ಉತ್ತರ ಸಿಕ್ಕಿಂ ಗಡಿ ಭಾಗದಲ್ಲಿ ಭಾರತ-ಚೀನಿ ಸೈನಿಕರ ಕಿತ್ತಾಟ
ನವದೆಹಲಿ, ಮೇ 10: ಉತ್ತರ ಸಿಕ್ಕಿಂ ಗಡಿ ಭಾಗದಲ್ಲಿ ಭಾರತ-ಚೀನಿ ಸೈನಿಕರು ಕೈ ಕೈ ಮಿಲಾಯಿಸಿದ ಘಟನೆ ನಡೆದಿರುವ ಬಗ್ಗೆ ವರದಿ ಬಂದಿದೆ. ಉತ್ತರ ಸಿಕ್ಕಿಂನ ಭಾರತ-ಚೀನಾ ಗಡಿಯುದ್ದಕ್ಕೂ ಭಾರತದ ಮತ್ತು ಚೀನಾದ ಸೈನಿಕರು ಮುಖಾಮುಖಿಯಾಗಿದ್ದಾರೆ. ಶನಿವಾರದಂದು ನಾಕು ಲಾ ಪಾಸ್ ಬಳಿ ನಡೆದ ಕಿತ್ತಾಟದಲ್ಲಿ ಹಲವರಿಗೆ ಗಾಯಗಳಾಗಿವೆ.
ಸಮುದ್ರಮಟ್ಟದಿಂದ 5,000 ಮೀಟರ್‌ಗಿಂತಲೂ ಹೆಚ್ಚು ಎತ್ತರದಲ್ಲಿರುವ ಮುಗುತಾಂಗ್‌ಗಿಂತ ಮುಂದೆ ನಕು ಲಾ ಸೆಕ್ಟರ್ ಬಳಿ ಎರಡು ಕಡೆಯ ಸೈನಿಕರ ನಡುವೆ ಹಲ್ಲೆ ನಡೆದಿರುವುದನ್ನು ಹೇಳಲು ಇಚ್ಚಿಸದ ಸೇನೆಯ ಅಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸುಮಾರು 150 ಸೈನಿಕರು ಇದ್ದರು, ನಾಲ್ಕು ಭಾರತೀಯ ಸೈನಿಕರು ಮತ್ತು ಏಳು ಚೀನಿ ಸೈನಿಕರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಗಡಿಯಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರು ಹೊಡೆದಾಡಿಕೊಂಡಿರುವುದು ಇದೇ ಮೊದಲಲ್ಲ. 2017 ರ ಸೆಪ್ಟೆಂಬರ್ ತಿಂಗಳಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರು ಪೂರ್ವ ಲಡಾಖ್‌ನ ಪಾಂಗೊಂಗ್ ತ್ಸೋ ಸರೋವರದ ಬಳಿ ಪರಸ್ಪರ ಕಲ್ಲುಗಳನ್ನು ಎಸೆದು ಹೊಡೆದಾಡಿಕೊಂಡಿದ್ದರು.












Click it and Unblock the Notifications