ್ ಸಮಸ್ಯೆಯನ್ನು ಪರಿಹರಿಸಲು ಮತ್ತು BGMI ಅನ್ನು ಮರಳಿ ತರಲು ಸರ್ಕಾರಿ ಅಧಿಕಾರಿಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗುತ್ತದೆ. "ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಸ್ಟೋರ್‌ನಿಂದ BGMI ಅನ್ನು ಹೇಗೆ ತೆಗೆದುಹಾಕಲಾಗಿದೆ ಎಂಬುದನ್ನು ನಾವು ಸ್ಪಷ್ಟಪಡಿಸುತ್ತಿದ್ದೇವೆ. ನಿರ್ದಿಷ್ಟ ಮಾಹಿತಿ ಪಡೆದ ನಂತರ ಅದರ ಬಗ್ಗೆ ನಿಮಗೆ ತಿಳಿಸುತ್ತೇವೆ" ಎಂದು ಕ್ರಾಫ್ಟನ್ ತಿಳಿಸಿದ್ದಾರೆ.

ಬಿಜಿಎಂಐ ಆಪ್ ಡೌನ್‌ಲೋಡ್‌ಗೆ ಅವಕಾಶವಿಲ್ಲ

ಬಿಜಿಎಂಐ ಆಪ್ ಡೌನ್‌ಲೋಡ್‌ಗೆ ಅವಕಾಶವಿಲ್ಲ

ಭಾರತದಲ್ಲಿ ಬಿಜಿಎಂಐ ಅಪ್ಲಿಕೇಶನ್ ಅನ್ನು ಇನ್ಮುಂದೆ ಡೌನ್‌ಲೋಡ್‌ ಮಾಡಿಕೊಳ್ಳುವುದಕ್ಕೆ ಸಿಗುವುದಿಲ್ಲ. ಆದರೆ ಈಗಾಗಲೇ ಅದನ್ನು ಡೌನ್‌ಲೋಡ್‌ ಮಾಡಿಕೊಂಡಿರುವ ಬಳಕೆದಾರರು ಅದನ್ನು ಪ್ರವೇಶಿಸುವುದಕ್ಕೆ ಯಾವುದೇ ಸಮಸ್ಯೆ ಇರುವುದಿಲ್ಲ. ಈ ಮಧ್ಯೆ ಅಪ್ಲಿಕೇಶನ್‌ನಿಂದ ಲಾಗೌಟ್ ಆಗಿರುವ ಬಳಕೆದಾರರಿಗೆ ಅಪ್‌ಡೇಟ್ ಸಂದೇಶವು ತೋರುತ್ತಿದೆ. ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ಗಳಿಂದ BGMI ಅನ್ನು ತೆಗೆದುಹಾಕುವುದಕ್ಕೆ ಕೆಲವು ನಿಯಮಗಳ ಉಲ್ಲಂಘನೆ ಕಾರಣವೆಂದು ಹೇಳಲಾಗುತ್ತಿದೆ, ಆದರೂ ನಿರ್ದಿಷ್ಟ ಕಾರಣದ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿಯಿಲ್ಲ ಎಂದು ಹೇಳಲಾಗುತ್ತಿದೆ.

ಕೇಂದ್ರ ಮೇಲ್ಮನೆಯಲ್ಲಿ ಸುದ್ದಿಯಾಗಿದ್ದ ಬಿಜಿಎಂಐ

ಕೇಂದ್ರ ಮೇಲ್ಮನೆಯಲ್ಲಿ ಸುದ್ದಿಯಾಗಿದ್ದ ಬಿಜಿಎಂಐ

ಕಳೆದ ವಾರವಷ್ಟೇ ರಾಜ್ಯಸಭೆಯಲ್ಲಿ ಬಿಜಿಎಂಐಗೆ ಸಂಬಂಧಿಸಿದಂತೆ ವಿಷಯವನ್ನು ಪ್ರಸ್ತಾಪಿಸಲಾಯಿತು. ಅಂದಿನಿಂದ ಯುದ್ಧಕ್ಕೆ ಸಂಬಂಧಿಸಿದ ಶೀರ್ಷಿಕೆಗಳು ಮತ್ತು ಆಟಗಳು ಮಕ್ಕಳ ಮೇಲೆ ಕೆಟ್ಟ ಪರಿಣಾಣವನ್ನು ಬೀರುತ್ತವೆ ಎಂದು ಸದಸ್ಯರು ಚರ್ಚಿಸುತ್ತಿದ್ದರು. ಕೆಲವು ದಿನಗಳ ಹಿಂದೆಯಷ್ಟೇ ಲಕ್ನೋದಲ್ಲಿ ಪುಟ್ಟ ಬಾಲಕನೊಬ್ಬನ ಬಿಜಿಎಂಐ ಆಟವಾಡಲು ಬಿಡಲಿಲ್ಲ ಎಂಬ ಕಾರಣಕ್ಕೆ ತನ್ನ ತಾಯಿಯನ್ನೇ ಕೊಂದಿರುವ ವರದಿಯು ಈ ಸಂದರ್ಭದಲ್ಲಿ ಸಾಕಷ್ಟು ಚರ್ಚೆಗೆ ಬಂದಿತ್ತು. ಆದರೆ ಈ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಭಾರತದಲ್ಲಿ ಬಿಜಿಎಂಐ ನಿಷೇಧಿಸಲಾಗುತ್ತದೆ ಎಂಬು ಹೇಳುವುದಕ್ಕೆ ಸಾಧ್ಯವಿಲ್ಲ, ಏಕೆಂದರೆ ಕ್ರಾಫ್ಟನ್ ಸರ್ಕಾರದ ಆತಂಕವನ್ನು ಬಗೆಹರಿಸುವಲ್ಲಿ ಯಶಸ್ವಿಯಾದರೆ, ಶೀಘ್ರದಲ್ಲೇ ಮತ್ತೆ ಅಪ್ಲಿಕೇಶನ್ ಸ್ಟೋರ್‌ಗಳಲ್ಲಿ ಕಾಣಿಸಿಕೊಳ್ಳುತ್ತದೆ.

Recommended Video

Rishikumar Swamiji ಮಂಗಳೂರಿನ ಘಟನೆ ಬಗ್ಗೆ ವಿವಾದಾತ್ಮಕ ಹೇಳಿಕೆ | *Politics | OneIndia Kannada

English summary
Battlegrounds Mobile India App : Google and Apple pulled the well-known 3rd person game, BGMI from their application stores, following a Indian Government request. Know why they blocked.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X