8 ತಿಂಗಳ ರಜೆ ಹಾಕಿದ ವಿಕ್ರಮಾದಿತ್ಯ, ಪರಿಹಾರ ಏನು?

Written By:
Subscribe to Oneindia Kannada

ಬೆಂಗಳೂರು, ಜುಲೈ, 28: ಭಾರತದ ನೌಕಾಪಡೆಯ ಶಕ್ತಿ ಐಎನ್ ಎಸ್ ವಿಕ್ರಮಾದಿತ್ಯ 8 ತಿಂಗಳು ಕಾಲ ರಜೆ ಮೇಲೆ ತೆರಳಿದ್ದಾನೆ. ಹಾಗಾಗಿ ಭಾರತದ ನೌಕಾಪಡೆಯ ಶಕ್ತಿ ಕೊಂಚ ಕುಗ್ಗಿರುವುದಂತೂ ನಿಜ.

ಇನ್ನು ನಿರ್ಮಾಣ ಹಂತದಲ್ಲಿರುವ ವಿಕ್ರಾಂತ್ 2023 ಕ್ಕೆ ಸೇವೆ ಆರಂಭಿಸಲಿದ್ದಾನೆ. ಈಗ ವಿಕ್ರಮಾದಿತ್ಯ ದುರಸ್ತಿಗೆ ತೆರಳುತ್ತಿದ್ದು ಸೇನೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಿದೆ.[ಬೆಂಗಳೂರಿನ ಕ್ಯಾಪ್ಟನ್ ಹೇಳಿದಂತೆ ಕೇಳಲಿದ್ದಾನೆ 'ವಿಕ್ರಮಾದಿತ್ಯ']

ಸದ್ಯ ಕಾರವಾರ ನೌಕಾನೆಲೆಯಲ್ಲಿ ಐಎನ್ ಎಸ್ ವಿಕ್ರಮಾದಿತ್ಯ ಬೀಡು ಬಿಟ್ಟಿದ್ದ. ಭಾರತದ ವಾಯುಸೇನೆಯ ಅತಿದೊಡ್ಡ ಯುದ್ಧ ನೌಕೆ 'ವಿಕ್ರಮಾದಿತ್ಯ' ರಜೆ ಮೇಲೆ ತೆರಳಿದ್ದು ಒಂದು ಬಗೆಯ ಆತಂಕಕ್ಕೆ ಕಾರಣವಾಗಿದೆ. ಭಾರತೀಯ ಸೇನೆ ಪರ್ಯಾಯ ಪರಿಹಾರ ಕ್ರಮದ ಬಗ್ಗೆಯೂ ಯೋಚನೆ ಮಾಡಿದೆ.

ಚೀನಾದ ಕಿತಾಪತಿ

ಚೀನಾದ ಕಿತಾಪತಿ

ಚೀನಾ ತನ್ನ ದಕ್ಷಿಣ ಸಮುದ್ರ ತೀರದಲ್ಲಿ ವ್ಯಾಪಕ ಚಟುವಟಿಕೆ ನಡೆಸಲು ಆರಂಭಿಸಿದೆ. ಇದೇ ವೇಳೆ ವಿಕ್ರಮಾದಿತ್ಯ ರಜೆ ಮೇಲೆ ತೆರಳಿರುವುದು ಮತ್ತಷ್ಟು ಆತಂಕ ಹೆಚ್ಚಿಸಿದೆ.

3 ಹಡಗು ಬೇಕಿದೆ

3 ಹಡಗು ಬೇಕಿದೆ

ಮೂರು ಯುದ್ಧವಿಮಾನ ಹೊತ್ತೊಯ್ಯುವ ಹಡಗುಗಳು ಬೇಕು ಎಂದು ಸೇನೆ ಮನವಿ ಸಲ್ಲಿಕೆ ಮಾಡಿದೆ. ಪಶ್ಚಿಮ ಮತ್ತು ಪೂರ್ವ ತೀರದ ಕರಾವಳಿಯ ಮೇಲೆ ಕಣ್ಣಿಡಲು ಹಾಗೂ ಒಂದು ಹೆಚ್ಚುವರಿ ಹಡಗು ಬೇಕಿದೆ.

ಅಮೆರಿಕದಿಂದ ನಾಲ್ಕು ಯುದ್ಧ ವಿಮಾನ

ಅಮೆರಿಕದಿಂದ ನಾಲ್ಕು ಯುದ್ಧ ವಿಮಾನ

ಗಂಟೆಗೆ ಸಾವಿರ ಕಿಮೀ ವೇಗದಲ್ಲಿ ಸಂಚರಿಸುವ ನಾಲ್ಕು ಯುದ್ಧ ವಿಮಾನಗಳು ಬೇಕು ಎಂದು ಹೇಳಿರುವ ಸೇನೆಯ ನೆರವಿಗೆ ಧಾವಿಸಿರುವ ಕೇಂದ್ರ ಸರ್ಕಾರ ಅಮೆರಿಕದಿಂದ ನಾಲ್ಕು ಯುದ್ಧ ವಿಮಾನ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ.

ವಿಕ್ರಮಾದಿತ್ಯನ ಶಕ್ತಿ

ವಿಕ್ರಮಾದಿತ್ಯನ ಶಕ್ತಿ

ಯಾವುದೇ ಪ್ರತಿಕೂಲ ಪರಿಸ್ಥಿತಿಯಲ್ಲೂ ಶಸ್ತ್ರಸಜ್ಜಿತ ಯುದ್ಧ ವಿಮಾನವನ್ನು ಸಾಗರದಲ್ಲಿ ಕೊಂಡೊಯ್ಯುವ ಶಕ್ತಿಗೆ ಇನ್ನೊಂದು ಹೆಸರೇ ವಿಕ್ರಮಾದಿತ್ತಯ. 44,570 ಟನ್ ಸಾಮರ್ಥ್ಯದ ಐಎನ್​ಎಸ್ ವಿಕ್ರಮಾದಿತ್ಯ ಎಂಟು ತಿಂಗಳ ರಜೆ ನಂತರ ಮರಳಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
INS Vikramaditya, India's only aircraft carrier will be ready for operations only after eight-month maintenance refit. India thinks of itself as an emerging superpower but does not have a single operational aircraft carrier. In the other hand Indian army thinks about ultranative solution.
Please Wait while comments are loading...