ಕಾಶ್ಮೀರದಲ್ಲಿ ಓರ್ವ ಭಯೋತ್ಪಾದಕನನ್ನು ಸದೆಬಡಿದ ಭಾರತೀಯ ಸೇನೆ
ಬುಡ್ಗಾಂ(ಜಮ್ಮು ಮತ್ತು ಕಾಶ್ಮೀರ), ಜನವರಿ 08: ಜಮ್ಮು-ಕಾಶ್ಮೀರದ ಬುಡ್ಗಾಂ ಜಿಲ್ಲೆಯ ಜುಹಾಮಾ ಎಂಬಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಒಬ್ಬ ಭಯೋತ್ಪಾದಕನನ್ನು ಹತ್ಯೆಗೈಯುವಲ್ಲಿ ಭಾರತೀಯ ಸೇನೆ ಸಫಲವಾಗಿದೆ.
ಡಿ.31 ರಂದು ಇಲ್ಲಿನ ಪುಲ್ವಾಮದ ಸೈನಿಕ ಶಿಬಿರದ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ನಾಲ್ವರು ಭಾರತೀಯ ಯೋಧರು ಹುತಾತ್ಮರಾಗಿದ್ದರು. ಈ ದಾಳಿಯಲ್ಲಿ ಇಬ್ಬರು ಭಯೋತ್ಪಾದಕರನ್ನು ಸದೆಬಡಿಯುವಲ್ಲಿಯೂ ಭಾರತೀಯ ಸೇನೆ ಸಫಲವಾಗಿತ್ತು.

ಈ ಘಟನೆಯ ನಂತರ ಮತ್ತಷ್ಟು ಎಚ್ಚೆತ್ತುಕೊಂಡಿರುವ ಭಾರತೀಯ ಸೇನೆ, ಇಂದು ನಡೆಸಿದ ಎನ್ ಕೌಂಟರ್ ನಲ್ಲಿ ಮತ್ತೊಬ್ಬ ಭಯೋತ್ಪಾದಕನನ್ನು ಹತ್ಯೆಗೈದಿದೆ. ಭಯೋತ್ಪಾದಕ ಯಾವ ಭಯೋತ್ಪಾದಕ ಸಂಘಟನೆಗೆ ಸೇರಿದವನೆಂಬ ಕುರಿತು ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಎನ್ ಕೌಟರ್ ಮುಂದುವರಿದಿದೆ.












Click it and Unblock the Notifications