ಪಠಾಣ್‌ಕೋಠ್‌ ದಾಳಿ : ಪಾಕ್‌ಗೆ ಮೂರು ದಿನಗಳ ಗಡುವು

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಜನವರಿ 04 : ಪಂಜಾಬ್‌ನ ಪಠಾಣ್ ಕೋಠ್‌ ವಾಯುನೆಲೆ ಮೇಲೆ ದಾಳಿ ಮಾಡಿದ ಜೈಶ್‌-ಏ-ಮೊಹಮದ್‌ ಉಗ್ರ ಸಂಘಟನೆ ವಿರುದ್ಧ ಮೂರು ದಿನಗಳಲ್ಲಿ ಕ್ರಮ ಕೈಗೊಳ್ಳುವಂತೆ ಭಾರತ ಪಾಕಿಸ್ತಾನಕ್ಕೆ ಸೂಚನೆ ನೀಡಲಿದೆ. ಇಲ್ಲವಾದಲ್ಲಿ ಪಾಕ್ ಜೊತೆಗಿನ ಶಾಂತಿ ಮಾತುಕತೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.

ಪಠಾಣ್ ಕೋಟ್ ಉಗ್ರರ ದಾಳಿಯ ನಂತರ ದೆಹಲಿಯಲ್ಲಿ ನಡೆದ ಎರಡು ಉನ್ನತ ಮಟ್ಟದ ಸಭೆಗಳಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಎರಡು ಸಭೆಗಳು ನಡೆದಿವೆ. [ಪಠಾಣ್ ಕೋಟ್ ದಾಳಿ : ಬೆಂಗಳೂರಿನ ನಿರಂಜನ್ ಹುತಾತ್ಮ]

punjab

ಪಂಜಾಬ್ ಪೊಲೀಸ್, ಕೇಂದ್ರ ಗುಪ್ತಚರ ಇಲಾಖೆ, ರಾಷ್ಟ್ರೀಯ ತನಿಖಾ ದಳ ಪಠಾಣ್ ಕೋಟ್‌ ದಾಳಿಯ ಹಿಂದೆ ಜೈಶ್‌-ಏ-ಮೊಹಮದ್‌ ಉಗ್ರ ಸಂಘಟನೆ ಕೈವಾಡವಿರುವ ಕುರಿತು ಸಾಕ್ಷಿಗಳನ್ನು ಸಂಗ್ರಹಣೆ ಮಾಡಿವೆ. ಇವುಗಳನ್ನು ಪಾಕಿಸ್ತಾನಕ್ಕೆ ನೀಡಿ, ಸಂಘಟನೆ ವಿರುದ್ಧ ಮೂರು ದಿನಗಳಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಭಾರತ ಒತ್ತಾಯಿಸಲಿದೆ. [ವಾಯುನೆಲೆಗೆ ಉಗ್ರರು ನುಗ್ಗಿದ್ದು ಹೇಗೆ?]

ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿರುವ ಜೈಶ್‌-ಏ-ಮೊಹಮದ್‌ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಪಾಕ್ ಜೊತೆಗಿನ ಶಾಂತಿ ಮಾತುಕತೆಯನ್ನು ಸ್ಥಗಿತಗೊಳಿಸಲು ಭಾರತ ನಿರ್ಧರಿಸಿದೆ. ಪಠಾಣ್‌ ಕೋಟ್‌ನಲ್ಲಿ ದಾಳಿ ಮಾಡಿದ ಉಗ್ರರ ದೂರವಾಣಿ ಕರೆ, ಡಿಎನ್‌ಎ ಸ್ಯಾಂಪಲ್‌ಗಳನ್ನು ಸಂಗ್ರಹಣೆ ಮಾಡಲಾಗಿದೆ.

ಜೈಷ್-ಏ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮೌಲನಾ ಮಸೂದ್ ಅಜರ್ ಬಂಧನಕ್ಕೆ ಭಾರತ ಬೇಡಿಕೆ ಇಡಲಿದೆ. ಕಂದಹಾರ್ ವಿಮಾನ ಅಪಹರಣವಾದಾಗ ಭಾರತ ಮಸೂದ್‌ನನ್ನು ಬಿಡುಗಡೆ ಮಾಡಿತ್ತು. ಪಾಕಿಸ್ತಾನಕ್ಕೆ ತೆರಳಿದ ಆತ, ಉಗ್ರ ಸಂಘಟನೆ ಹುಟ್ಟು ಹಾಕಿದ್ದ. ಸಂಸತ್ ಭವನದ ಮೇಲೆ ನಡೆದ ದಾಳಿಯ ಸಂಚು ರೂಪಿಸಿದ್ದು ಇದೇ ಅಜರ್.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
While it was being speculated that India may call off talks with Pakistan following the attack at Pathankot, there is no such decision as yet. In fact India will wait another three days and tell Pakistan to act against the Jaish-e-Mohammad which is responsible for the attack.
Please Wait while comments are loading...