Get Updates
Get notified of breaking news, exclusive insights, and must-see stories!

ಪರಿಸರ ಸೂಚ್ಯಂಕದಲ್ಲಿ ಭಾರತ ಕೊನೆ: ಅವೈಜ್ಞಾನಿಕ ವರದಿ ಎಂದು ಸರಕಾರ ತಿರಸ್ಕಾರ

ನವದೆಹಲಿ, ಜೂನ್ 9: ಪರಿಸರ ಕಾರ್ಯದಕ್ಷತೆ ಸೂಚ್ಯಂಕ-2022 ವರದಿಯನ್ನು ಭಾರತ ತಿರಸ್ಕರಿಸಿದೆ. ಕಲ್ಪನೆ ಮತ್ತು ಅವೈಜ್ಞಾನಿಕ ವಿಧಾನಗಳನ್ನು ಆಧರಿಸಿ ವರದಿ ಪ್ರಕಟಿಸಲಾಗಿದೆ ಎಂದು ಭಾರತ ಕಿಡಿಕಾರಿದೆ.

2022ನೇ ಸಾಲಿನ ಪರಿಸರ ಕಾರ್ಯದಕ್ಷತೆ ಸೂಚ್ಯಂಕದಲ್ಲಿ (ಇಪಿಐ) ಭಾರತವು ಕೊನೆಯ ಸ್ಥಾನದಲ್ಲಿದೆ ಎಂದು ಅಮೆರಿಕದ ಅಧ್ಯಯಮ ಸಂಸ್ಥೆಗಳು ಹೇಳಿದೆ. ಅತಿ ಹೆಚ್ಚು ಅಂಕ ಪಡೆದಿರುವ ಡೆನ್ಮಾರ್ಕ್‌ ಸೂಚ್ಯಂಕದಲ್ಲಿ ಮೊದಲನೇ ಸ್ಥಾನದಲ್ಲಿದೆ.

ಕೊಲಂಬಿಯಾ ವಿಶ್ವವಿದ್ಯಾಲಯದ ಪರಿಸರ ಕಾನೂನು ಮತ್ತು ನೀತಿ ಅಧ್ಯಯನ ಕೇಂದ್ರ ಮತ್ತು ಭೂ ವಿಜ್ಞಾನ ಮಾಹಿತಿ ಜಾಲ ಕೇಂದ್ರ ಅಧ್ಯಯನ ನಡೆಸಿದೆ. ಒಟ್ಟು 180 ದೇಶಗಳನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿದ್ದು ಸೂಚ್ಯಂಕ ನೀಡಲಾಗಿದೆ.

ಒಟ್ಟು 11 ವಿಭಾಗಗಳಲ್ಲಿ 40 ಕಾರ್ಯಕ್ಷಮತೆ ಸೂಚಕಗಳನ್ನು ಬಳಕೆ ಮಾಡಲಾಗಿದ್ದು, ಹವಾಮಾನ ಬದಲಾವಣೆ ಕಾರ್ಯಕ್ಷಮತೆ, ಪರಿಸರ ಆರೋಗ್ಯ ಮತ್ತು ಪರಿಸರ ವ್ಯವಸ್ಥೆಗೆ ಸಂಬಂಧಿಸಿದಂತೆ ಜಗತ್ತಿನ ದೇಶಗಳಿಗೆ ಸೂಚ್ಯಂಕ ನೀಡಿದೆ.

ಇನ್ನು ಇಪಿಐ-2022 ವರದಿಯನ್ನು ಕೇಂದ್ರ ಪರಿಸರ ಸಚಿವಾಲಯ ಸಂಪೂರ್ಣವಾಗಿ ತಿರಸ್ಕರಿಸಿದೆ. ಇದೊಂದು ಅವೈಜ್ಞಾನಿಕ ವಿಧಾನಗಳನ್ನು ಆಧರಿಸಿ ಸಿದ್ಧಪಡಿಸಿರುವ ವರದಿ ಎಂದು ವಾದಿಸಿದೆ.

 ಪರಿಸರ ಸಚಿವಾಲಯ ಆಕ್ಷೇಪ

ಪರಿಸರ ಸಚಿವಾಲಯ ಆಕ್ಷೇಪ

ಭಾರತ ಚೆನ್ನಾಗಿ ಕಾರ್ಯಕ್ಷಮತೆ ಹೊಂದಿರುವ ಸೂಚಕಗಳ ಮಹತ್ವವನ್ನೇ ಕಡೆಗಣಿಸಲಾಗಿದೆ. ಈ ರೀತಿ ಮಾಡಿರುವುದಕ್ಕೆ ಯಾವುದೇ ಕಾರಣಗಳನ್ನೂ ನೀಡಲಾಗಿಲ್ಲ ಎಂದು ಸಚಿವಾಲಯ ಆಕ್ಷೇಪ ವ್ಯಕ್ತಪಡಿಸಿದೆ.

ಸಚಿವಾಲಯವು ವಿಶ್ಲೇಷಣೆ ಮತ್ತು ತೀರ್ಮಾನಗಳನ್ನು ಏಕೆ ಸ್ವೀಕರಿಸುವುದಿಲ್ಲ ಎಂಬ ಕಾರಣಗಳನ್ನು ಪಟ್ಟಿ ಮಾಡಿದೆ. 2050ರವರೆಗಿನ ಯೋಜಿತ ಹಸಿರುಮನೆ ಅನಿಲ (GHG) ಹೊರಸೂಸುವಿಕೆ ಮಟ್ಟವನ್ನು ಹೊಂದಿದೆ ಎಂದು ಹೇಳಿದೆ.

 10 ವರ್ಷದ ಬದಲಾವಣೆ ಮಾತ್ರ ಪರಿಗಣಿಸಿದ್ದಕ್ಕೆ ಆಕ್ಷೇಪ

10 ವರ್ಷದ ಬದಲಾವಣೆ ಮಾತ್ರ ಪರಿಗಣಿಸಿದ್ದಕ್ಕೆ ಆಕ್ಷೇಪ

"ಅಧ್ಯಯನದಲ್ಲಿ ದೀರ್ಘಾವಧಿಯ ನವೀಕರಿಸಬಹುದಾದ ಶಕ್ತಿಯ ಸಾಮರ್ಥ್ಯ ಮತ್ತು ಬಳಕೆಯ ಪ್ರಮಾಣ, ಹೆಚ್ಚುವರಿ ಇಂಗಾಲದ ಸಿಂಕ್‌ಗಳು, ಆಯಾ ದೇಶಗಳ ಶಕ್ತಿಯ ದಕ್ಷತೆ ಇತ್ಯಾದಿಗಳನ್ನು ಗಣನೆಗೆ ತೆಗೆದುಕೊಳ್ಳುವ ಬದಲಾಗಿ ಕಳೆದ 10 ವರ್ಷಗಳ ಹಸಿರುಮನೆ ಅನಿಲ ಹೊರಸೂಸುವಿಕೆಯ ಸರಾಸರಿ ಬದಲಾವಣೆಯ ದರವನ್ನು ಆಧರಿಸಿ ಲೆಕ್ಕಹಾಕಿದೆ" ಎಂದು ಹೇಳಿದೆ.

ಇಪಿಐ ನೀಡಿದ 2050 ರವರೆಗಿನ ಯೋಜಿತ ಹಸಿರುಮನೆ ಅನಿಲ (GHG) ಹೊರಸೂಸುವಿಕೆಯ ಪಥವನ್ನು ಲೆಕ್ಕಾಚಾರ ಮಾಡುವಾಗ ದೇಶದ ಅರಣ್ಯಗಳು ಮತ್ತು ಜೌಗು ಪ್ರದೇಶಗಳೆರಡೂ ನಿರ್ಣಾಯಕ ಕಾರ್ಬನ್ ಸಿಂಕ್‌ಗಳಾಗಿವೆ ಎಂದು ಪರಿಸರ ಸಚಿವಾಲಯ ತಿಳಿಸಿದೆ. ಇಪಿಐ ಅಧ್ಯಯನದಲ್ಲಿ ಕಡಿಮೆ ಹೊರಸೂಸುವಿಕೆಯ ಪಥದ ಐತಿಹಾಸಿಕ ಅಂಕಿಅಂಶಗಳನ್ನು ಸಹ ನಿರ್ಲಕ್ಷಿಸಲಾಗಿದೆ ಎಂದು ಹೇಳಿದೆ.

 ಹಲವು ಸೂಚಕಗಳನ್ನು ಗಣನೆಗೆ ತೆಗೆದುಕೊಂಡಿಲ್ಲ

ಹಲವು ಸೂಚಕಗಳನ್ನು ಗಣನೆಗೆ ತೆಗೆದುಕೊಂಡಿಲ್ಲ

ಕೃಷಿ ಜೀವವೈವಿಧ್ಯತೆ, ಮಣ್ಣಿನ ಆರೋಗ್ಯ, ಆಹಾರ ನಷ್ಟ ಮತ್ತು ತ್ಯಾಜ್ಯದಂತಹ ಸೂಚಕಗಳು ಹೆಚ್ಚಿನ ಕೃಷಿ ಜನಸಂಖ್ಯೆಯನ್ನು ಹೊಂದಿರುವ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಮುಖ್ಯವಾಗಿದ್ದರೂ ಸಹ ಸೇರಿಸಲಾಗಿಲ್ಲ ಎಂದು ಅದು ದೂರಿದೆ.

"ನೀರಿನ ಗುಣಮಟ್ಟ, ನೀರಿನ ಬಳಕೆಯ ದಕ್ಷತೆ, ಸುಸ್ಥಿರ ಬಳಕೆ ಮತ್ತು ಉತ್ಪಾದನೆಗೆ ನಿಕಟ ಸಂಬಂಧ ಹೊಂದಿರುವ ತಲಾವಾರು ತ್ಯಾಜ್ಯ ಉತ್ಪಾದನೆಯ ಸೂಚಕಗಳನ್ನು ಸೂಚ್ಯಂಕದಲ್ಲಿ ಸೇರಿಸಲಾಗಿಲ್ಲ" ಎಂದು ಪರಿಸರ ಸಚಿವಾಲಯ ಆಕ್ಷೇಪ ವ್ಯಕ್ತಪಡಿಸಿದೆ.

 ಮೊದಲ ಸ್ಥಾನದಲ್ಲಿ ಡೆನ್ಮಾರ್ಕ್

ಮೊದಲ ಸ್ಥಾನದಲ್ಲಿ ಡೆನ್ಮಾರ್ಕ್

ಡೆನ್ಮಾರ್ಕ್ ಅಗ್ರಸ್ಥಾನದಲ್ಲಿದ್ದರೆ, ಬ್ರಿಟನ್ ಮತ್ತು ಫಿನ್‌ಲ್ಯಾಂಡ್ ನಂತರದ ಸ್ಥಾನಗಳನ್ನು ಅಲಂಕರಿಸಿವೆ. ಶ್ರೀಮಂತ ರಾಷ್ಟ್ರ ಅಮೆರಿಕ 20ನೇ ಸ್ಥಾನದಲ್ಲಿದ್ದರೆ, ರಷ್ಯಾ 112ನೇ ಸ್ಥಾನದಲ್ಲಿದೆ. ನೆರೆಯ ಚೀನಾ 28.4 ಅಂಕಗಳೊಂದಿಗೆ 161ನೇ ಸ್ಥಾನದಲ್ಲಿದೆ.

20.1 ಅಂಕ ಪಡೆದಿರುವ ವಿಯೆಟ್ನಾಂ179, 23.1 ಅಂಕ ಪಡೆದಿರುವ ಬಾಂಗ್ಲಾದೇಶ 178, 24.6 ಅಂಕ ಪಡೆದಿರುವ ಪಾಕಿಸ್ತಾನವು 177ನೇ ಸ್ಥಾನ ಪಡೆದಿವೆ. 18.9 ಅಂಕಗಳನ್ನು ಪಡೆದ ಭಾರತವು 180ನೇ ಸ್ಥಾನದಲ್ಲಿದೆ.

ಭಾರತವು ಮಾಲಿನ್ಯ ನಿಯಂತ್ರಣಕ್ಕಿಂತ, ಆರ್ಥಿಕ ಅಭಿವೃದ್ಧಿಗೆ ಆದ್ಯತೆ ನೀಡಿದೆ. ಹೀಗಾಗಿ ಅತ್ಯಂತ ಕಡಿಮೆ ಅಂಕ ಪಡೆದು ಕೊನೆಯಸ್ಥಾನದಲ್ಲಿದೆ ಎಂದು ಹೇಳಲಾಗಿದೆ. ಪ್ರತಿ ದೇಶಗಳ ಸುಸ್ಥಿರ ಅಭಿವೃದ್ಧಿ ಮಾದರಿ ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆ ನಿಯಂತ್ರಣ ಕ್ರಮ ಪರಿಶೀಲಿಸಿ ಈ ಸೂಚ್ಯಂಕ ನೀಡಲಾಗಿದೆ.

(ಒನ್ಇಂಡಿಯಾ ಸುದ್ದಿ)

Recommended Video

      300 ಅಡಿ ಆಳದ ಬೋರ್ವೆಲ್ ಗೆ ಬಿದ್ದಿದ್ದ 18 ತಿಂಗಳ ಮಗುವಿನ ರಕ್ಷಿಸಿದ ಭಾರತೀಯ ಸೇನೆ | OneIndia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+